ಚಾಮರಾಜನಗರ: ಮಾಜಿ ಸಿಎಂ ಸಿದ್ದರಾಮಯ್ಯ ವ್ಯಾಕರಣ ಪರಿಣತರು. ಅವರ ಭಾಷೆಯಲ್ಲಿ ದರಿದ್ರ ಏನು ಎಂಬುದು ಗೊತ್ತಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ದರಿದ್ರ ಸರ್ಕಾರ ಎಂದಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ಸರ್ವರ ಹಿತಕ್ಕಾಗಿ ಕೆಲಸ ಮಾಡಲಿದೆ. ಈಗಿರುವ ದಾರಿದ್ರ್ಯತೆ ನಿರ್ಮೂಲನೆ ಮಾಡಲು ಪಣತೊಟ್ಟಿದೆ ಎಂದು ತಿರುಗೇಟು ನೀಡಿದರು.
ಒಂದು ವರ್ಷದಲ್ಲಿ ಸರ್ಕಾರ ಬೀಳಲಿದೆ ಎಂದು ಎಂದು ಭವಿಷ್ಯ ನುಡಿದಿದ್ದ ವಾಟಾಳ್ ನಾಗರಾಜ್ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರ ಮನೆ ಮುಂದೆ ಸಾಕಷ್ಟು ಬಾರಿ ಓಡಾಡಿದ್ದೇನೆ. ಆದರೆ, ಅವರ ಮುನೆ ಮುಂದೆ ಎಲ್ಲೂ ಭವಿಷ್ಯ ಹೇಳಲಾಗುತ್ತದೆ ಎಂದು ಬೋರ್ಡ್ ಹಾಕಿರಲಿಲ್ಲ ಎಂದು ಕುಟುಕಿದರು.
ಕಾರ್ಮಿಕ ಇಲಾಖೆಯನ್ನು ನನಗೆ ಹೆಚ್ಚುವರಿಯಾಗಿ ನೀಡಲಾಗಿತ್ತು. ಈಗ ಶಿವರಾಂ ಹೆಬ್ಬಾರ್ ಅವರಿಗೆ ಕೊಟ್ಟಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಶಾಲಾ ವಾಸ್ತವ್ಯ: ಇಂದು ರಾತ್ರಿ ಹನೂರು ತಾಲೂಕಿನ ಕಾಡಂಚಿನ ಗ್ರಾಮ ಪಚ್ಚೆದೊಡ್ಡಿಯಲ್ಲಿ ಶಾಲೆಯಲ್ಲಿ ಸುರೇಶ್ ಕುಮಾರ್ ಅವರು ವಾಸ್ತವ್ಯ ಹೂಡಲಿದ್ದಾರೆ. ಮಂಗಳವಾರ ಅಧಿಕಾರಿಗಳೊಂದಿಗೆ ಕೆಡಿಪಿ ಸಭೆ ನಡೆಸಲಿದ್ದಾರೆ.