ETV Bharat / state

ಮ್ಯಾನ್ ವರ್ಸಸ್ ವೈಲ್ಡ್ ನಲ್ಲಿ ಅಕ್ಕಿ ಜಲಸಾಹಸ... ಕಾಡಿದ್ದರಷ್ಟೇ ಮನುಷ್ಯರು ಎಂದರು ಆಕ್ಷನ್ ಕಿಂಗ್! - Bandipur forest area

ಬಾಲಿವುಡ್ ಹೀರೋ ಅಕ್ಷಯ್ ಕುಮಾರ್ ಸಾಹಸಿಗ ಬೇರ್ ಗ್ರಿಲ್ಸ್ ಜೊತೆಯಲ್ಲಿ ಇಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡು ಜಲ ಸಾಹಸ ನಡೆಸಿದ್ದಾರೆ.

bear Grylls
ಬೇರ್ ಗ್ರಿಲ್ಸ್
author img

By

Published : Jan 30, 2020, 6:30 PM IST

ಚಾಮರಾಜನಗರ: ಸೂಪರ್ ಸ್ಟಾರ್ ರಜಿನಿ ಬಳಿಕ ಬಾಲಿವುಡ್ ಹೀರೋ ಅಕ್ಷಯ್ ಕುಮಾರ್ ಸಾಹಸಿಗ ಬೇರ್ ಗ್ರಿಲ್ಸ್ ಜೊತೆಯಲ್ಲಿ ಇಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡು ಜಲ ಸಾಹಸ ನಡೆಸಿದ್ದಾರೆ.

ಕಲ್ಕರೆ ಅರಣ್ಯ ವಲಯದ ರಾಂಪುರ ಆನೆ ಶಿಬಿರದ ಸಮೀಪ ಎದೆಮಟ್ಟದ ನೀರಿನಲ್ಲಿ ಹಗ್ಗದ ಸಹಾಯದಿಂದ ಈಜಿ ಮೈನವಿರೇಳಿಸುವ ಸಾಹಸ ಮಾಡಿದ್ದು, ಬಳಿಕ ಸಾಹಸಿ ಬೇರ್ ಗ್ರಿಲ್ಸ್ ಜೊತೆಗೂಡಿ ಸಂವಾದ ನಡೆಸಿದ್ದಾರೆ.

ಮ್ಯಾನ್ ವರ್ಸಸ್ ವೈಲ್ಡ್ ನಲ್ಲಿ ಅಕ್ಕಿ ಜಲಸಾಹಸ

ಇನ್ನು, ಬಂಡೀಪುರ ಕಾಡನ್ನು ಉಲ್ಲಾಸಿತಗೊಂಡು ಸುತ್ತಾಡಿದ ಅವರು ' ಇಫ್ ಫಾರೆಸ್ಟ್ ಆರ್ ಅಲೈವ್- ಹ್ಯೂಮನ್ ಬೀಯಿಂಗ್ಸ್ ಆರ್ ಅಲೈವ್, ಮ್ಯಾನ್ ವಿಲ್ ಬಿ ದೇರ್' ಎಂಬ ಸಂದೇಶ ನೀಡಿದ್ದಾರೆ.

ಎರಡು ಎಪಿಸೋಡ್ ಗಳನ್ನು ಡಿಸ್ಕವರಿ ಚಾನೆಲ್ ಚಿತ್ರೀಕರಿಸಿಕೊಂಡಿದ್ದು, ಇಬ್ಬರು ದೈತ್ಯ ನಟರ ಸಾಕಷ್ಟು ರೋಚಕ ಅನುಭವಗಳನ್ನು ಸೆರೆ ಹಿಡಿಯಲಾಗಿದೆ ಎಂದು ತಿಳಿದುಬಂದಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.