ETV Bharat / state

Watch: ಬಾಳೆಗಾಗಿ ಬೊಲೆರೊ ಏರಿದ ಒಂಟಿ ಸಲಗ: ಹಾರ್ನ್​ಗೆ ಬೆಚ್ಚಿ ಜನರನ್ನು ಅಟ್ಟಾಡಿಸಿದ ಗಜರಾಜ - ಒಂಟಿ ಸಲಗ ದಾಂಧಲೆ

ಒಂಟಿ ಸಲಗವೊಂದು ಬೊಲೆರೊ ವಾಹನ ಅಡ್ಡಗಟ್ಟಿ ಬಾಳೆ ತಿನ್ನಲು ಪ್ರಯತ್ನಿಸಿದ ಘಟನೆ ತಮಿಳುನಾಡಿನ ಬಣ್ಣಾರಿ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಬಳಿ ನಡೆದಿದೆ.

Elephant
ಜನರನ್ನು ಅಟ್ಟಾಡಿಸಿದ ಗಜರಾಜ
author img

By

Published : Oct 9, 2021, 1:39 PM IST

ಚಾಮರಾಜನಗರ: ಬಾಳೆ ಸಾಗಿಸುತ್ತಿದ್ದ ಬೊಲೆರೊ ವಾಹನವನ್ನು ಅಡ್ಡಗಟ್ಟಿ ಒಂಟಿ ಸಲಗ ದಾಂಧಲೆ ನಡೆಸಿರುವ ಘಟನೆ ತಮಿಳುನಾಡಿನ ಬಣ್ಣಾರಿ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಬಳಿ ಶುಕ್ರವಾರ ನಡೆದಿದೆ.

ತಮಿಳುನಾಡಿನಿಂದ ಮೈಸೂರಿನ ಬಾಳೆಮಂಡಿಗೆ ಬೊಲೆರೊ ವಾಹನದಲ್ಲಿ ಬಾಳೆ ತರಲಾಗುತ್ತಿತ್ತು. ಈ ವೇಳೆ ವಾಹನವನ್ನು ತಡೆದ ಗಜರಾಜ, ಪಿಕಪ್​ ಮೇಲೆ ಹತ್ತಿ ಹಣ್ಣು ತಿನ್ನಲು ಸರ್ವ ಪ್ರಯತ್ನ ನಡೆಸಿದೆ. ಆದರೆ ಟಾರ್ಪಲ್ ಕಟ್ಟಿದ್ದರಿಂದ ಹಣ್ಣು ತಿನ್ನಲಾಗದೆ ವಾಹನವನ್ನು ಅಲುಗಾಡಿಸಿದೆ.

ಜನರನ್ನು ಅಟ್ಟಾಡಿಸಿದ ಗಜರಾಜ

ಆನೆ ಕಂಡ ಇತರೆ ವಾಹನ ಸವಾರರು ಜೋರಾಗಿ ಹಾರ್ನ್​ ಮಾಡಿದ್ದಾರೆ. ಹಾರ್ನ್ ಶಬ್ದಕ್ಕೆ ಬೆಚ್ಚಿದ ಆನೆ ವಿಡಿಯೋ, ಫೋಟೋ ತೆಗೆಯುತ್ತಿದ್ದ ಜನರನ್ನು ಅಟ್ಟಾಡಿಸಿದೆ. ಕೊನೆಗೆ ಅರಣ್ಯ ಇಲಾಖೆ ಸಿಬ್ಬಂದಿ ಪ್ರಯಾಸಪಟ್ಟು ಆನೆಯನ್ನು ಕಾಡಿಗಟ್ಟಿದ್ದು, ಒಂದೂವರೆ ತಾಸು ಬೆಂಗಳೂರು-ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್​ ಉಂಟಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.