ಚಾಮರಾಜನಗರ: ವಾಹನ ತಂದರೆ ಜಪ್ತಿ ಎಂಬ ಎಚ್ಚರಿಕೆ ನೀಡಿದ್ದ ಚಾಮರಾಜನಗರ ಎಸ್ಪಿ ಅವರ ಮಾತನ್ನು ಜನರು ಗಾಳಿಗೆ ತೂರಿದ್ದು, ಜಾತ್ರೆಗೆ ತೆರಳಿದಂತೆ ವಾಹನ ಸಂಚಾರ ಬೆಳಗ್ಗೆ 8.30 ಆದರೂ ಕಂಡುಬಂದಿದೆ. ಎಂದಿನಂತೆ ದಿನನಿತ್ಯದ ಚಟುವಟಿಕೆ ನಡೆಯುತ್ತಿದ್ದು, ಜನರು ಕೊರೊನಾ ಭಯ ಮರೆತು ವ್ಯವಹಾರ ನಡೆಸುತ್ತಿದ್ದಾರೆ. ಮೊದಲ ದಿನದ ಲಾಕ್ಡೌನ್ಗೆ ವಾಹನ ರಸ್ತೆಗೆ ಇಳಿಸಬೇಡಿ ಎಂಬ ಎಚ್ಚರಿಕೆ ಮಾತನ್ನು ಜನರು ತಲೆಗೆ ಹಾಕಿಕೊಂಡಂತೆ ಕಾಣಿಸುತ್ತಿಲ್ಲ.
ಖಾಸಗಿ ಕ್ಲಿನಿಕ್ ಮುಂದೆ ಟೋಕನ್ಗೆ ಕಿತ್ತಾಟ:
ಭುವನೇಶ್ವರಿ ವೃತ್ತದ ಸಮೀಪವಿರುವ ಶ್ವೇತಾದ್ರಿ ಕ್ಲಿನಿಕ್ಗೆ ಬಂದಿದ್ದ ಸುತ್ತಮುತ್ತಲಿನ ಗ್ರಾಮದ 100ಕ್ಕೂ ಹೆಚ್ಚು ರೋಗಿಗಳ ಸಂಬಂಧಿಗಳು ಟೋಕನ್ಗೆ ಮುಗಿಬಿದ್ದರು. ಸರ್ಕಾರಿ ಚಿಕಿತ್ಸೆಗೂ ಮುನ್ನ ಕೊರೊನಾ ಟೆಸ್ಟ್ ಕಡ್ಡಾಯಗೊಳಿಸಿರುವುದರಿಂದ ಖಾಸಗಿ ಕ್ಲಿನಿಕ್ಗಳತ್ತ ಜನರು ಮುಖ ಮಾಡಿದ್ದು ಜನಜಾತ್ರೆಯೇ ಸೇರುತ್ತಿದೆ. ರೋಗಿಗಳ ಸಂಬಂಧಿಕರ ಕಿತ್ತಾಟ ಗಮನಿಸಿದ ಪೊಲೀಸರು ಮತ್ತು ಸುರಕ್ಷಾ ಪಡೆ ಸಿಬ್ಬಂದಿ ಸ್ಥಳಕ್ಕಾಗಮಿಸಿ ಸರದಿ ಸಾಲಿನಲ್ಲಿ ಟೋಕನ್ ತೆಗೆದುಕೊಳ್ಳಲು ವ್ಯವಸ್ಥೆ ಮಾಡಿದರು. ಇನ್ನು, ಹತ್ತಾರು ಮಂದಿ ಟೋಕನ್ ಸಿಗದೇ ಸ್ಥಳದಲ್ಲೇ ಕಾದು ಕುಳಿತಿದ್ದಾರೆ.
ಓದಿ : ಲಾಕ್ಡೌನ್ ಹಿನ್ನೆಲೆ ಇಡೀ ದಿನ ಕೋವಿಡ್ ನಿಯಂತ್ರಣ ಸಂಬಂಧಿತ ಸರಣಿ ಸಭೆಯಲ್ಲಿ ಸಿಎಂ ಬ್ಯುಸಿ