ಚಾಮರಾಜನಗರ: ಕೆಎಸ್ ಆರ್ ಟಿಸಿ ಬಸ್ ಚಾಲಕ ತನ್ನ ಬೈಕ್ ಹಿಂದಿಕ್ಕಿದ್ದಕ್ಕೆ ಬೈಕ್ ಸವಾರ ಹಲ್ಲೆ ಮಾಡಿರುವ ಘಟನೆ, ಸಂತೇಮರಹಳ್ಳಿ ಸಮೀಪದ ಬಾನಳ್ಳಿಯಲ್ಲಿ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸಾರಿಗೆ ಸಂಸ್ಥೆ ಚಾಲಕ ಶಿವಕುಮಾರ್ ಎಂಬುವರ ಮೇಲೆ ಬೈಕ್ ಸವಾರ ಸಯ್ಯದ್ ಸಮಿವುಲ್ಲಾ ಎಂಬುವನು ಹಲ್ಲೆ ನಡೆಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಬೈಕ್ ಹಿಂದಿಕ್ಕುವ ವೇಳೆ ತನ್ನ ಕಣ್ಣಿಗೆ ಧೂಳು ಬಿದ್ದಿತು ಎಂದು ನೆಪವೊಡ್ಡಿ ಬಸ್ ಅಡ್ಡಹಾಕಿ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ ಎಂದು ತಿಳಿದುಬಂದಿದೆ.
ಘಟನೆಯಿಂದ ಕುಪಿತಗೊಂಡ ಪ್ರಯಾಣಿಕರು ಸಮೀವುಲ್ಲಾನನ್ನು ಟಿ.ನರಸೀಪುರ ಠಾಣೆಗೆ ಕರೆದೊಯ್ದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸಂತೇಮರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.