ಕೊಳ್ಳೇಗಾಲ (ಚಾಮರಾಜನಗರ) : ಅಕ್ರಮವಾಗಿ ಸಿಡಿಮದ್ದುಗಳನ್ನು ತಯಾರಿಸಿ ಬೇಟೆಗೆ ಒಯ್ಯುತ್ತಿದ್ದ ವ್ಯಕ್ತಿಯನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಮೇಗಲದೊಡ್ಡಿಯ ಜೋಸೆಫ್ (64) ಬಂಧಿತ ಆರೋಪಿ. ಈತ ಕಾಡು ಪ್ರಾಣಿಗಳನ್ನು ಭೇಟೆಯಾಡುವ ಸಲುವಾಗಿ ಸಿಡಿಮದ್ದು ತಯಾರಿಸಿಕೊಂಡು ಮನೆಯಿಂದ ಹೊರಟಿದ್ದ. ಈ ಬಗ್ಗೆ ಮಾಹಿತಿ ಪಡೆದ ಅರಣ್ಯ ಸಂಚಾರಿ ದಳದ ಎಸ್ಐ ಮುದ್ದುಮಾದೇವ ಸಿಬ್ಬಂದಿ ಮಡಕೇರಿ ಅರಣ್ಯ ಸಂಚಾರಿ ಘಟಕದ ಎಸ್ಪಿ ಸುರೇಶ್ ಬಾಬು ಮಾರ್ಗದರ್ಶನದಂತೆ ಕಾರ್ಯಾಚರಣೆ ನಡೆಸಿ, ಸಿಡಿಮದ್ದು ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ಹುಲಿ ಬೇಟೆಗಾರರು ಅರೆಸ್ಟ್: 10 ಲಕ್ಷ ರೂ. ಮೌಲ್ಯದ ವಸ್ತುಗಳು ವಶಕ್ಕೆ
ಬಂಧಿತನಿಂದ 25 ಸಿಡಿ ಮದ್ದುಗಳು, 6 ಕೇಪು, 36 ಖಾಲಿ ಕೇಪು, 2 ತಲೆ ಬ್ಯಾಟರಿ, 2 ಚಾರ್ಜರ್, 1 ಟಿವಿಎಸ್ ಬೈಕ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಗ್ರಾಮಾಂತರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದ್ದು, ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಅರಣ್ಯ ಸಂಚಾರ ದಳದ ಮುಖ್ಯಪೇದೆ ಲೋಕೇಶ್, ಬಸವರಾಜು, ಶಂಕರ್, ಸ್ವಾಮಿ, ಕುಮಾರಸ್ವಾಮಿ, ತಖೀವುಲ್ಲಾ, ರಾಮಚಂದ್ರ ಇದ್ದರು.