ETV Bharat / state

ಚಾಮರಾಜನಗರ: ಕೈದಿಗಳಿಗೆ ಕಂಪ್ಯೂಟರ್ ಕಲಿಕೆ; ಕಾರಾಗೃಹ ಬಂಧಿಗಳ ಬದುಕು ಬದಲಿಸುವ ಯತ್ನ - ​ ETV Bharat Karnataka

Computer learning program for jail inmates: ಕಾರಾಗೃಹ ವಾಸ ಮುಗಿದ ಬಳಿಕ ಕೈದಿಗಳು ಹೊರಬಂದು ಒಳ್ಳೆಯ ಜೀವನ ರೂಪಿಸಿಕೊಳ್ಳಲು ಕಂಪ್ಯೂಟರ್ ಕಲಿಕೆ ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.

ಕೈದಿಗಳಿಗೆ ಕಂಪ್ಯೂಟರ್ ಕಲಿಕೆ
ಕೈದಿಗಳಿಗೆ ಕಂಪ್ಯೂಟರ್ ಕಲಿಕೆ
author img

By ETV Bharat Karnataka Team

Published : Nov 16, 2023, 11:07 AM IST

ಚಾಮರಾಜನಗರ: ರಾಜ್ಯದಲ್ಲೇ ಇದೇ ಮೊದಲೆನ್ನಬಹುದಾದ, ಕಾರಾಗೃಹ ಬಂಧಿಗಳಿಗೆ ಕಂಪ್ಯೂಟರ್ ಶಿಕ್ಷಣ ತರಬೇತಿ ನೀಡುವ ವಿನೂತನ ಕಾರ್ಯಕ್ರಮ ಚಾಮರಾಜನಗರ ಕಾರಾಗೃಹದಲ್ಲಿ ಆರಂಭಗೊಂಡಿದೆ. ಇನ್ಫೋಸಿಸ್ ರೋಟರಿ ಪಂಚಶೀಲ ಸಹಯೋಗದಿಂದ ಈ ಯೋಜನೆ ಕಾರ್ಯಗತವಾಗುತ್ತಿದೆ.

ಕಂಪ್ಯೂಟರ್ ಕಲಿಕೆ‌ಯ ಮೂಲಕ ವಿಚಾರಣಾ ಕೈದಿಗಳು, ಕಾರಾಗೃಹ ಬಂಧಿಗಳು ಭವಿಷ್ಯದಲ್ಲಿ ಬದುಕು ಬದಲಿಸಿಕೊಳ್ಳಬೇಕೆಂಬುದು ಈ ವಿಶೇಷ ಯೋಜನೆಯ ಉದ್ದೇಶ. ಕಾರಾಗೃಹ ಬಂಧಿಗಳಿಗೆ ಕಾರಾಗೃಹದಲ್ಲೇ ಕಂಪ್ಯೂಟರ್ ತರಬೇತಿ ಪಡೆಯಲು ಸುಸಜ್ಜಿತ ಕೊಠಡಿಯಲ್ಲಿ 10 ಕಂಪ್ಯೂಟರ್ ಮತ್ತು ಪ್ರಿಂಟರ್​ಗಳನ್ನು ಇನ್ಫೋಸಿಸ್ ಸಂಸ್ಥೆ ನೀಡಿದ್ದು, ತರಬೇತಿದಾರರನ್ನೂ ನಿಯೋಜಿಸಲಾಗಿದೆ.

ಕಾರಾಗೃಹ ಬಂಧಿಗಳಿಗೆ ಕಂಪ್ಯೂಟರ್ ಶಿಕ್ಷಣ ತರಬೇತಿ
ಕಾರಾಗೃಹ ಬಂಧಿಗಳಿಗೆ ಕಂಪ್ಯೂಟರ್ ಶಿಕ್ಷಣ ತರಬೇತಿ ನೀಡಲು ವ್ಯವಸ್ಥೆ

ಕಂಪ್ಯೂಟರ್ ಶಿಕ್ಷಣದೊಂದಿಗೆ ಕಲಿಕಾರ್ಥಿಗಳಿಗೆ ಸುಲಭವಾಗಿ ಕಂಪ್ಯೂಟರ್ ಅರ್ಥೈಸುವ ಕನ್ನಡ ಕಿರುಪುಸ್ತಕಗಳನ್ನು ಇಡಲಾಗಿದೆ. ಕಂಪ್ಯೂಟರ್ ಕಲಿತ ಬಳಿಕ ಉದ್ಯೋಗ ಪಡೆದು ಬದುಕು ಬದಲಿಸಿಕೊಳ್ಳಲಿ ಎಂಬ ಮಾದರಿ ಉದ್ದೇಶ ಈ ಯೋಜನೆಯ ಹಿಂದಿದ್ದು, ಬುಧವಾರ ಸಂಜೆ ಈ ಕಲಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.

ಜಿಲ್ಲಾಧಿಕಾರಿ ಪ್ರತಿಕ್ರಿಯೆ: ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾತನಾಡಿ, "ಕೆಲ ದಿನಗಳ ಹಿಂದೆ ಸಾಕ್ಷರತಾ ಕಾರ್ಯಕ್ರಮಕ್ಕಾಗಿ ಕಾರಾಗೃಹಕ್ಕೆ ಬಂದಿದ್ದಾಗ ಕಾರಾಗೃಹ ಬಂಧಿಗಳಿಗೂ ಕಂಪ್ಯೂಟರ್ ಶಿಕ್ಷಣ ನೀಡಬೇಕೆಂಬ ಆಲೋಚನೆ ಬಂತು. ಅಂದೇ ಕಾರ್ಯಕ್ರಮದಲ್ಲಿ ಕಂಪ್ಯೂಟರ್ ಶಿಕ್ಷಣ ತರಬೇತಿಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದೆ. ಇನ್ಫೋಸಿಸ್ ಸೇರಿದಂತೆ ಇತರೆ ಸಂಸ್ಥೆಗಳು ನಮ್ಮ ಮನವಿಗೆ ಓಗೊಟ್ಟು ಇಲ್ಲಿನ ಬಂಧಿಗಳಿಗೆ ಅತ್ಯಾಧುನಿಕ 10 ಕಂಪ್ಯೂಟರ್, ಪ್ರಿಂಟರ್​ಗಳನ್ನು ನೀಡಿ ತರಬೇತಿಗೆ ಅಗತ್ಯ ಸಿಬ್ಬಂದಿ ನಿಯೋಜಿಸಿದೆ".

"ಕಾರಾಗೃಹದಲ್ಲಿರುವ ಸಮಯ ಸದುಪಯೋಗವಾಗಲಿ. ಇಲ್ಲಿಂದ ಹೊರಹೋದ ಮೇಲೆ ಸ್ವಂತ ಶಕ್ತಿಯ ಮೇಲೆ ಜೀವನ ರೂಪಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಕಂಪ್ಯೂಟರ್ ತರಬೇತಿಗೆ ವ್ಯವಸ್ಥೆ ಮಾಡಲಾಗಿದೆ. ಹೆಚ್ಚು ಓದಿಲ್ಲದೇ ಇರುವವರೂ ಸಹ ಕಂಪ್ಯೂಟರ್ ಕಲಿಯಲು ಅವಕಾಶವಿದೆ. ಇಲ್ಲಿ ಅನೇಕ ಬಗೆಯ ಕಂಪ್ಯೂಟರ್ ತರಬೇತಿ ನೀಡಲಾಗುತ್ತದೆ. ಈಗಿರುವ ಗ್ರಂಥಾಲಯದ ಜೊತೆ ಇ ಲೈಬ್ರರಿ ಸಹ ಆರಂಭಿಸಿದರೆ ಬಂಧಿಗಳಿಗೆ ಅವರವರ ಭಾಷೆಯಲ್ಲಿಯೇ ಓದಲು ಅನುಕೂಲ ಮಾಡಿಕೊಡಬಹುದು" ಎಂದು ಅವರು ತಿಳಿಸಿದರು.

ಇದನ್ನೂ ಓದಿ: ತಮಿಳುನಾಡು, ಕರ್ನಾಟಕ ಶಾಸಕರಿಂದ ಗಡಿ ರೌಂಡ್ಸ್: ರಸ್ತೆ ನಿರ್ಮಾಣಕ್ಕೆ ಕ್ರಮ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.