ETV Bharat / state

ಚಾಮರಾಜನಗರ, ವರುಣದಲ್ಲಿ ವಿ.ಸೋಮಣ್ಣಗೆ ಸೋಲು: 4ನೇ ಬಾರಿ ಗೆದ್ದ ಪುಟ್ಟರಂಗಶೆಟ್ಟಿ

ಕಾಂಗ್ರೆಸ್​ ಅಭ್ಯರ್ಥಿ ಸಿ. ಪುಟ್ಟರಂಗಶೆಟ್ಟಿ 83,858 ಮತಗಳನ್ನು ಪಡೆಯುವ ಮೂಲಕ 4ನೇ ಬಾರಿಗೆ ಗೆದ್ದಿದ್ದಾರೆ.

ಪುಟ್ಟರಂಗಶೆಟ್ಟಿ ಹಾಗೂ ವಿ ಸೋಮಣ್ಣ
ಪುಟ್ಟರಂಗಶೆಟ್ಟಿ ಹಾಗೂ ವಿ ಸೋಮಣ್ಣ
author img

By

Published : May 13, 2023, 5:25 PM IST

Updated : May 13, 2023, 5:59 PM IST

ಚಾಮರಾಜನಗರ :‌ ಈ ಬಾರಿ ಬಿಜೆಪಿ ಅಭ್ಯರ್ಥಿ ಹಾಗು ಸಚಿವ ವಿ.ಸೋಮಣ್ಣ ಚಾಮರಾಜನಗರದಲ್ಲಿ ಗೆದ್ದೇ ಬಿಡುತ್ತಾರೆ ಎಂಬ ಕಮಲ ಕಲಿಗಳ ಅತ್ಯುತ್ಸಾಹಕ್ಕೆ ಮತದಾರರು ತಣ್ಣೀರೆರಚಿದ್ದಾರೆ. ಕಾಂಗ್ರೆಸ್​​ ಶಾಸಕ ಸಿ‌.ಪುಟ್ಟರಂಗಶೆಟ್ಟಿ ಸತತ ನಾಲ್ಕನೇ ಬಾರಿಗೆ ಚಾಮರಾಜನಗರದ ಗದ್ದುಗೆ ಏರಿದ್ದಾರೆ. ಪುಟ್ಟರಂಗಶೆಟ್ಟಿ ಕೃಷಿಯಲ್ಲಿ ವಿಶೇಷ ಆಸಕ್ತಿ ಇರುವ ಜನಪ್ರತಿನಿಧಿ. ತೆಂಗಿನ ಮರವನ್ನು ಸರಸರನೆ ಏರಬಲ್ಲ ನಿಷ್ಣಾತ. ಆ ಕಲೆಯನ್ನೇ ರಾಜಕೀಯದಲ್ಲಿ ಕರಗತ ಮಾಡಿಕೊಂಡಿರುವುದು ಈ ಬಾರಿಯ ಚುನಾವಣೆಯಲ್ಲಿ ಮತ್ತೊಮ್ಮೆ ಸಾಬೀತಾಗಿದೆ.

ಇದನ್ನೂ ಓದಿ: ಪ್ರಿಯಾಂಕ್ ಖರ್ಗೆಗೆ ಹ್ಯಾಟ್ರಿಕ್ ಗೆಲುವು: ಮಣಿಕಂಠ ರಾಠೋಡ್​ ವಿರುದ್ಧ 13,638 ಮತಗಳ ಅಂತರದ ಜಯ

ಲಿಂಗಾಯತ ಪ್ರಾಬಲ್ಯದ ಕ್ಷೇತ್ರವಾದ ಚಾಮರಾಜನಗರದಲ್ಲಿ ಇದೇ ಸಮುದಾಯದ ಪ್ರಬಲ ನಾಯಕ ವಿ‌‌.ಸೋಮಣ್ಣ ಸ್ಪರ್ಧೆ ಮಾಡಿದ್ದರೂ ಕಳೆದ ಬಾರಿಗಿಂತ ಹೆಚ್ಚಿನ ಅಂತರದಲ್ಲಿ ಗೆದ್ದು ತಾನು ಸೋಲಿಲ್ಲದ ಸರದಾರ ಎಂದು ತೋರಿಸಿದ್ದಾರೆ. ಸೋಮಣ್ಣ ಬಂದ ಬಳಿಕ ಚಾಮರಾಜನಗರ ಹೈವೋಲ್ಟೆಜ್ ಕ್ಷೇತ್ರವಾಗಿ ಬದಲಾಗಿತ್ತು. ಸೋಮಣ್ಣ ಚಾಮರಾಜನಗರ ಮತದಾರರಾಗಿಯೂ ಬದಲಾಗಿದ್ದರು. ಆದರೆ, ಎಲ್ಲದಕ್ಕೂ ಮತದಾರರು ಮತಯಂತ್ರದ ಮೂಲಕವೇ ಉತ್ತರ ಕೊಟ್ಟಿದ್ದಾರೆ.

ಇದನ್ನೂ ಓದಿ: ಚಾಮರಾಜನಗರದಲ್ಲಿ 3 ಕಾಂಗ್ರೆಸ್, 1 ಜೆಡಿಎಸ್: ಗೆದ್ದ ನಾಲ್ವರು ಅಭ್ಯರ್ಥಿಗಳು ಹೇಳುವುದೇನು?

ಚಾಮರಾಜನಗರದ ಮತ ಎಣಿಕೆ ಒಟ್ಟು 18 ಸುತ್ತುಗಳಲ್ಲಿ ನಡೆಯಿತು. ಆದರೆ, ಬಿಜೆಪಿಯ ಯಾವುದೇ ತಂತ್ರಗಳು ಕ್ಷೇತ್ರದಲ್ಲಿ ಕೆಲಸ ಮಾಡಲಿಲ್ಲ. ಮೊದಲ ಸುತ್ತಿನಿಂದಲೇ ಮುನ್ನಡೆ ಸಾಧಿಸಿದ್ದ ಪುಟ್ಟರಂಗಶೆಟ್ಟಿ 2,4,6,8 ಸಾವಿರ.. ಹೀಗೆ ಅಂತರವನ್ನು ಹೆಚ್ಚಿಸಿಕೊಂಡು ಕೊನೆಗೆ ಗೆಲುವಿನ ದಡ ತಲುಪಿದರು. ಓರ್ವ ಪ್ರಬಲ ನಾಯಕ ಸ್ಪರ್ಧೆಗೂ ಬಗ್ಗದ ಪುಟ್ಟರಂಗಶೆಟ್ಟಿ ಗೆಲುವಿನ ಯಾವುದೇ ಹಾದಿಯನ್ನು ಸೋಮಣ್ಣಗೆ ಬಿಟ್ಟುಕೊಡದೇ 16 ಸುತ್ತಿನಿಂದಲೇ ಗೆಲುವಿನ ನಗೆ ಆರಂಭಿಸಿ 18 ಸುತ್ತಿನಲ್ಲಿ ವಿಜಯಿಯಾದರು.

ಇದನ್ನೂ ಓದಿ: ವರುಣಾ ಕ್ಷೇತ್ರ: ಭಾರೀ ಪೈಪೋಟಿ ನಡುವೆಯೂ ಸೋಮಣ್ಣ ವಿರುದ್ಧ ಗೆಲುವು ಸಾಧಿಸಿದ ಸಿದ್ದರಾಮಯ್ಯ

ಹಳೆ ಮೈಸೂರು ಭಾಗದ ಮೇಲೆ ಕಣ್ಣಿಟ್ಟಿದ್ದ ಬಿಜೆಪಿ ಹೈಕಮಾಂಡ್ ಸೋಮಣ್ಣಗೆ 8 ಕ್ಷೇತ್ರಗಳ ಗುರಿಯನ್ನೂ ಕೊಟ್ಟಿತ್ತು. 8 ಕ್ಷೇತ್ರಗಳಲ್ಲೂ ಬಿಜೆಪಿ ಮಕಾಡೆ ಮಲಗಿದ್ದು, ಕೈ ಭದ್ರವಾಗಿ ನೆಲೆಯೂರಿದ್ದರೆ, ಕಮಲಪಡೆ ಛಿದ್ರವಾಗಿದೆ. ಬಿಜೆಪಿ ಪರ ಘಟಾನುಘಟಿ ನಾಯಕರಾದ ಅಮಿತ್ ಶಾ, ಸಿಎಂ ಬಸವರಾಜ ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ, ಸುದೀಪ್ ಅಬ್ಬರದ ಪ್ರಚಾರ ನಡೆಸಿದ್ದರು‌. ಆದರೆ, ಇದ್ಯಾವುದನ್ನೂ ಮತದಾರರು ಪರಿಗಣಸದೇ ಕೈ ಬಲ ಹೆಚ್ಚಿಸಿದ್ದಾರೆ.

ಯಾರಿಗೆ ಎಷ್ಟು ಮತ..?

ಕಾಂಗ್ರೆಸ್- ಸಿ. ಪುಟ್ಟರಂಗಶೆಟ್ಟಿ- 83,858
ಬಿಜೆಪಿ- ವಿ‌. ಸೋಮಣ್ಣ- 76,325
ಜೆಡಿಎಸ್- ಆಲೂರು ಮಲ್ಲು-1082
ಬಿಎಸ್ಪಿ- ಹ. ರಾ ಮಹೇಶ್- 6461
ನೋಟಾ(ಯಾರಿಗೂ ಮತವಿಲ್ಲ)- 794

ಇದನ್ನೂ ಓದಿ: ಮೊದಲ ಚುನಾವಣೆಯಲ್ಲೇ ಭರ್ಜರಿ ಗೆಲುವು; ಕೆ ಸುಧಾಕರ್​ ವಿರುದ್ಧ ಗೆದ್ದು ಬೀಗಿದ ಪ್ರದೀಶ್​ ಈಶ್ವರ್​​​

Last Updated : May 13, 2023, 5:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.