ETV Bharat / state

ಬಾಳೆಗೆ ಕಳ್ಳರ ಕಾಟ.. ಬೆಲೆ ಹೆಚ್ಚಾದಂತೆ ಕಂಡಕಂಡಲ್ಲಿ ಫಸಲು ಕಟಾವು! - ಈಟಿವಿ ಭಾರತ್ ನ್ಯೂಸ್

ಚಾಮರಾಜನಗರದ ವಿವಿಧೆಡೆ ಕಂಡಕಂಡಲ್ಲಿ ಕಳ್ಳರು ಬಾಳೆ ಫಸಲು ಕದಿಯುತ್ತಿರುವ ಘಟನೆ ನಡೆದಿದೆ.

Bananas were stolen and harvested
ಬಾಳೆಗೊನೆಗಳನ್ನು ಕದ್ದು ಕಟಾವು ಮಾಡಿರುವುದು
author img

By

Published : Nov 7, 2022, 2:10 PM IST

ಚಾಮರಾಜನಗರ: ರೈತರು ಕಷ್ಟಪಟ್ಟು ಬೆಳೆಯುವ ಬೆಳೆಗೆ ಬರ‌ ಹಾಗೂ ಮಳೆ ಜೊತೆ ಪ್ರಾಣಿಗಳಿಂದ ರಕ್ಷಣೆ ‌ಮಾಡಿಕೊಳ್ಳುತ್ತಿದ್ದ ರೈತರಿಗೆ ಈಗ ಕಳ್ಳರ ಕಾಟವು ತಲೆನೋವಾಗಿ ಪರಿಣಮಿಸಿದೆ. ಚಾಮರಾಜನಗರದ ವಿವಿಧೆಡೆ ಕಂಡಕಂಡಲ್ಲಿ ಕಳ್ಳರು ಬಾಳೆ ಫಸಲು ಕದಿಯುತ್ತಿದ್ದಾರೆ. ಬಾಳೆಗೆ ಬೆಲೆ ಹೆಚ್ಚಾದಂತೆ ಬೇಡರಪುರ ಹಾಗೂ ಹೆಗ್ಗೋಠಾರ ಗ್ರಾಮದಲ್ಲಿ ಬಾಳೆಗೊನೆಗಳನ್ನು ಖದೀಮರು ಕಟಾವು ಮಾಡಿರುವ ಘಟನೆ ನಡೆದಿದೆ.

ಬಾಳೆಗೊನೆಗಳನ್ನು ಕಟಾವು ಮಾಡಿ ಕದ್ದೊಯ್ದಿರುವ ಖದೀಮರು

ಬೇಡರಪುರ ಗ್ರಾಮದ ಮೂರ್ತಿ ಎಂಬುವರ ಜಮೀನಿನಲ್ಲಿ ರಾತ್ರೋರಾತ್ರಿ 300ಕ್ಕೂ ಹೆಚ್ಚು ಬಾಳೆಗೊನೆಗಳನ್ನು ಕದ್ದು ಕಟಾವು ಮಾಡಿಕೊಂಡು ಹೋಗಿದ್ದಾರೆ. ಈ ಘಟನೆಯಿಂದಾಗಿ ಬೆಳೆಗೆ ಬೆಲೆ ಬಂದ ಕೂಡಲೇ ಕಳ್ಳರ ಕಾಟವನ್ನು ರೈತರು ಎದುರಿಸುವಂತಾಗಿದೆ. ಕಳ್ಳರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ರೈತ ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇದನ್ನೂ ಓದಿ;ಕಲಬುರಗಿ ರೈತನಿಗೆ ವರವಾದ ಬಾಳೆ ಕೃಷಿ: ಇರಾಕ್‌ಗೆ ರಫ್ತು, 20 ಲಕ್ಷ ಆದಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.