ಚಾಮರಾಜನಗರ: ಗಾಂಧಿ ಗ್ರಾಮ ಪುರಸ್ಕಾರವನ್ನು ಚಾಮರಾಜನಗರ ತಾಲೂಕಿನ ಯರಗನಹಳ್ಳಿ ಹಾಗೂ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮ 4ನೇ ಬಾರಿ ಮುಡಿಗೇರಿಸಿಕೊಂಡಿದ್ದು, ಯಳಂದೂರು ತಾಲೂಕಿನ ಯರಂಗಬಳ್ಳಿ ಗ್ರಾಮ 2 ನೇ ಬಾರಿ ಪ್ರಶಸ್ತಿಗೆ ಭಾಜನವಾಗಿದೆ.
ಉಳಿದಂತೆ, ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಗ್ರಾಮ ಮತ್ತು ಹನೂರು ತಾಲೂಕಿನ ಸೂಳೇರಿಪಾಳ್ಯ ಗ್ರಾಮ ಈ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪಾತ್ರವಾಗಿದೆ.
ಬಯಲುಮುಕ್ತ ಶೌಚಾಲಯ, ಹಣಕಾಸು ನಿರ್ವಹಣೆ, ಸಕಾಲ ಸೇವೆ, ತಂತ್ರಾಂಶ ಬಳಕೆ ಹೀಗೆ ಹಲವಾರು ಅಂಶಗಳನ್ನು ಪರಿಗಣಿಸಿ ಗ್ರಾಪಂಗಳಿವೆ ಗಾಂಧಿ ಪುರಸ್ಕಾರ ಸಂದಿದೆ.
ಗಾಂಧಿ ಜಯಂತಿಯಂದು ಕಳೆದ 7 ವರ್ಷಗಳಿಂದ ಅತ್ಯುತ್ತಮ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ ನೀಡಲಾಗುತ್ತಿದೆ.