ಚಾಮರಾಜನಗರ: ಭಕ್ತರನ್ನು ಕರೆತರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಇಳಿದಿದ್ದು, 25 ಮಂದಿ ಗಾಯಗೊಂಡಿರುವ ಘಟನೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಾಳಬೆಟ್ಟದ ಸಮೀಪ ನಡೆದಿದೆ.
ದೀಪಾವಳಿ ಜಾತ್ರೆ ಮುಗಿಸಿಕೊಂಡು ಮಲೆಮಹದೇಶ್ವರ ಬೆಟ್ಟದಿಂದ ಬರುತ್ತಿದ್ದ ಬಸ್, ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಇಳಿದಿದೆ. ಪರಿಣಾಮ 25 ಮಂದಿ ಗಾಯಗೊಂಡಿದ್ದಾರೆ. ಚಾಲಕ ಚಂದ್ರಶೇಖರ್ ಅವರಿಗೆ ಕೈ ಮತ್ತು ಹೊಟ್ಟೆ ಭಾಗಕ್ಕೆ ಗಾಯಗಳಾಗಿದ್ದು, ಕಂಡಕ್ಟರ್ಗೆ ಬೆನ್ನು ಮತ್ತು ಹೊಟ್ಟೆಗೆ ಪೆಟ್ಟಾಗಿದೆ. ಜೊತೆಗೆ ಇಬ್ಬರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮೈಸೂರಿಗೆ ರವಾನಿಸಲಾಗಿದೆ. ಗಾಯಗೊಂಡ ಇನ್ನುಳಿದ 21 ಮಂದಿಯನ್ನು ಕೊಳ್ಳೇಗಾಲ ಆಸ್ಪತ್ರೆಗೆ ಸಾಗಿಸಲಾಗಿದೆ.
ಇದನ್ನೂ ಓದಿ: ಬಿಎಂಟಿಸಿ ಬಸ್ ಅಪಘಾತ ಪ್ರಕರಣ.. ನೂರಾರು ಕನಸು ಹೊತ್ತು ಓದಲು ತೆರಳಿದ್ದ ಮಗಳು ಜೀವಂತವಾಗಿ ಬರಲೇ ಇಲ್ಲ..
ಅಪಘಾತಕ್ಕೊಳಗಾದ ಬಸ್ ಮದ್ದೂರು ಘಟಕದ್ದಾಗಿದ್ದು, 51 ಪ್ರಯಾಣಿಕರು ಇದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಭೀಕರ ರಸ್ತೆ ಅಪಘಾತ.. ದೀಪಾವಳಿಗೆ ಹೊರಟ 15 ಮಂದಿಯ ದಾರುಣ ಸಾವು.. 40ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯ