ETV Bharat / state

ಕೊರೊನಾದಿಂದ ಕೊಳ್ಳೇಗಾಲದಲ್ಲಿ ಸಿದ್ದಪ್ಪಾಜಿ ಭಕ್ತ ಸಮೂಹಕ್ಕೆ ನಿರಾಸೆ - ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು

ಕೊವೀಡ್ 19 ಕಾರಣಕ್ಕೆ ಶ್ರೀ ಚಿಕ್ಕಲ್ಲೂರು ಜಾತ್ರೆಗೆ ಸಾರ್ವಜನಿಕರ ನಿರ್ಬಂಧ ವಿಧಿಸಿದ್ದು, ಶ್ರೀ ಸಿದ್ದಪ್ಪಾಜಿ ಸೇವೆಗೆ ಬರುತ್ತಿದ್ದ ಭಕ್ತ ಸಮೂಹಕ್ಕೆ ನಿರಾಸೆಯಾಗಿದೆ ಎಂದು ಮಠದ ಆಡಳಿತಾಧಿಕಾರಿ ಭರತ್ ಪ್ರಭುದೇವ ರಾಜೇ ಅರಸ್ ತಿಳಿಸಿದ್ದಾರೆ.

dss
ಕೊರೊನಾದಿಂದ ಕೊಳ್ಳೇಗಾಲದಲ್ಲಿ ಸಿದ್ದಪ್ಪಾಜಿ ಭಕ್ತ ಸಮೂಹಕ್ಕೆ ನಿರಾಸೆ
author img

By

Published : Jan 30, 2021, 7:20 PM IST

Updated : Jan 30, 2021, 8:36 PM IST

ಕೊಳ್ಳೇಗಾಲ: ತಾಲೂಕಿನ ಚಿಕ್ಕಲ್ಲೂರು ಕ್ಷೇತ್ರದಲ್ಲಿ 5 ದಿನಗಳ ಕಾಲ ವಿವಿಧ ವಿಶೇಷ ಪೂಜಾ ಕೈಕಂರ್ಯಗಳು ಪ್ರತೀ ವರ್ಷ ನಡೆಯುತ್ತಿತ್ತು. ಆದರೆ ಕೊರೊನಾದಿಂದ ಜಾತ್ರೆಗೆ ಸಾರ್ವಜನಿಕರ ನಿರ್ಬಂಧವಿರುವುದರಿಂದ ಭಕ್ತರು ಹೊತ್ತ ಹರಕೆ, ಧಾರ್ಮಿಕ ಕಾರ್ಯಗಳನ್ನು‌ ನೆರವೇರಿಸಲು ತೊಡಕಾಗಿದೆ ಎಂದು ಮಠದ ಆಡಳಿತಾಧಿಕಾರಿ ಭರತ್ ಪ್ರಭುದೇವ ರಾಜೇ ಅರಸ್ ಹೇಳಿದ್ದಾರೆ.

ಕೊರೊನಾದಿಂದ ಕೊಳ್ಳೇಗಾಲದಲ್ಲಿ ಸಿದ್ದಪ್ಪಾಜಿ ಭಕ್ತ ಸಮೂಹಕ್ಕೆ ನಿರಾಸೆ

ಈ‌ ಬಗ್ಗೆ‌ ಈಟಿವಿ ಭಾರತದೊಂದಿಗೆ ಮಾತನಾಡಿದ ಮಠದ ಆಡಳಿತಾಧಿಕಾರಿ ಭರತ್ ಪ್ರಭುದೇವ ರಾಜೇ ಅರಸ್, ಕೊರೊನಾದಿಂದ ಪ್ರತೀ ವರ್ಷ ಶ್ರೀ ಸಿದ್ದಪ್ಪಾಜಿ ಸೇವೆ ಮಾಡಲು ಬರುತ್ತಿದ್ದ ಭಕ್ತ ಸಮೂಹಕ್ಕೆ ನಿರಾಸೆಯಾಗಿದೆ. ಜಾತ್ರಾವಧಿ ಮುಗಿದ ನಂತರದ ದಿನಗಳಲ್ಲಿ ಭಕ್ತರು ಬಂದು ಹರಕೆ, ಪೂಜೆ, ಆರಾಧನೆ‌ ನೆರವೇರಿಸಬಹುದಾಗಿದೆ ಎಂದರು.

ಸುಪ್ರಸಿದ್ಧ ಚಿಕ್ಕಲ್ಲೂರು ಜಾತ್ರೆ ಈ ಬಾರಿ ಕೊರೊನಾದಿಂದ ಭಕ್ತರ ಅನುಪಸ್ಥಿತಿಯಲ್ಲಿ ಸರಳ ಮತ್ತು ಸಂಪ್ರಾದಾಯಿಕವಾಗಿ ಜರುಗುತ್ತಿದೆ. ಚಿಕ್ಕಲ್ಕೂರು ಜಾತ್ರೆಯಲ್ಲಿ ಮೂರನೇ ದಿನ ಮುಡಿ ಸೇವೆ ವಿಶೇಷವಾಗಿ ನಡೆಯುತ್ತಿತ್ತು. ಹರಕೆ ಹೊತ್ತ ಜನರು ಬಂದು ತಮ್ಮ ಹರಕೆ ತೀರಿಸುತ್ತಿದ್ದರು. ಕೋವಿಡ್ 19ನಿಂದ ಸಾರ್ವಜನಿಕರ ದರ್ಶನಕ್ಕೆ ನಿರ್ಬಂಧವಿರುವುದರಿಂದ ಜನರಿಲ್ಲದೆ ಜಾತ್ರೆ ತೋಪು ಭಣಗುಡುತ್ತಿದೆ. ಈ ಬಾರಿ 50ಕ್ಕೂ ಕಡಿಮೆ ಮಂದಿ ಮಾತ್ರ ಮುಡಿ ಸೇವೆ ಹರಕೆ ತೀರಿಸಿದ್ದಾರೆ.

Last Updated : Jan 30, 2021, 8:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.