ETV Bharat / state

ಅತ್ತೆ ಮನೆಗೆ ಬಂದಂತೆ ಬರುವ ಸೋಮಣ್ಣ; ಬುರುಡೆ ಬಜೆಟ್ ಕೊಟ್ಟ ಬೊಮ್ಮಾಯಿ: ವಾಟಾಳ್ ಟೀಕೆ - ನೀತಿ ಸಂಹಿತೆ ಬಳಿಕ ಖರ್ಚು ಮಾಡುವ ಅಧಿಕಾರ ಇರಲ್ಲ

ವಿಧಾನಸಭಾ ಚುನಾವಣಾ ನೀತಿ ಸಂಹಿತೆ ತಿಂಗಳಲ್ಲಿ ಜಾರಿಯಾಗಲಿದೆ. ಸಿಎಂ ಬೊಮ್ಮಾಯಿ ಅವರಿಗೆ ಖರ್ಚು ಮಾಡುವ ಅಧಿಕಾರ ಎಲ್ಲಿರಲಿದೆ?. ಇದು ಬುರುಡೆ ಬಜೆಟ್ ಎಂದು ವಾಟಾಳ್ ನಾಗರಾಜ್ ಹೇಳಿದರು.

Vatal Nagaraj spoke to reporters.
ವಾಟಾಳ್ ನಾಗರಾಜ್ ಸುದ್ದಿಗಾರರೊಂದಿಗೆ ಮಾತನಾಡಿದರು.
author img

By

Published : Feb 17, 2023, 10:24 PM IST

ವಾಟಾಳ್ ನಾಗರಾಜ್ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಚಾಮರಾಜನಗರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿರುವುದು ಬುರುಡೆ ಬಜೆಟ್ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಟೀಕಿಸಿದ್ದಾರೆ. ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ತಿಂಗಳಲ್ಲಿ ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತದೆ. ಬಜೆಟ್ ಪ್ರತಿ ಮುದ್ರಣಗೊಂಡು ಜಿಲ್ಲೆ, ತಾಲೂಕುಗಳಿಗೆ ಹೋಗುವಷ್ಟರಲ್ಲಿ ಕನಿಷ್ಠ ಎರಡು ತಿಂಗಳು ಬೇಕಾಗುತ್ತದೆ. ಆದ್ದರಿಂದ ಇದು ಎಲ್ಲಿ ಅನುಷ್ಠಾನ ಆಗುತ್ತದೆ? ಎಂದರು.

ಬಜೆಟ್ ಬಗ್ಗೆ ಒಂದು ವಾರ ಚರ್ಚಿಸಿ ಆಯವ್ಯಯ ಪಾಸ್ ಆಯ್ತು ಅಂತಾರೆ. ಬಜೆಟ್ ಪಾಸ್ ಆದ ಮೇಲೆ ಕಾರ್ಯಗತ ಆಗಬೇಕಾದರೆ ಇಲಾಖೆಯಿಂದ ಇಲಾಖೆಗೆ ಹಣ ಹಂಚಿಕೆ ಆಗಬೇಕು. ಹೀಗೆ ಹಣ ಹಂಚಿಕೆಯಾಗಿ ಇಲಾಖೆಯವರು ಟೆಂಡರ್ ಕರೆಯುವುದು ಯಾವಾಗ?, ಕೆಲಸ ಮಾಡುವುದು ಯಾವಾಗ? ಇದು ಬಹಳ ಗಂಭೀರವಾದ ಪರಿಸ್ಥಿತಿ ಎಂದು ಹೇಳಿದರು.

ಚುನಾವಣೆ ಹತ್ತಿರದಲ್ಲಿ ಕೊನೆಯ ಬಜೆಟ್ ಮಂಡನೆ ಮಾಡಬಾರದು. ಚುನಾವಣೆ ಆದಮೇಲೆ ಹೊಸ ಸರ್ಕಾರ ಬಂದಾಗ ಬಜೆಟ್ ಮಂಡಿಸಬೇಕು. ನಿಮ್ಮದೇ ಸರ್ಕಾರ ಬರಲಿ ಅಥವಾ ಬೇರೆಯವರ ಸರ್ಕಾರವೇ ಬರಲಿ. ಈ ಬಜೆಟ್ ಉದ್ಧಾರ ಆಗಲ್ಲ ಎಂದು ತಮ್ಮ ಶೈಲಿಯಲ್ಲಿ ಪ್ರತಿಕ್ರಿಯಿಸಿದರು.

ಚಾಮರಾಜನಗರ ಜಿಲ್ಲೆಯಾಗಿ 25 ವರ್ಷ ಆಗಿದೆ. 25 ವರ್ಷಗಳಿಂದಲೂ ಕಣ್ಣೀರಿನಲ್ಲಿದೆಯೇ ಹೊರತು ಈ ಕಣ್ಣೀರು ಒರೆಸುವವರು ಯಾರೂ ಇಲ್ಲ. ಚಾಮರಾಜನಗರಕ್ಕೆ ವಿಮಾನ ನಿಲ್ದಾಣ ಬೇಡ, ಸರಿಯಾಗಿ ಒಂದು ಬಸ್ ನಿಲ್ದಾಣ, ಜಟಕಾ ನಿಲ್ದಾಣ ಇಲ್ಲಿಲ್ಲ. ಈ ಆಯವ್ಯಯವೂ ಜಿಲ್ಲೆಗೆ ಅನ್ಯಾಯ ಮಾಡಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣಗೆ ಚಾಮರಾಜನಗರ ಅತ್ತೆ ಮನೆ ಇದ್ದಂತೆ. ಮದುವೆಯಾಗಿ ಬಹಳ ದಿವಸಗಳಾಗಿದೆ. ಹೊಸದಾಗಿ ಅತ್ತೆ ಮನೆಗೆ ಬಂದರೆ ಬೆಲೆ, ಗೌರವ ಇರುತ್ತದೆ. ಅವರಿಗೆ ಜಿಲ್ಲೆ ಬಗ್ಗೆ ಕಾಳಜಿ, ಶ್ರದ್ದೆ ಬಿಡುಗಾಸೂ ಇಲ್ಲ. ಜಿಲ್ಲಾ ಉಸ್ತುವಾರಿಯಾಗುವುದು ಜಿಲ್ಲೆ ಉದ್ಧಾರ ಮಾಡಲು ಅಲ್ಲ. ಬೇರೆ ಬೇರೆ ಜಿಲ್ಲೆಗಳಲ್ಲಿ‌ 25 ವರ್ಷದ ಉತ್ಸವ ಮಾಡಿದರು. ಇಲ್ಲಿ ಇವರು ರಜತ ಮಹೋತ್ಸವವನ್ನೇ ಮಾಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇದನ್ನೂಓದಿ:ಬಜೆಟ್​ನಲ್ಲಿ ಶಿಕ್ಷಣಕ್ಕೆ ವಿಶೇಷ ಪ್ರಾಧಾನ್ಯತೆ: ಶಿರಸಿಯಲ್ಲಿ ಪ್ರಥಮ ಪರಿಸರ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.