ಚಾಮರಾಜನಗರ: ಆಹಾರ ಅರಸಿ ಗಡಿಭಾಗ ಯರಗನಹಳ್ಳಿಯ ಕಬ್ಬಿನ ಗದ್ದೆಗೆ ಬಂದಿದ್ದ ಒಂಟಿ ಸಲಗವನ್ನು ಟ್ರಾಕ್ಟರ್ನಲ್ಲಿ ಚೇಸ್ ಮಾಡಿ ರೈತರು ಕಾಡಿಗಟ್ಟುವಲ್ಲಿ ಯಶ್ವಸಿಯಾಗಿದ್ದಾರೆ.
ಆಹಾರ, ನೀರು ಅರಸಿ ಸೆಂಥಿಲ್ ಎಂಬವರ ಕಬ್ಬಿನ ಗದ್ದೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿತ್ತು. ಇದರಿಂದ ಆತಂಕಗೊಂಡ ರೈತರು ಯುವಕರ ಜೊತೆ ಗೂಡಿ ಟ್ರಾಕ್ಟರ್ನಲ್ಲಿ ಚೇಸ್ ಮಾಡಿ ಕಾಡಿಗೆ ಅಟ್ಟಿದ್ದಾರೆ.=
ಈ ಕುರಿತು ಸ್ಥಳೀಯರಾದ ನಾಗೇಂದ್ರ ಈಟಿವಿಯೊಂದಿಗೆ ಮಾತನಾಡಿ ಬೇಸಿಗೆ ಹಿನ್ನೆಲೆಯಲ್ಲಿ ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗಿದೆ. ಆನೆಗಳು ಹೊಲಗಳಿಗೆ ಲಗ್ಗೆಯಿಟ್ಟರೆ ಟ್ರ್ಯಾಕ್ಟರ್,ಬೈಕ್ನಲ್ಲಿ ಹಾರ್ನ್ ಮಾಡುತ್ತ ಕಾಡಿ ಗಟ್ಟುತ್ತೇವೆ ಅರಣ್ಯ ಇಲಾಖೆ ರೈಲ್ವೆ ಕಂಬಿಗಳನ್ನು ಅಳವಡಿಸಿ ನಾಡಿನತ್ತ ಕಾಡು ಪ್ರಾಣಿಗಳು ಬರುವುದನ್ನು ತಡೆಯಬೇಕೆಂದು ಅವರು ಒತ್ತಾಯಿಸಿದ್ದಾರೆ.