ಚಾಮರಾಜನಗರ: ಕೌಟುಂಬಿಕ ಕಲಹದಿಂದ ಬೇಸತ್ತ ವ್ಯಕ್ತಿಯೋರ್ವ ವಿಷ ಸೇವಿಸಿ ಮೃತಪಟ್ಟಿರುವ ಘಟನೆ ತೆರಕಣಾಂಬಿ ಸಮೀಪದ ಹುಲುಗನಮುರುಡಿ ಬೆಟ್ಟದ ಸಮೀಪ ನಡೆದಿದೆ.
ಇಲ್ಲಿನ ಕುಮಚಹಳ್ಳಿ ನಿವಾಸಿ ಶಿವಲಿಂಗಪ್ಪ (60) ಮೃತಪಟ್ಟ ದುರ್ದೈವಿ. ಸಾಲದಿಂದ ಕೊಂಡುಕೊಂಡಿದ್ದ ಜೆಸಿಬಿ ವಿಚಾರಕ್ಕೆ ಮಗನೊಂದಿಗೆ ಜಗಳವಾಡಿ ಮನನೊಂದು ಡಿಸೆಂಬರ್ 14ರಂದು ನಾಪತ್ತೆಯಾಗಿದ್ದರು ಎನ್ನಲಾಗಿದೆ.
ಗ್ರಾಮದಲ್ಲಿರುವ ಮಠಕ್ಕೆ ತೆರಳುತ್ತೇನೆಂದು ಮನೆಯವರಿಗೆ ಹೇಳಿ ಬಂದಿದ್ದ ಶಿವಲಿಂಗಪ್ಪ ಬೆಟ್ಟದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.
ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತೆರಕಣಾಂಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.