ETV Bharat / state

ಬೇಕರಿಯಲ್ಲಿ ಸಿಲಿಂಡರ್ ಸ್ಫೋಟ: ಲಕ್ಷಂತರ ರೂಪಾಯಿ ನಷ್ಟ - Gundlupete cylinder explosion

ಗುಂಡ್ಲುಪೇಟೆಯ ಬೇಕರಿ ಅಂಗಡಿಯೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಬೇಕರಿ ಸಾಮಾನುಗಳು ಸುಟ್ಟು ಕರಕಲಾದ ಘಟನೆ ತಾಲೂಕಿನ ಹಂಗಳ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

Cylinder explosion in Gundlupete bakery
ಬೇಕರಿಯಲ್ಲಿ ಸಿಲಿಂಡರ್ ಸ್ಫೋಟ: ಲಕ್ಷಂತರ ರೂಪಾಯಿ ವಂಡವಾಳ ನಷ್ಟ
author img

By

Published : Jun 29, 2020, 4:55 PM IST

ಗುಂಡ್ಲುಪೇಟೆ(ಚಾಮರಾಜನಗರ): ಬೇಕರಿ ಅಂಗಡಿಯೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಬೇಕರಿ ಸಾಮಾನುಗಳು ಸುಟ್ಟು ಕರಕಲಾದ ಘಟನೆ ತಾಲೂಕಿನ ಹಂಗಳ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಬೇಕರಿಯಲ್ಲಿ ಸಿಲಿಂಡರ್ ಸ್ಫೋಟ: ಲಕ್ಷಂತರ ರೂಪಾಯಿ ನಷ್ಟ

ಸೋಮವಾರ ಬೆಳಗಿನ ಜಾವ ಸುಮಾರು 3 ಗಂಟೆಗೆ ಭಾರೀ ಶಬ್ದ ಕೇಳಿಸಿದ್ದು, ಕೂಡಲೇ ಸಾರ್ವಜನಿಕರು ಮನೆಯಿಂದ ಹೊರ ಬಂದು ನೋಡಿದ್ದಾರೆ. ಆಗ ಸಿಲಿಂಡರ್ ಸ್ಟೋಟಗೊಂಡ ಪರಿಣಾಮ ಬೇಕರಿಗೆ ಬೆಂಕಿ ಹೊತ್ತಿದ್ದು, ಧಗಧಗ ಉರಿಯಲು ಆರಂಭಿಸಿದೆ. ತಕ್ಷಣವೇ ಈ ವಿಚಾರವನ್ನು ಸಾರ್ವಜನಿಕರು ಅಗ್ನಿಶಾಮಕ ಠಾಣೆಗೆ ದೂರವಾಣಿ ಮೂಲಕ ತಿಳಿಸಿದ್ದಾರೆ. ಸರಿಯಾದ ಸಮಯಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅಷ್ಟರೊಳಗಾಗಲೇ ಬೇಕರಿಯಲ್ಲಿದ್ದ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿ ಹೋಗಿವೆ.

ಬೇಕರಿ ಕೇರಳ ಮೂಲದ ವ್ಯಕ್ತಿಗೆ ಸೇರಿದ್ದು, ಲಕ್ಷಕ್ಕೂ ಅಧಿಕ ರೂಪಾಯಿ ನಷ್ಟ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಸರ್ಕಾರ ನೆರವಿಗೆ ಧಾವಿಸಿ ನಷ್ಟ ಭರಿಸಬೇಕು ಎಂದು ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.