ಚಾಮರಾಜನಗರ: ತಾಲೂಕಿನ ಜ್ಯೋತಿಗೌಡನಪುರ ಬೆಲವತ್ತ ಜಮೀನಿನಲ್ಲಿ ಹೆಬ್ಬಾವು ಕಾಣಿಸಿಕೊಂಡಿದೆ. ಡಾ.ರಾಜೇಂದ್ರ ಎಂಬುವವರ ಜಮೀನಿನಲ್ಲಿ ಕೆಲಸಗಾರರು ಹೋದಾಗ ಈ ದೈತ್ಯ ಗಾತ್ರದ ಹಾವನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಜಮೀನಿನ ಮಾಲೀಕರು ಸ್ನೇಕ್ ಚಾಂಪ್ ಅವರಿಗೆ ಈ ಮಾಹಿತಿಯನ್ನು ತಿಳಿಸಿದ್ದಾರೆ.
ಸ್ಥಳಕ್ಕೆ ತೆರಳಿದ ಸ್ನೇಕ್ ಚಾಂಪ್ ಸತತ ಒಂದೂವರೆ ತಾಸು ಕಾರ್ಯಾಚರಣೆ ನಡೆಸಿ ಹಾವನ್ನು ಸೆರೆಹಿಡಿದಿದ್ದಾರೆ. 100 ಕೆಜಿಗೂ ಹೆಚ್ಚು ತೂಗುವ ಈ ಹಾವು ಬರೋಬ್ಬರಿ 14 ಅಡಿ ಉದ್ದವಿದೆ. ಹಾವನ್ನು ಆಟೋ ಮತ್ತು ಕಾರಿನಲ್ಲಿ ಸಾಗಿಸಲಾಗದೇ ಟ್ರಾಕ್ಟರ್ ಬಳಸಿ ಸಾಗಿಸಲಾಯಿತು. ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ಕಾಡಿಗೆ ಹೆಬ್ಬಾವನ್ನು ಬಿಡಲಾಗಿದೆ.
ಇದನ್ನೂ ಓದಿ: ವಿಡಿಯೋ - ಹರಿದ್ವಾರದ ಪತ್ರಕರ್ತನ ಮನೆಯಲ್ಲಿ ದೈತ್ಯ ಹೆಬ್ಬಾವು!