ETV Bharat / state

ಫೆ.15, 16 ರಂದು ಚಾಮರಾಜನಗರ ಜಿಲ್ಲಾ ಸಾಹಿತ್ಯ ಸಮ್ಮೇಳನ - District Literary Conference District Literary Conference news

ಫೆಬ್ರವರಿ 15 ಮತ್ತು 16 ರಂದು ಚಾಮರಾಜನಗರದ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ 11ನೇ ಚಾಮರಾಜನಗರ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಕೋಡಿಉಗನೆ ಮಂಜು ಆಯ್ಕೆಯಾಗಿದ್ದಾರೆ.

Chamarajanagar
ಹಿರಿಯ ಸಾಹಿತಿ ಕೋಡಿಉಗನೆ ಮಂಜು
author img

By

Published : Feb 1, 2021, 11:48 AM IST

ಚಾಮರಾಜನಗರ: ಇದೇ ತಿಂಗಳು 15 ಮತ್ತು 16 ರಂದು ನಗರದ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ 11ನೇ ಚಾಮರಾಜನಗರ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಕೋಡಿಉಗನೆ ಮಂಜು ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ನಡೆದ ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷತೆಗೆ ಹಿರಿಯ ಸಾಹಿತಿಗಳಾದ ಕೆ. ವೆಂಕಟರಾಜು, ಡಾ. ಪ್ರೇಮಶೇಖರ, ಡಾ. ವೆಂಕಟೇಶ ಇಂದ್ವಾಡಿ, ಪುಟ್ಟ ತಾಯಮ್ಮ ಮುಂತಾದವರ ಹೆಸರು ಚರ್ಚೆಗೆ ಬಂದಿದ್ದವು. ನಂತರ ಕೋಡಿಉಗನೆ ಅವರ ಹೆಸರನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ಭಾನುವಾರ ಅವರ ನಿವಾಸಕ್ಕೆ ತೆರಳಿದ ಚಾಮರಾಜನಗರ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎಸ್. ವಿನಯ್, ಅಧಿಕೃತವಾಗಿ ಮಂಜು ಕೋಡಿಉಗನೆ ಅವರಿಗೆ ವಿ‍ಷಯ ತಿಳಿಸಿ ಅವರನ್ನು ಸಮ್ಮೇಳನಕ್ಕೆ ಆಹ್ವಾನಿಸಿದ್ದಾರೆ.

Chamarajanagar
ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಕೋಡಿಉಗನೆ ಮಂಜು ಆಯ್ಕೆ

ಇನ್ನು ಮಂಜು ಅವರು ಸೃಜನಶೀಲ ಸಾಹಿತಿಗಳು ಮಾತ್ರವಲ್ಲದೆ ವಿಮರ್ಶಕರೂ ಆಗಿದ್ದಾರೆ. ಶೂದ್ರ ಸಂವಾದ ಎಂಬ ಇವರ ವಿಮರ್ಶಾ ಲೇಖನಗಳ ಸಂಕಲನವನ್ನು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ.

ಓದಿ: ಅಕ್ರಮ ರಕ್ತ ಚಂದನ ಸಾಗಾಟ: ವಾಹನಗಳ ಮೇಲೆ ಪೊಲೀಸ್ ಫೈರಿಂಗ್

ಕೋಡಿಉಗನೆ ಅವರು ಜಿಲ್ಲೆಯ ಪ್ರತಿಭಾನ್ವಿತ ಕತೆಗಾರ, ಕಾದಂಬರಿಕಾರರಾಗಿದ್ದು, ಇವರ ಬರಹಗಳು ದಟ್ಟ ಗ್ರಾಮೀಣ ಸೊಗಡಿನ ಭಾಷೆಯನ್ನು ಹೊಂದಿವೆ. ಕನ್ನಡ ಸಾಹಿತ್ಯಕ್ಕೆ ಇವರ ಕೊಡುಗೆ ಕೇವಲ ಬರವಣಿಗೆಗೆ ಸೀಮಿತವಾಗಿಲ್ಲ. ಜೋಳಿಗೆ ಎಂಬ ಹೆಸರಿನ ಪ್ರಕಾಶನ ಸಂಸ್ಥೆಯನ್ನೂ ಸಹ ಇವರು ಆರಂಭಿಸಿದ್ದು, ಹಲವಾರು ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.