ಚಾಮರಾಜನಗರ: ಯುವತಿಯೊಬ್ಬಳನ್ನು ಟ್ಯಾಂಕ್ ಮೇಲೆ ಕೂರಿಸಿಕೊಂಡು ಬೈಕ್ ಸವಾರಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನನ್ನು ವಶಕ್ಕೆ ಪಡೆಯಲಾಗಿದೆ. ಹೆಚ್.ಡಿ.ಕೋಟೆ ತಾಲ್ಲೂಕಿನ ಗ್ರಾಮವೊಂದರ ಸ್ವಾಮಿ ಎಂಬಾತ ಬೇಜವಾಬ್ದಾರಿ ಪ್ರದರ್ಶಿಸಿದ ಯುವಕ.
ಗುರುವಾರ ಮಧ್ಯಾಹ್ನ 2ರ ಸಮಯದಲ್ಲಿ ಚಾಮರಾಜನಗರ –ಗುಂಡ್ಲುಪೇಟೆ ಮುಖ್ಯರಸ್ತೆ ಯಡಪುರ ಗ್ರಾಮದ ಬಳಿ ಈತ ತನ್ನ ಬೈಕಿನ ಪೆಟ್ರೋಲ್ ಟ್ಯಾಂಕಿನಲ್ಲಿ ಯುವತಿಯನ್ನು ಕೂರಿಸಿಕೊಂಡು ಬೈಕ್ ಓಡಿಸಿದ್ದಾನೆ. ಅಪಾಯಕಾರಿ ರೈಡಿಂಗ್ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ಲಾತ್ತು.
ಚಾಮರಾಜನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಇಂದು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಕಲಂ 279 ಐಪಿಸಿ ಮತ್ತು 184 ಐಎಂವಿ ಆಕ್ಟ್ ರೀತ್ಯ ಪ್ರಕರಣ ದಾಖಲಿಸಿ ಯುವಕನನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಚಾಮರಾಜನಗರದಲ್ಲಿ ಚಲಿಸುವ ಬೈಕ್ ಮೇಲೆಯೇ ರೊಮ್ಯಾನ್ಸ್..ಯುವತಿಯನ್ನು ಟ್ಯಾಂಕ್ ಮೇಲೆ ಕೂರಿಸಿಕೊಂಡು ಹುಚ್ಚಾಟ!!