ETV Bharat / state

ಗುಂಡ್ಲುಪೇಟೆ: ನೆಲಗಡಲೆ ತಿನ್ನಲು ಬಂದ ಆನೆ ಅಕ್ರಮ ವಿದ್ಯುತ್ ಗೆ ಬಲಿ! - ನೆಲಗಡಲೆ ತಿನ್ನಲು ಬಂದ ಆನೆ ಅಕ್ರಮ ವಿದ್ಯುತ್​ಗೆ ಬಲಿ

ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಆಲತ್ತೂರು ಎಂಬ ಗ್ರಾಮದಲ್ಲಿ ಅಕ್ರಮ ವಿದ್ಯುತ್​ ತಗುಲಿ ಹೆಣ್ಣಾನೆಯೊಂದು ಮೃತಪಟ್ಟಿದೆ.

Elephant dies
ನೆಲಗಡಲೆ ತಿನ್ನಲು ಬಂದ ಆನೆ ಅಕ್ರಮ ವಿದ್ಯುತ್​ಗೆ ಬಲಿ
author img

By

Published : Jul 15, 2021, 1:10 PM IST

ಚಾಮರಾಜನಗರ: ಓಂಕಾರ್​ ಅರಣ್ಯ ವಲಯದಲ್ಲೊಂದು ಅವಘಡ ಸಂಭವಿಸಿದೆ. ಆಹಾರ ಅರಸಿ ಬಂದಿದ್ದ ಹೆಣ್ಣಾನೆಯೊಂದು ನೆಲಗಡಲೆ ತಿನ್ನಲು ಹೋಗಿ ಅಕ್ರಮ ವಿದ್ಯುತ್​ಗೆ ಬಲಿಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಆಲತ್ತೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಜಗನ್ನಾಥ್ ಎಂಬವರು ಬೆಳೆ ರಕ್ಷಣೆಗಾಗಿ ಅಳವಡಿಸಿದ್ದ ಅಕ್ರಮ ವಿದ್ಯುತ್ ಪ್ರವಹಿಸಿ ಹೆಣ್ಣಾನೆ ಮೃತಪಟ್ಟಿದ್ದು, ಆನೆಗೆ 40 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ. ಈ ಗ್ರಾಮವು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ಅರಣ್ಯ ವಲಯ ವ್ಯಾಪ್ತಿಗೆ ಬರಲಿದ್ದು, ಸ್ಥಳಕ್ಕೆ ಅಧಿಕಾರಿಗಳು ತೆರಳಿದ್ದಾರೆ.

ಆನೆಯ ಮರಣೋತ್ತರ ಪರೀಕ್ಷೆ ಇನ್ನಷ್ಟೇ ನಡೆಯಬೇಕಿದ್ದು, ಜಮೀನು ಮಾಲೀಕರನ್ನು ವಶಕ್ಕೆ ಪಡೆಯಲು ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ.

ಇದನ್ನೂ ಓದಿ: ಕೊಳ್ಳೇಗಾಲ: ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ SSLC ವಿದ್ಯಾರ್ಥಿನಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.