ETV Bharat / state

ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಯಿ ಬೇಟೆಯಾಡಿದ ಹುಲಿ : ಜನರನ್ನು ಕಂಡು ಪರಾರಿ - chamarajanagara tiger hunting news 2021

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ಅರಣ್ಯ ವಲಯ ವ್ಯಾಪ್ತಿಗೆ ಈ‌ ಗ್ರಾಮ ಬರಲಿದೆ. ಅಲ್ಲಿನ‌ ಆರ್​ಎಫ್ಒ ಅವರಿಗೆ ನಾಲ್ಕೈದು ಬಾರಿ ಜಮೀನು ಮಾಲೀಕ ಮಹೇಶ್ ಮಾಹಿತಿ ನೀಡಿದ್ದಾರೆ..

tiger
ಹುಲಿ
author img

By

Published : Jul 18, 2021, 9:24 PM IST

ಚಾಮರಾಜನಗರ : ಹಾಡಹಗಲೇ ಹುಲಿಯೊಂದು ಸಾಕು ನಾಯಿಯನ್ನು ಹೊತ್ತೊಯ್ದು ತಿಂದು ಹಾಕಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ರಸ್ತೆಯಲ್ಲಿರುವ ಮಾದಪಟ್ಟಣ ಎಂಬ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮಹೇಶ್ ಎಂಬುವರ ಜಮೀನಿನಲ್ಲಿ ಕಟ್ಟಿ ಹಾಕಿದ್ದ ನಾಯಿಯನ್ನು ಹುಲಿ ಬೇಟೆಯಾಡಿದೆ. ನಂತರ ಅದು ರಸ್ತೆಬದಿಯಲ್ಲೇ ತಿನ್ನುತ್ತ ಕುಳಿತಿದೆ. ಆಗ ಒಮ್ಮೆಲೇ ಜನರ ಓಡಾಟ ಕಂಡು ಪರಾರಿಯಾಗಿದೆ. ಈ ದೃಶ್ಯವನ್ನು ಜಮೀನು ಮಾಲೀಕ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಯಿ ಬೇಟೆಯಾಡಿದ ಹುಲಿರಾಯ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ಅರಣ್ಯ ವಲಯ ವ್ಯಾಪ್ತಿಗೆ ಈ‌ ಗ್ರಾಮ ಬರಲಿದೆ. ಅಲ್ಲಿನ‌ ಆರ್​ಎಫ್ಒ ಅವರಿಗೆ ನಾಲ್ಕೈದು ಬಾರಿ ಜಮೀನು ಮಾಲೀಕ ಮಹೇಶ್ ಮಾಹಿತಿ ನೀಡಿದ್ದಾರೆ. ಆದರೂ ಅವರು ಸ್ಥಳಕ್ಕೆ ಬಂದಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.‌ 15 ದಿನಗಳ ಹಿಂದೆ‌‌ ಚಿರತೆಗಳ‌ ಓಡಾಟವೂ ಕಂಡು ಬಂದಿತ್ತು.‌ ಈಗ ಹುಲಿ ಪ್ರತ್ಯಕ್ಷವಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಓದಿ: ರಾಜ್ಯದಲ್ಲಿ ಕೊರೊನಾ ಹೊಸ ಕೇಸ್​ ಮತ್ತಷ್ಟು ಇಳಿಕೆ.. ಸೋಂಕಿತರಿಗಿಂತ ಗುಣಮುಖರಾದವರೇ ಹೆಚ್ಚು..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.