ETV Bharat / state

ಬಿಆರ್​ಟಿಯಲ್ಲಿ ಕಾಣಿಸಿಕೊಂಡ ಬೆಂಕಿ... ನೂರಾರು ಎಕರೆ ಕಾಡು ಭಸ್ಮ! - undefined

ಕಳೆದ ಮೂರು ದಿನಗಳಿಂದ ಬೈಲೂರು ವಲಯದ ಕೌಳೆಹಳ್ಳ ಬೆಟ್ಟ ಹಾಗೂ ಕೊಳ್ಳೇಗಾಲ ವಲಯದ ಆಂಡಿಪಾಳ್ಯದಲ್ಲಿ ಆಗಾಗ್ಗೆ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಬೆಂಕಿ ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹೈರಾಣಾಗಿದ್ದಾರೆ.

ಚಾಮರಾಜನಗರ
author img

By

Published : Apr 15, 2019, 7:34 PM IST

ಚಾಮರಾಜನಗರ: ಬಿಆರ್​ಟಿ ಹುಲಿ ಸಂರಕ್ಷಿತ ಪ್ರದೇಶದ ಬೈಲೂರು ವಲಯದಲ್ಲಿ ಬೆಂಕಿ ಬಿದ್ದಿದ್ದು ನೂರಾರು ಎಕರೆ ಅರಣ್ಯ ನಾಶವಾಗಿದೆ ಎನ್ನಲಾಗ್ತಿದೆ.

ಕಳೆದ ಮೂರು ದಿನಗಳಿಂದ ಬೈಲೂರು ವಲಯದ ಕೌಳೆಹಳ್ಳ ಬೆಟ್ಟ ಹಾಗೂ ಕೊಳ್ಳೇಗಾಲ ವಲಯದ ಆಂಡಿಪಾಳ್ಯದಲ್ಲಿ ಆಗಾಗ್ಗೆ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಈ ಬೆಂಕಿ ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹೈರಾಣಾಗಿದ್ದಾರೆ.

ಬಿಆರ್​ಟಿಯಲ್ಲಿ ಕಾಡಿಗೆ ಬಿದ್ದ ಬೆಂಕಿ- ಸಾವಿರಾರು ಮರಗಳು ಬೆಂಕಿಗಾಹುತಿ

ಮಾವೊತ್ತೂರು, ಕೆ.ಕೆ.ಡ್ಯಾಂ, ನಲ್ಲಿಕತ್ರಿ, ಅಕ್ಕ-ತಂಗಿಯರ ಬೆಟ್ಟ, ಹೊನ್ನೆಬರೆ ಬೆಟ್ಟ, ಕಗಲಿಗುಂದಿ, ಕೊಳದಗುಂಡಿ ಬೆಟ್ಟ ಸೇರಿದಂತೆ ೨೦ ಕ್ಕೂ ಹೆಚ್ಚು ಸ್ಥಳಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.

ಬೆಂಕಿ ಬೀಳದಂತೆ ತಡೆಯಲು ಅರಣ್ಯ ಇಲಾಖೆ ಹರಸಾಹಸಪಡುತ್ತಿದ್ದಾರೆ. ಆದ್ರೆ ಕಿಡಿಗೇಡಿಗಳ ಕೃತ್ಯಕ್ಕೆ ನೂರಾರು ಎಕರೆ ಕಾಡು ಸುಟ್ಟು ಬೂದಿಯಾಗುತ್ತಿದೆ. ಅರಣ್ಯ ಇಲಾಖೆ ಬೇಸಿಗೆ ಕಾಲದಲ್ಲೂ ಹೆಚ್ಚಿನ ಸಿಬ್ಬಂದಿ ನಿಯೋಜಿಸಿಲ್ಲವೆಂದು ಪರಿಸರ ಪ್ರೇಮಿ ಕೃಷ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Intro:ಬಿಆರ್ ಟಿಯಲ್ಲಿ ಬೆಂಕಿ: ನೂರಾರು ಎಕರೆ ಕಾಡು ಭಸ್ಮ!

ಚಾಮರಾಜನಗರ: ಬಿಆರ್ ಟಿ ಹುಲಿ ಸಂರಕ್ಷಿತ ಪ್ರದೇಶದ ಬೈಲೂರು ವಲಯದಲ್ಲಿ ಬೆಂಕಿ ಬಿದ್ದಿದ್ದು ನೂರಾರು ಎಕರೆ ಅರಣ್ಯ ನಾಶವಾಗಿದೆ ಎನ್ನಲಾಗಿದೆ.
Body:
ಕಳೆದ ಮೂರು ದಿನದಿಂದ ಬೈಲೂರು ವಲಯದ ಕೌಳೆಹಳ್ಳ ಬೆಟ್ಟ ಹಾಗೂ ಕೊಳ್ಳೇಗಾಲ ವಲಯದ ಆಂಡಿಪಾಳ್ಯದಲ್ಲಿ ಆಗಾಗ್ಗೆ ಬೆಂಕಿ ಕಾಣಿಸಿಕೊಳ್ಳುತ್ತಿದ್ದು ಬೆಂಕಿ ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹೈರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಮಾವೊತ್ತೂರು, ಕೆ.ಕೆ.ಡ್ಯಾಂ, ನಲ್ಲಿಕತ್ರಿ, ಅಕ್ಕ-ತಂಗಿಯರ ಬೆಟ್ಟ, ಹೊನ್ನೆಬರೆ ಬೆಟ್ಟ, ಕಗಲಿಗುಂದಿ, ಕೊಳದಗುಂಡಿ ಬೆಟ್ಟ ಸೇರಿದಂತೆ ೨೦ ಕ್ಕೂ ಹೆಚ್ಚು ಸ್ಥಳಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.

Conclusion:ಬೆಂಕಿ ಬೀಳದಂತೆ ತಡೆಯಲು ಅರಣ್ಯ ಇಲಾಖೆ ಹರಸಾಹಸ ಪಟ್ಟರು ಸೋಲುತ್ತಿದ್ದು ಕಿಡಿಗೇಡಿಗಳ ಕೃತ್ಯಕ್ಕೆ ನೂರಾರು ಎಕರೆ ಕಾಡು ಸುಟ್ಟು ಬೂದಿಯಾಗುತ್ತಿದೆ, ಅರಣ್ಯ ಇಲಾಖೆ ಬೇಸಿಗೆ ಕಾಲದಲ್ಲೂ ಹೆಚ್ಚಿನ ಸಿಬ್ಬಂದಿ ನಿಯೋಜಿಸಿಲ್ಲ ಎಂದು ಪರಿಸರಪ್ರೇಮಿ ಕೃಷ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.