ಚಾಮರಾಜನಗರ: ಸಾವಿರಾರು ಸಂಖ್ಯೆಯ ಕಡತ ವಿಲೇವಾರಿ ಮಾಡದೇ ಸೂಕ್ತ ಸಮಯದಲ್ಲಿ ಸಾರ್ವಜನಿಕರಿಗೆ ಸೇವೆ ಒದಗಿಸದ ಗಂಭೀರ ಆರೋಪದಲ್ಲಿ ಚಾಮರಾಜನಗರ ನಗರಸಭೆ ಕಂದಾಯ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಜಯಶೀಲ ಅಮಾನತುಗೊಂಡ ಅಧಿಕಾರಿ.

ಒಂದು ವರ್ಷಗಳಿಂದ ಇ-ಸ್ವತ್ತು, ಇ-ಆಸ್ತಿ ಹಕ್ಕು ಬದಲಾವಣೆ ಸಂಬಂಧಿಸಿದ 1192 ಕಡತಗಳನ್ನು ವಿಲೇವಾರಿ ಮಾಡದೇ ಉದ್ದೇಶಪೂರ್ವಕ ವಿಳಂಬಧೋರಣೆ ತೋರಿರುವುದು ತನಿಖೆಯಲ್ಲಿ ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ ಚಾಮರಾಜನಗರ ಡಿಸಿ ಚಾರುಲತಾ ಸೋಮಲ್ ಕಠಿಣ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: ಅಸಹಾಯಕ ಮಹಿಳೆಯಿಂದ ಬಾಡಿ ಮಸಾಜ್: ಪೊಲೀಸ್ ಅಧಿಕಾರಿ ಅಮಾನತು..
ಇ-ಸ್ವತ್ತು ನೀಡಲು ವಿಳಂಬ ನೀತಿ, ಮಧ್ಯವರ್ತಿಗಳ ಹಾವಳಿಯೆಂದು ಸಾರ್ವಜನಿಕರು ನಿರಂತರವಾಗಿ ದೂರು ನೀಡುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಸಭೆಗಳಲ್ಲೂ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಖಾದಿ ಗ್ರಾಮೋದ್ಯೋಗ ನಿರ್ದೇಶಕರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ತನಿಖೆ ನಡೆಸಿದೆ. ಸಕಾಲ ವ್ಯವಸ್ಥೆಯನ್ನೇ ಬುಡಮೇಲು ಮಾಡಿ ಉದ್ದೇಶಪೂರ್ವಕವಾಗಿ ಕಡತಗಳನ್ನು ಉಳಿಸಿಕೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.