ಕೊಳ್ಳೇಗಾಲ : ಕೋವಿಡ್ ತಡೆಗೆ ಸಾರ್ವಜನಿಕ ಸ್ಥಳಗಳಲ್ಲಿ ನಿಯಮ ಪಾಲನೆಗೆ ಸಂಬಂಧಿಸಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡುವಂತೆ ಪಟ್ಟಣದ ಪ್ರಮುಖ ರಸ್ತೆಗಳಿಗೆ ದಿಢೀರ್ ಭೇಟಿ ನೀಡಿ ತಹಶೀಲ್ದಾರ್ ಕುನಾಲ್, ನಗರಸಭಾ ಆಯುಕ್ತ ವಿಜಯ್ ಮಾಸ್ಕ್ ಜಾಗೃತಿ ಮೂಡಿಸಿದ್ದಾರೆ.
ಕೊರೊನಾ ಎರಡನೇ ಅಲೆ ತೀವ್ರವಾಗಿರುವ ಹಿನ್ನೆಲೆ ಮಾಸ್ಕ್ ಧರಿಸದೆ ಓಡಾಡುತ್ತಿರುವ ಸಾರ್ವಜನಿಕರು, ಮಾಸ್ಕ್ ಧರಿಸದೆ ವ್ಯವಹರಿಸುತ್ತಿದ್ದ ಅಂಗಡಿ ಮಾಲೀಕರಿಗೆ, ಪ್ರಯಾಣಿಕರಿಗೆ ದಂಡ ಹಾಕಿದ್ದಾರೆ.
ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ತಹಶೀಲ್ದಾರ್ ಕುನಾಲ್ ಮಾಸ್ಕ್ ಬಳಕೆ, ಸಾಮಾಜಿಕ ಅಂತರದಿಂದ ಕೋವಿಡ್ ನಿಯಂತ್ರಿಸಲು ಸಾಧ್ಯ. ಸಾರ್ವಜನಿಕರು ಖಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದರು.
45 ವರ್ಷ ಮೇಲ್ಪಟ್ಟ ನಾಗರಿಕರು 50 ಸಾವಿರ ಮಂದಿ ಇದ್ದಾರೆ. ಆದರೆ, ಈ ಪೈಕಿ ಕೋವಿಡ್ ಲಸಿಕೆ ಪಡೆದಿರುವವರು 12 ಸಾವಿರ ಮಂದಿ ಮಾತ್ರ. ಆದ್ದರಿಂದ ಪ್ರತಿಯೊಬ್ಬರು ವ್ಯಾಕ್ಸಿನೇಷನ್ ಮಾಡಿಸಿಕೊಳ್ಳಬೇಕು ಎಂದರು.