ಚಾಮರಾಜನಗರ: ಬಣ್ಣದಾಟ ಆಡಿ ಸ್ನೇಹಿತರೊಟ್ಟಿಗೆ ಕೆರೆಗಿಳಿದ ಬಾಲಕನೋರ್ವ ನೀರುಪಾಲಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕಲ್ಕಟ್ಟೆ ಕೆರೆಯಲ್ಲಿ ನಡೆದಿದೆ. ಗುಂಡ್ಲುಪೇಟೆ ತಾಲೂಕಿನ ಕೋಡಹಳ್ಳಿ ಗ್ರಾಮದ ವೈಶಾಲ್(17) ಮೃತ ಬಾಲಕ. ಇಂದು ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಯುಗಾದಿ ಬಣ್ಣದಾಟ ಆಡುತ್ತಿದ್ದು, ಅದರಂತೆ ವೈಶಾಲ್ ತನ್ನ ಸ್ನೇಹಿತರ ಜೊತೆ ಹೋಳಿಯಾಡಿ ಬಣ್ಣ ತೊಳೆದುಕೊಳ್ಳಲು ಕೆರೆಗೆ ಇಳಿದಾಗ ದುರಂತ ಸಂಭವಿಸಿದೆ.
ಗೆಳೆಯರನ್ನು ಬಿಟ್ಟು ಆಳಕ್ಕೆ ಹೋಗಿದ್ದರಿಂದ ಈಜಲಾಗದೇ ವೈಶಾಲ್ ಮೃತಪಟ್ಟಿದ್ದು, ಅಗ್ನಿಶಾಮಕ ಸಿಬ್ಬಂದಿ ಸಹಕಾರದಿಂದ ಮೃತದೇಹವನ್ನು ಹೊರತೆಗೆಯಲಾಗಿದೆ. ಗುಂಡ್ಲುಪೇಟೆ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.