ETV Bharat / state

ಮರಿಗಜ ಸುರಕ್ಷಿತವಾಗಿ ರಸ್ತೆ ದಾಟಿಸಿದ ಆನೆ ಹಿಂಡು.. ವಿಡಿಯೋ ವೈರಲ್​..

ಮಧುಮಲೈ ರಸ್ತೆಯಲ್ಲಿ ಮರಿ ಆನೆ ಎಂಬುದನ್ನು ಸುರಕ್ಷಿತವಾಗಿ ದಾಟಿಸುತ್ತಿದ್ದ ಗಜ ಪರಿವಾರದ ವಿಡಿಯೋವನ್ನು ಕಾರಿನಲ್ಲಿ ತೆರಳುತ್ತಿದ್ದ ಕುಟುಂಬಸ್ಥರು ಸೆರೆ ಹಿಡಿದಿದ್ದಾರೆ‌‌.

baby-elephant-crossing-the-road-with-group of elephants-video-goes-viral
ಮರಿಯನ್ನು ಸುರಕ್ಷಿತವಾಗಿ ರಸ್ತೆ ದಾಟಿಸಿದ ಆನೆ ಹಿಂಡು
author img

By

Published : Oct 18, 2021, 5:00 PM IST

ಚಾಮರಾಜನಗರ: ಹುಟ್ಟಿ ಕೆಲ ದಿನಗಳಾಗಿರುವ ಮರಿಯನ್ನು ಆನೆಗಳು ಅತ್ಯಂತ ಸುರಕ್ಷಿತವಾಗಿ ರಸ್ತೆ ದಾಟಿಸಿರುವ ಘಟನೆ ಬಂಡೀಪುರ - ಮಧುಮಲೈ ರಸ್ತೆಯಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಮರಿಯನ್ನು ಸುರಕ್ಷಿತವಾಗಿ ರಸ್ತೆ ದಾಟಿಸಿದ ಆನೆ ಹಿಂಡು

ಮಧುಮಲೈ ರಸ್ತೆಯಲ್ಲಿ ಮರಿಯಾನೆ ಸುರಕ್ಷಿತವಾಗಿ ದಾಟಿಸುತ್ತಿದ್ದ ಗಜ ಪರಿವಾರದ ವಿಡಿಯೋವನ್ನು ಕಾರಿನಲ್ಲಿ ತೆರಳುತ್ತಿದ್ದ ಕುಟುಂಬಸ್ಥರು ಸೆರೆ ಹಿಡಿದಿದ್ದಾರೆ‌‌. ಮರಿಯಾನೆ ಪಕ್ಕ ಮೂರಾನೆ, ಹಿಂದೆ ಎರಡಾನೆಗಳು, ಈ ತಂಡವನ್ನು ಮುನ್ನಡೆಸುವ ಮತ್ತೆರೆಡು ಆನೆಗಳು ಅದನ್ನು ಸುರಕ್ಷಿತವಾಗಿ ರಸ್ತೆ ದಾಟಿಸಿ ಕಾಡೊಳಗೆ ಕರೆದೊಯ್ದಿವೆ.

ಅತ್ಯಂತ ಜಾಗರೂಕವಾಗಿ, ಸುರಕ್ಷಿತವಾಗಿ ಮರಿಯನ್ನು ಕರೆದೊಯ್ದಿರುವ ವಿಡಿಯೋ ಯೂಟ್ಯೂಬ್ ಸೇರಿದಂತೆ ವಾಟ್ಸ್​​ಆ್ಯಪ್​ನಲ್ಲಿ ಸಖತ್ ಹವಾ ಸೃಷ್ಟಿಸಿದೆ. ಆನೆ ಸಂಘಜೀವಿಯಾಗಿದ್ದು ಹಲವು ವರ್ತನೆಗಳಲ್ಲಿ ಮಾನವನಿಗೆ ಹೋಲಿಕೆಯಾಗಲಿದೆ ಎಂಬ ಮಾತುಗಳು ಕೇಳಿಬಂದಿವೆ.

ಓದಿ: ಚಂಪಕ ಸರಸ್ಸು ಕೊಳ ಪುನಶ್ಚೇತನಕ್ಕೆ YASH BOSS ಉತ್ತೇಜನ.. ಪುರಾತನ ಜಲಮೂಲಕ್ಕೀಗ 'ಯಶೋ ಮಾರ್ಗ'..

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.