ಚಾಮರಾಜನಗರ : ಜಿಲ್ಲೆಯ ಹನೂರು ತಾಲೂಕಿನ ಉತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪೋಡುಗಳಲ್ಲಿ ಮಳೆಗಾಲದಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.
ಕತ್ತೆಕಾಲು ಪೋಡು ಹಾಗೂ ಹಿರಿಹಂಬಲ ಪೋಡುಗಳಲ್ಲಿ ಕಳೆದ 6 ತಿಂಗಳುಗಳಿಂದ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ. ಇದರಿಂದಾಗಿ ಸ್ಥಳೀಯರು 2 ಕಿ.ಮೀ ದೂರದ ಕಾಡು ಹಾದಿಯಲ್ಲಿ ನಡೆದು ಹೋಗಿ ಕೆರೆಯ ನೀರನ್ನ ಹೊತ್ತು ತರುತ್ತಿದ್ದಾರೆ.
ಪೋಡಿನಲ್ಲಿ ನೀರು ಎತ್ತುವ ಮೋಟಾರ್ ಸುಟ್ಟು ಹೋಗಿದೆ ಎಂದು ಸಬೂಬು ಹೇಳಿಕೊಂಡು ರಿಪೇರಿ ಮಾಡಿಸದ ಪರಿಣಾಮ ಕಾಡಿನೊಳಗೆ ನಡೆದು ನೀರು ತರಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಕಾಡು ಪ್ರಾಣಿಗಳ ಭಯದಲ್ಲೇ ನಡೆದು ಹೋಗಿ ಗಿರಿ ಜನರು ನೀರು ತರುತ್ತಿದ್ದಾರೆ. ಪಂಚಾಯತ್ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದ್ರೂ, ಸಮಸ್ಯೆ ಬಗೆಹರಿಸದಿರೋದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಚಿನ್ನದ ಸರ ಕಳವು ಆರೋಪ : ಪೊಲೀಸ್ ತನಿಖೆಯಿಂದ ಬೇಸತ್ತು ವ್ಯಕ್ತಿ ಆತ್ಮಹತ್ಯೆ
ಕೂಲಿಗೆ ಹೋಗುವುದನ್ನು ಬಿಟ್ಟು ಮನೆಯಲ್ಲಿಯೇ ಒಬ್ಬರು ಇದ್ದು, ನೀರು ತರಬೇಕಿದೆ. ಇನ್ನಾದ್ರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ನಮ್ಮ ಸಮಸ್ಯೆ ಬಗೆಹರಿಸಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.