ಚಾಮರಾಜನಗರ: ಲಾಕ್‌ಡೌನ್ ಸಡಿಲಿಕೆಯಿಂದ ರೈತರ ಜೀವನ ಯಥಾಸ್ಥಿತಿಯತ್ತ ಮರಳುತ್ತಿರುವಾಗ ತಾಲೂಕು ಹಾಗೂ ಗಡಿಭಾಗದಲ್ಲಿ ಚಿರತೆ ಉಪಟಳ ಹೆಚ್ಚಾಗಿದೆ. ಆದ್ರೆ, ಅರಣ್ಯ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ ಅನ್ನೋದು ಇಲ್ಲಿನ ನಿವಾಸಿಗಳ ಆರೋಪ.
ಗುರುವಾರ ಮುಂಜಾನೆ ತಾಲೂಕಿನ ಉಡಿಗಾಲದಲ್ಲಿ ಬಸವಣ್ಣ ಎಂಬವರಿಗೆ ಸೇರಿದ 3 ಕುರಿಗಳನ್ನು ಚಿರತೆ ತಿಂದು ಹಾಕಿದೆ. ಇದರಿಂದಾಗಿ ಹರವೆ, ವೀರನಪುರ ಭಾಗದಲ್ಲಿ ಮತ್ತೆ ಚಿರತೆ ತೊಂದರೆ ಶುರುವಾಗಿದೆ. ಇಂದು ತಮಿಳುನಾಡಿನ ಹರಲವಾಡಿಯಲ್ಲಿ ಹನುಮಂತರಾಜು ಎಂಬ ಕುರಿಗಾಹಿ ಮೇಲೆ ಚಿರತೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದೆ.