ETV Bharat / state

ಬಂಡೀಪುರದಲ್ಲಿನ 8 ಅಕ್ರಮ ಕಟ್ಟಡಗಳ‌ ತೆರವಿಗೆ ಡಿಸಿ ನೋಟಿಸ್: ವ್ಯಕ್ತಿ ವಿರುದ್ದ ಕ್ರಿಮಿನಲ್ ಕೇಸ್ - Chamarajanagar DC notices eviction of 8 illegal buildings News

ಪ್ರವಾಸೋದ್ಯಮ ಇಲಾಖೆ ಅನುಮತಿ ಪಡೆದ ಬಳಿಕ ಭೂ ಪರಿವರ್ತನೆ ಮಾಡದೇ ನಿರ್ಮಿಸಿರುವ 3 ಹೋಂ ಸ್ಟೇಗಳಿಗೆ ನೀಡಿದ್ದ ಅನುಮತಿ ವಾಪಸ್ ಪಡೆದಿದ್ದಾರೆ. ಅನುಮತಿ ಪಡೆಯದ ಇನ್ನೊಂದು ಹೋಂ ಸ್ಟೇಗೆ ಬೀಗಮುದ್ರೆ ಹಾಕಿದ್ದರೂ ಹೋಂ ಸ್ಟೇ ತೆರೆದು ಕಟ್ಟಡ ದುರಸ್ತಿ ಕಾರ್ಯ ಕೈಗೊಂಡಿದ್ದ ಮಾಲೀಕರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

DC notices eviction of 8 illegal buildings in Bandipur
ಅಕ್ರಮ ಕಟ್ಟಡಗಳ‌ ತೆರವಿಗೆ ಡಿಸಿ ನೋಟಿಸ್
author img

By

Published : May 31, 2020, 9:21 AM IST

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದಲ್ಲಿ ನಿರ್ಮಿಸಿರುವ ಅಕ್ರಮ ಕಟ್ಟಡಗಳ ತೆರವಿಗೆ ಡಿಸಿ ಡಾ.ಎಂ.ಆರ್.ರವಿ ಮುಂದಾಗಿದ್ದು 8 ಮಂದಿಗೆ ಕಟ್ಟಡ ತೆರವುಗೊಳಿಸಲು ನೋಟಿಸ್ ಜಾರಿ ಮಾಡಿದ್ದಾರೆ.

ಇನ್ನು, ಪ್ರವಾಸೋದ್ಯಮ ಇಲಾಖೆ ಅನುಮತಿ ಪಡೆದ ಬಳಿಕ ಭೂ ಪರಿವರ್ತನೆ ಮಾಡದೇ ನಿರ್ಮಿಸಿರುವ 3 ಹೋಂ ಸ್ಟೇಗಳಿಗೆ ನೀಡಿದ್ದ ಅನುಮತಿ ವಾಪಸ್ ಪಡೆದಿದ್ದಾರೆ. ಅನುಮತಿ ಪಡೆಯದ ಇನ್ನೊಂದು ಹೋಂ ಸ್ಟೇಗೆ ಬೀಗಮುದ್ರೆ ಹಾಕಿದ್ದರೂ ಹೋಂ ಸ್ಟೇ ತೆರೆದು ಕಟ್ಟಡ ದುರಸ್ತಿ ಕಾರ್ಯ ಕೈಗೊಂಡಿದ್ದ ಮಾಲೀಕರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಅಲ್ಲದೇ, ಇನ್ನು ಉಳಿದ 7 ಅಕ್ರಮ ಕಟ್ಟಡಗಳ ತೆರವಿಗೆ ಮುಂದೆ ಕ್ರಮ ಕೈಗೊಳ್ಳುವುದಾಗಿ ಡಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪರಿಸರ ಸೂಕ್ಷ್ಮ ವಲಯದ ಅಧಿಸೂಚನೆ ಉಲ್ಲಂಘಿಸಿ, ಯಾವುದೇ ಅನುಮತಿಯನ್ನು ಪಡೆಯದೇ ಬೃಹತ್ ಕಟ್ಟಡ ನಿರ್ಮಾಣ ಮಾಡಿರುವುದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಂಡೀಪುರ ಸಿಎಫ್ಒ ಬಾಲಚಂದ್ರ ಡಿಸಿಗೆ ಪತ್ರ ಬರೆದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.