ಚಾಮರಾಜನಗರ: ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನಗರದ ಮಾರುಕಟ್ಟೆ ಮುಂಭಾಗ ಸೋಮವಾರ ಡಿಸ್ ಇನ್ಫೆಕ್ಷನ್ ಟನಲ್ ಆರಂಭಿಸಲಾಗಿದೆ.
ತರಕಾರಿ ಕೊಳ್ಳುವಾಗ, ಜನ ಸಂಚಾರ ಹೆಚ್ಚಿರುವ ವೇಳೆಯಲ್ಲಿ ಇದನ್ನು ಆರಂಭ ಮಾಡಲಾಗುತ್ತದೆ. ವೈರಾಣುಗಳು ಹರಡುವುದನ್ನು ಈ ಟನಲ್ ತಡೆಗಟ್ಟಲಿದೆ ಎಂದು ಡಿಸಿ ಡಾ. ಎಂ.ಆರ್.ರವಿ ತಿಳಿಸಿದ್ರು. ಜಿಲ್ಲೆಯ ಎಲ್ಲಾ ಎಪಿಎಂಸಿಗಳು ಹಾಗೂ ಪುಣಜನೂರು ಚೆಕ್ ಪೋಸ್ಟ್ನಲ್ಲಿ ಶೀಘ್ರ ಆರಂಭಿಸಲಾಗುವುದು ಎಂದು ತಿಳಿಸಿದರು.
ಟನಲ್ ಮೂಲಕ ಜನರು ಹಾದು ಹೋದಾಗ ಔಷಧ ಸಿಂಪಡಣೆಯಿಂದ ದೇಹದ ಮೇಲಿನ ವೈರಾಣುಗಳು ನಾಶವಾಗಲಿದ್ದು, ತಾತ್ಕಾಲಿಕವಾಗಿ ರೋಗ ಹರಡುವುದನ್ನು ಇದು ತಡೆಗಟ್ಟಲಿದೆ ಎಂದು ನಗರಸಭೆ ಅಧಿಕಾರಿಗಳು ಮಾಹಿತಿ ನೀಡಿದರು.
ಮಾರುಕಟ್ಟೆಗೆ ಬರುವ ಗ್ರಾಹಕರು, ದಿನಸಿ ಕೊಳ್ಳಲು ಬರುವವರು ಟನಲ್ನಲ್ಲಿ ಹಾದು ಹೋಗಿ ಔಷಧ ಸಿಂಪಡಣೆಯ ಹೊಸ ಅನುಭವ ಪಡೆದರೆ, ಕೆಲವರು ಸೆಲ್ಫಿ, ವಿಡಿಯೋ ಮಾಡಿ ಲಾಕ್ಡೌನ್ನಲ್ಲೂ ಸಂಭ್ರಮ ಪಟ್ಟರು.