ETV Bharat / state

ಅತಿವೃಷ್ಟಿಯ ಅನಾಹುತ: ಬೆಳೆ ಇಳುವರಿ ಕುಂಠಿತ, ರೈತರಲ್ಲಿ ಆತಂಕ - ಅತಿವೃಷ್ಟಿಯಿಂದ ಬೆಳೆ ನಾಶ

ಅತಿವೃಷ್ಟಿಯಿಂದಾಗಿ ಬಾಳೆ, ಟೊಮ್ಯಾಟೊ, ಹುರುಳಿ ಹಾಗು ಹಸಿಕಡಲೆ ಬೆಳೆಗಳು ನಿರೀಕ್ಷಿತ ಮಟ್ಟದ ಇಳುವರಿ ಕೊಟ್ಟಿಲ್ಲ. ಹೀಗಾಗಿ ಗಡಿಜಿಲ್ಲೆಯ ರೈತರು ಕಂಗಾಲಾಗಿದ್ದಾರೆ.

ಅತಿವೃಷ್ಟಿ ತಂದ ಆತಂಕ: ಬೆಳೆ ಇಳುವರಿ ಕುಂಠಿತ
author img

By

Published : Nov 3, 2019, 2:45 PM IST

ಚಾಮರಾಜನಗರ: ಅತಿವೃಷ್ಟಿಯಿಂದ ಬಾಳೆ, ಟೊಮ್ಯಾಟೊ, ಹುರುಳಿ, ಹಸಿಕಡಲೆ ಬೆಳೆಗಳು ನಿರೀಕ್ಷಿತ ಮಟ್ಟದ ಇಳುವರಿ ತಂದಿಲ್ಲ. ಹೀಗಾಗಿ ಗಡಿ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ಗುಂಡ್ಲುಪೇಟೆ ಭಾಗದಲ್ಲಿ‌ ತರಕಾರಿ ಬೆಳೆಗಳಂತೂ ನೆಲಕಚ್ಚುವ ಭೀತಿ ಎದುರಾಗಿದೆ.

ಅತಿವೃಷ್ಟಿ ತಂದ ಆತಂಕ: ಬೆಳೆ ಇಳುವರಿ ಕುಂಠಿತ

ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ 18 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಜೋಳ, ಹುರುಳಿ, ಹಸಿಕಡಲೆ ಬೆಳೆಗೆ ಕಂಟಕ ಎದುರಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ನ.14 ರಿಂದ ಮಳೆ ಇಳಿಮುಖವಾಗಲಿದೆ ಎಂಬ ಮಾಹಿತಿ ರೈತರಲ್ಲಿ ಆಶಾಭಾವನೆ ಮೂಡಿಸಿದೆ.

ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದು, 828.8 ಮಿಮೀ ಮಳೆಯಾಗಿದೆ. ಗುಂಡ್ಲುಪೇಟೆ ಭಾಗದಲ್ಲಿ ಹೆಚ್ಚು ಮಳೆಯಾಗಿದ್ದು ವಾಡಿಕೆಗಿಂತ ಶೇ.129 ಹೆಚ್ಚುವರಿ ಮಳೆಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ಚಂದ್ರಕಲಾ ಮಾಹಿತಿ ನೀಡಿದ್ದಾರೆ. ಕೊಳ್ಳೇಗಾಲ ಮತ್ತು ಹನೂರಿನಲ್ಲಿ ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿದ್ದು ರೈತರು ನೀರನ್ನು ಹೊರಹಾಕಬೇಕು ಎಂದು ಮನವರಿಕೆ ಮಾಡಿಕೊಟ್ಟಿದ್ದೇವೆ. ಹಿಂಗಾರು ಮಳೆಗೆ ಬೆಳೆ ನಷ್ಟ ಆಗುವ ಸಂಭವ ತೀರಾ ಕಡಿಮೆ ಎಂದು ತಿಳಿಸಿದರು.

Intro:ಅತಿವೃಷ್ಟಿ ತಂದ ಆತಂಕ: ಮಳೆಗೆ ಬೆಳೆ ಇಳುವರಿ ಕುಂಠಿತ!

ಚಾಮರಾಜನಗರ: ಬರದಿಂದ ಕಂಗೆಟ್ಟ ಗಡಿಜಿಲ್ಲೆ ರೈತರಿಗೆ ಅವಶ್ಯವಿದ್ದಾಗ ವರುಣ ಕೃಪೆ ತೋರದೇ ಸೆಪ್ಟೆಂಬರ್ ಮಧ್ಯಂತರ, ಅಕ್ಟೋಬರ್ ನಲ್ಲಿ ಸುರಿದ ಅತೀವೃಷ್ಟಿಗೆ ಅನ್ನದಾತ ನಲುಗುವ ಆತಂಕ ಕವಿದಿದೆ.

Body:ಹೌದು, ಅತೀವೃಷ್ಟಿಯಿಂದ ಬಾಳೆ, ಟೊಮ್ಯಾಟೊ, ಹುರುಳಿ ಹಸಿಕಡಲೆ ಅತೀ ಶೀತದಿಂದ ನಿರೀಕ್ಷಿತ ಮಟ್ಟದ ಇಳುವರಿ ಕುಸಿಯುವ ಹಂತ ತಲುಪಿದ್ದು ಗುಂಡ್ಲುಪೇಟೆ ಭಾಗದಲ್ಲಿ‌ ತರಕಾರಿ ಬೆಳೆಗಳಂತೂ ನೆಲಕಚ್ಚುವ ಹಂತ ತಲುಪಿದೆ.

ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ 18 ಸಾವಿರಕ್ಕೂ ಹೆಚ್ಚು ಬಿತ್ತನೆಯಾಗಿದ್ದು ಜೋಳ, ಹುರುಳಿ, ಹಸಿಕಡಲೆಗೆ ಕಂಟಕ ಎದುರಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ ನ.೧೪ ರಿಂದ ಮಳೆ ಇಳಿಮುಖವಾಗಲಿದೆ ಎಂಬ ಮಾಹಿತಿಯಿಂದ ಬೆಳೆ ಸಂಪೂರ್ಣ ನೆಲಕಚ್ಚದಿರುವ ಆಶಾಭಾವನೆ ಮೂಡಿಸಿದೆ.

ವಾಡಿಕೆಗಿಂತ ಹೆಚ್ಚು ಮಳೆ: ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದು ಜಿಲ್ಲೆಯ ಸರಾಸರಿ 700.8 ,
ಮಿ.ಮೀ. ವಾಡಿಕೆ ಮಳೆಯಾಗಿದ್ದು 828.8 ಮಿಮೀ ಮಳೆಯಾಗಿದೆ. ಗುಂಡ್ಲುಪೇಟೆ ಭಾಗದಲ್ಲಿ ಹೆಚ್ಚು ಮಳೆಯಾಗಿದ್ದು ವಾಡಿಕೆಗಿಂತ ಶೇ.129 ಹೆಚ್ಚುವರಿ ಮಳೆಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರಾದ ಚಂದ್ರಕಲಾ ಮಾಹಿತಿ ನೀಡಿದ್ದಾರೆ.

ಕೊಳ್ಳೇಗಾಲ ಮತ್ತು ಹನೂರಿನಲ್ಲಿ ತೇವಾಂಶ ಹೆಚ್ಚಾಗಿದ್ದು ರೈತರು ನೀರನ್ನು ಹೊರಹಾಕಬೇಕು ಎಂದು ಮನವರಿಕೆ ಮಾಡಿಕೊಟ್ಟಿದ್ದೇವೆ, ಹಿಂಗಾರು ಬೆಳೆಗೆ ನಷ್ಟ ಆಗುವ ಸಂಭವ ತೀರಾ ಕಡಿಮೆ ಎಂದು ತಿಳಿಸಿದರು.

Bite: ಚಂದ್ರಕಲಾ, ಜಂಟಿ ಕೃಷಿ ನಿರ್ದೇಶಕಿ

Conclusion:ಒಟ್ಟಿನಲ್ಲಿ ವರುಣನ ಅಬ್ಬರಕ್ಕೆ ತುಂಬುತ್ತಿರುವ ಖುಷಿ ಒಂದೆಡೆಯಾದರೇ ಕಷ್ಟಪಟ್ಟು ದುಡಿದ ಬೆಳೆ ಕೈಕೊಡುವ ಆತಂಕ ಗಡಿಜಿಲ್ಲೆಯ ರೈತರದ್ದಾಗಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.