ETV Bharat / state

ಆನೆದಾಳಿಗೆ ರೈತ ಬಲಿ: ಗ್ರಾಮದಲ್ಲಿ ಮನೆ ಮಾಡಿದ ಭೀತಿ - undefined

ಚಾಮರಾಜನಗರದಲ್ಲಿ ವನ್ಯಜೀವಿ - ಮಾನವ ಸಂಘರ್ಷದ ಹಿನ್ನೆಲೆಯಲ್ಲಿ ಸಾವು - ನೋವಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ಗುಂಡ್ಲುಪೇಟೆ ತಾಲೂಕಿನ ಬಾಚಹಳ್ಳಿಯಲ್ಲಿ ರೈತನೊಬ್ಬ ಆನೆ ದಾಳಿಗೆ ಬಲಿಯಾಗಿದ್ದಾನೆ.

ಆನೆದಾಳಿಗೆ ರೈತನೋರ್ವ ಬಲಿ
author img

By

Published : Jul 12, 2019, 1:36 PM IST

ಚಾಮರಾಜನಗರ: ಆನೆದಾಳಿಗೆ ರೈತನೊಬ್ಬ ಬಲಿಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಾಚಹಳ್ಳಿಯಲ್ಲಿ ನಡೆದಿದೆ.

ವನ್ಯಜೀವಿ - ಮಾನವ ಸಂಘರ್ಷಕ್ಕೆ ಸಂಬಂಧಿಸಿದಂತೆ 3 ದಿನದಲ್ಲಿ 3ನೇ ಪ್ರಕರಣ ವರದಿಯಾಗಿದ್ದು, ಗುರುವಾರ ರಾತ್ರಿ ಬೆಳೆ ಕಾವಲಿಗೆ ತೆರಳಿದ್ದ ಚಿಕ್ಕಕೂಸೇಗೌಡ (52) ಆನೆದಾಳಿಗೊಳಗಾಗಿ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಗುಂಡ್ಲುಪೇಟೆ ಅರಣ್ಯಾಧಿಕಾರಿಗಳು ಹಾಗೂ ಪೊಲೀಸರ ಭೇಟಿ ನೀಡಿದ್ದಾರೆ.

ಕಳೆದ ಮೂರು ದಿನದ ಹಿಂದೆ ಮಲೆಮಹದೇಶ್ವರ ಬೆಟ್ಟ ತಪ್ಪಲಿನಲ್ಲಿ ಮಳವಳ್ಳಿ ಬಾಬು ಎಂಬಾತನನ್ನು ಸಲಗವೊಂದು ಕೊಂದಿತ್ತು. ಅಲ್ಲದೇ, ಎರಡು ದಿನದ ಹಿಂದೆ ನಾಗಮಲೆ ದಾರಿಯಲ್ಲಿ ಸಲಗವೊಂದು ಭಕ್ತನೊಬ್ಬನನ್ನು ಗಂಭೀರವಾಗಿ ಗಾಯಗೊಳಿಸಿತ್ತು. ಇದೀಗ ರೈತನ ಪ್ರಕರಣ ದಾಖಲಾಗಿದೆ . ಹೀಗಾಗಿ ಈ ಭಾಗದ ಗ್ರಾಮಗಳಲ್ಲಿ ಭೀತಿಯ ವಾತಾವರಣ ನೆಲೆಸಿದೆ.

Intro:ಹೆಚ್ಚುತ್ತಿದೆ ವನ್ಯಜೀವಿ-ಮಾನವ ಸಂಘರ್ಷ: ಜಮೀನು ಕಾಯುತ್ತಿದ್ದ ರೈತ ಆನೆದಾಳಿಗೆ ಬಲಿ

ಚಾಮರಾಜನಗರ:
ವನ್ಯಜೀವಿ-ಮಾನವ ಸಂಘರ್ಷ ಸಂಬಂಧಿಸಿದಂತೆ ೩ ದಿನದಲ್ಲಿ ೩ನೇ ಪ್ರಕರಣ ವರದಿಯಾಗಿದ್ದು ಗುಂಡ್ಲುಪೇಟೆ ತಾಲೂಕಿನ ಬಾಚಹಳ್ಳಿಯಲ್ಲಿ ಆನೆದಾಳಿಗೆ ರೈತನೋರ್ವ ಬಲಿಯಾಗಿದ್ದಾನೆ.

Body:ಚಿಕ್ಕಕೂಸೇಗೌಡ(೫೨) ಮೃತಪಟ್ಟಿರುವ ರೈತ. ಗುರುವಾರ ರಾತ್ರಿ ಬೆಳೆ ಕಾವಲಿಗೆ ತೆರಳಿದ್ದ ವೇಳೆ ಆನೆದಾಳಿಗೊಳಗಾಗಿ ಮೃತಪಟ್ಟಿದ್ದಾನೆ.

ಸ್ಥಳಕ್ಕೆ ಗುಂಡ್ಲುಪೇಟೆ ಅರಣ್ಯಾಧಿಕಾರಿಗಳು ಹಾಗೂ ಪೊಲೀಸರ ಭೇಟಿ ನೀಡಿದ್ದಾರೆ.

Conclusion:ಕಳೆದ ಮೂರು ದಿನದ ಹಿಂದೆ ಮಲೆಮಹದೇಶ್ವರ ಬೆಟ್ಟ ತಪ್ಪಲಿನಲ್ಲಿ ಮಳವಳ್ಳಿ ಬಾಬು ಎಂಬಾತನನ್ನು ಸಲಗವೊಂದು ಕೊಂದಿತ್ತುಮ ೨ ದಿನದ ಹಿಂದೆ ನಾಗಮಲೆ ದಾರಿಯಲ್ಲಿ ಸಲಗವೊಂದು ಭಕ್ತನೊಬ್ಬನನ್ನು ಗಂಭೀರವಾಗಿ ಗಾಯಗೊಳಿಸಿತ್ತು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.