ETV Bharat / state

ಭಾರತ್ ಜೋಡೋ ಯಾತ್ರೆ: ವಾಹನ ಸಂಚಾರ ಮಾರ್ಗ ಬದಲಾವಣೆ, ಮದ್ಯ ನಿಷೇಧ - Change of vehicular traffic route

ಭಾರತ್ ಜೋಡೋ ಯಾತ್ರೆ ರಾಜ್ಯ ಪ್ರವೇಶಿಸುತ್ತಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.

Bharat Jodo Yatra
ಭಾರತ್ ಜೋಡೋ ಯಾತ್ರೆ
author img

By

Published : Sep 29, 2022, 12:03 PM IST

Updated : Sep 29, 2022, 12:51 PM IST

ಚಾಮರಾಜನಗರ: ಕಾಂಗ್ರೆಸ್ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆ ನಾಳೆ ಗುಂಡ್ಲುಪೇಟೆ ಮೂಲಕ ರಾಜ್ಯಕ್ಕೆ ಪ್ರವೇಶಿಸುತ್ತಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿದೆ. ಕೇರಳ, ತಮಿಳುನಾಡುವಿನಿಂದ ರಾಜ್ಯಕ್ಕೆ ಬರುವ ಹಾಗೂ ಹೋಗುವ ವಾಹನಗಳು ನಾಳೆ(ಸೆ. 30) ಹಾಗೂ ಅಕ್ಟೋಬರ್ 1 ರಂದು ಬದಲಿ ಮಾರ್ಗದಲ್ಲಿ ಸಂಚರಿಸಲು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶ ಹೊರಡಿಸಿದ್ದಾರೆ‌.

ಮಾರ್ಗ-1: ಕೇರಳದ ಸುಲ್ತಾನ್ ಬತ್ತೇರಿಯಿಂದ ಮೂಲೆಹೊಳೆ ಮಾರ್ಗವಾಗಿ ಮೈಸೂರಿಗೆ ಹೋಗಲಿರುವ ವಾಹನಗಳು ಕಗ್ಗಳದ ಹುಂಡಿ ಗ್ರಾಮದ ಕ್ರಾಸ್ ಬಳಿಯಿಂದ ಚೆನ್ನಮಲ್ಲಿಪುರ-ಹೊಂಗಹಳ್ಳಿ-ಮೂಕಹಳ್ಳಿ-ಮುಂಟಿಪುರ-ಬರಗಿ ಮಾರ್ಗವಾಗಿ ಚಲಿಸಿ, ದೇಶಿಪುರ ಕಾಲೋನಿ ಕ್ರಾಸ್-ದೇಶಿಪುರ-ಆಲತ್ತೂರು-ಹಸಗೂಲಿ ಮಾರ್ಗವಾಗಿ ಗರಗನಹಳ್ಳಿ ಗೇಟ್​ಗೆ ಬಂದು ಮೈಸೂರಿಗೆ ತೆರಳಬೇಕು.

ಮಾರ್ಗ-2: ಕೇರಳದ ಸುಲ್ತಾನ್ ಬತ್ತೇರಿಯಿಂದ ಮೂಲೆಹೊಳೆ ಮಾರ್ಗವಾಗಿ ಊಟಿ ಕಡೆಗೆ ಹೋಗಲಿರುವ ಮತ್ತು ಊಟಿಯಿಂದ ಸುಲ್ತಾನ್ ಬತ್ತೇರಿಗೆ ಹೋಗಲಿರುವ ವಾಹನಗಳು ಕಗ್ಗಳದ ಹುಂಡಿ ಗ್ರಾಮದ ಕ್ರಾಸ್ ಬಳಿಯಿಂದ ಬೇರಂಬಾಡಿ-ಬೀಚನಹಳ್ಳಿ- ಲಕ್ಕಿಪುರ- ಗೋಪಲಾಪುರ -ಕಳ್ಳಿಪುರ- ದೇವರಹಳ್ಳಿ- ಹಂಗಳ ಮಾರ್ಗವಾಗಿ ಊಟಿಗೆ ಮತ್ತು ಕೇರಳದ ಕಡೆಗೆ ತೆರಳಬೇಕು.

ಭಾರತ್ ಜೋಡೋ ಯಾತ್ರೆಗೆ ಸಿದ್ಧತೆ

ಮಾರ್ಗ-3: ಊಟಿ ಕಡೆಯಿಂದ ಮೈಸೂರಿಗೆ ಸಂಚರಿಸಲಿರುವ ವಾಹನಗಳು ಹಂಗಳ- ಹಂಗಳಪುರ- ಶಿವಪುರ- ಕೋಡಹಳ್ಳಿ- ಅಣ್ಣೂರು ಕೇರಿ ಮಾರ್ಗದಿಂದ ಗುಂಡ್ಲುಪೇಟೆ ಪಟ್ಟಣದ ಕೋಡಹಳ್ಳಿ ಸರ್ಕಲ್​ಗೆ ಬಂದು ಚಾಮರಾಜನಗರ ರಸ್ತೆಯ ಮಾರ್ಗವಾಗಿ ಮೈಸೂರಿಗೆ ತೆರಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ನಾಳೆ ರಾಜ್ಯಕ್ಕೆ ಭಾರತ್ ಜೋಡೋ ಯಾತ್ರೆ ಆಗಮನ: ಕಾಂಗ್ರೆಸ್​ ನಾಯಕರ ಫ್ಲೆಕ್ಸ್ ಹರಿದ ಕಿಡಿಗೇಡಿಗಳು

ಮದ್ಯ ನಿಷೇಧ: ಭಾರತ್ ಜೋಡೋ ಯಾತ್ರೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸೆ. 29ರ ಮಧ್ಯರಾತ್ರಿಯಿಂದ ಅ. 1ರ ಮಧ್ಯರಾತ್ರಿಯವರೆಗೆ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಿ ಡಿಸಿ ಆದೇಶಿಸಿದ್ದಾರೆ. ಸೂಚಿತ ಅವಧಿಯಲ್ಲಿ ಮದ್ಯ ಮಾರಾಟ, ಶೇಖರಣೆ, ಸಾಗಾಣಿಕೆ ಅಕ್ಷಮ್ಯ ಅಪರಾಧವಾಗಲಿದೆ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.

ಸ್ವಾಗತಕ್ಕೆ ಸಿದ್ಧತೆ: ಇನ್ನೂ ಕಾಂಗ್ರೆಸ್​ ಮುಖಂಡ ರಾಹುಲ್ ಗಾಂಧಿ ಮತ್ತು ತಂಡ ಈಗಾಗಲೇ ಕೇರಳ ರಾಜ್ಯ ಪ್ರವಾಸ ಮುಗಿಸಿ ತಮಿಳುನಾಡಿನ ಗಡಿಭಾಗ ಗೂಡಲೂರಿಗೆ ಆಗಮಿಸಿದ್ದಾರೆ. ನಾಳೆ ಬೆಳಗ್ಗೆ 8 ರಿಂದ 8.30ರ ಹೊತ್ತಿಗೆ ಗುಂಡ್ಲುಪೇಟೆ ತಲುಪಲಿದ್ದು, 9ರ ಸುಮಾರಿಗೆ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. 5,000ಕ್ಕೂ ಹೆಚ್ಚು ಮಂದಿ ಕೂರಲು ಆಸನ ವ್ಯವಸ್ಥೆ ಮಾಡಲಾಗಿದೆ.

ಊಟಿ ವೃತ್ತದಲ್ಲಿ ನಾಯಕ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಲು ಬೃಹತ್ ಕಮಾನು ನಿರ್ಮಿಸಲಾಗುತ್ತಿದ್ದು, ಎಲ್ಲರನ್ನೂ ಹುಬ್ಬೇರಿಸುತ್ತಿದೆ. ರಾಗಾ ಹೆಜ್ಜೆ ಹಾಕುವ ಮಾರ್ಗದುದ್ದಕ್ಕೂ ರಾಹುಲ್ ಗಾಂಧಿ ಮತ್ತು ರಾಜ್ಯ ನಾಯಕರುಗಳ ಬೃಹತ್ ಕಟೌಟ್​​ಗಳನ್ನು ನಿಲ್ಲಿಸಿದ್ದು ಇಡೀ ರಾಷ್ಟ್ರೀಯ ಹೆದ್ದಾರಿ ಕಾಂಗ್ರೆಸ್ ಮಯವಾಗಿದೆ.

ಸೋಲಿಗರು, ಸಂತ್ರಸ್ತರೊಟ್ಟಿಗೆ ಸಂವಾದ : ಅಂಬೇಡ್ಕರ್ ಭವನ ಕಾರ್ಯಕ್ರಮದ ಬಳಿಕ 10-11ರ ವೇಳೆಗೆ ಪಾದಯಾತ್ರೆ ಆರಂಭಗೊಳ್ಳಲಿದ್ದು ಗುಂಡ್ಲುಪೇಟೆ ಪಟ್ಟಣದ ಹೊರವಲಯದಲ್ಲಿರುವ ಕೆಬ್ಬೆಕಟ್ಟೆ ಶನೀಶ್ವರ ದೇವಾಲಯ ಸಮೀಪ ಬಿಳಿಗಿರಿರಂಗನ ಬೆಟ್ಟ ಸೋಲಿಗರು ಮತ್ತು ಚಾಮರಾಜನಗರ ಜಿಲ್ಲಾಸ್ಪತ್ರೆಯ ಆಮ್ಲಜನಕ ದುರಂತದ ಸಂತ್ರಸ್ತರ ಜೊತೆ ರಾಹುಲ್ ಗಾಂಧಿ ಸಂವಾದ ನಡೆಸಲಿದ್ದಾರೆ‌. ರಾಜ್ಯ ನಾಯಕರುಗಳಾದ ಸಿದ್ದರಾಮಯ್ಯ, ಡಿಕೆಶಿ, ಖರ್ಗೆ, ಬಿ.ಕೆ.ಹರಿಪ್ರಸಾದ್ ಸೇರಿದಂತೆ ರಾಜ್ಯ ನಾಯಕರುಗಳ ದಂಡೇ ಇಲ್ಲಿಗೆ ಹರಿದು ಬರಲಿದೆ.‘

30,000 ಕಾರ್ಯಕರ್ತರ ನಿರೀಕ್ಷೆ: ಪಾದಯಾತ್ರೆಯಲ್ಲಿ 30 ಸಾವಿರಕ್ಕೂ ಹೆಚ್ಚು ಮಂದಿ ಹೆಜ್ಜೆ ಹಾಕಲಿದ್ದು ಗುಂಡ್ಲುಪೇಟೆ ಪಟ್ಟಣದಲ್ಲಿ ಇರುವ ಎಲ್ಲಾ ಕಲ್ಯಾಣ ಮಂಟಪಗಳನ್ನು ಬಾಡಿಗೆಗೆ ಪಡೆದು ಉಪಾಹಾರ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ. ಪಾದಯಾತ್ರೆ ಉದ್ದಕ್ಕೂ ಕಾರ್ಯರ್ತರಿಗೆ ಮಜ್ಜಿಗೆ, ನೀರು ಮತ್ತು ತಿಂಡಿಗಳನ್ನು ನೀಡಲು ಸ್ಥಳೀಯ ಕಾರ್ಯಕರ್ತರು ಸಿದ್ಧತೆ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಕೈ ಪಡೆ ಕಹಳೆ ಮೊಳಗಿಸಲು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದು ಕ್ಷಣಗಣನೆ ಆರಂಭವಾಗಿದೆ.

Last Updated : Sep 29, 2022, 12:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.