ETV Bharat / state

ಮದುವೆ ಸಂಭ್ರಮದ ದಿನವೇ ಪರೀಕ್ಷೆ ಬರೆದ ಮಧುವಣಗಿತ್ತಿ!

ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿ ಗ್ರಾಮದ ಶ್ರೀಶೋಭಾ ಎಂಬ ನವವಧು ಮಾಂಗಲ್ಯ ಧಾರಣೆ ಬಳಿಕ ಸ್ವಗ್ರಾಮದಲ್ಲೇ ಇರುವ ಶ್ರೀಮದ್ದಾನೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ಬಿಎ ರಾಜ್ಯಶಾಸ್ತ್ರ ಪರೀಕ್ಷೆ ಬರೆದು ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.

ಮದುವೆ ಸಂಭ್ರಮದ ನಡುವೆಯೂ ಪರೀಕ್ಷೆ ಬರೆದ ಮಧುವಣಗಿತ್ತಿ
author img

By

Published : May 20, 2019, 8:50 PM IST

ಚಾಮರಾಜನಗರ: ಮದುವೆ ಎಂದರೆ ಸಂಭ್ರಮ, ಸ್ನೇಹಿತರೊಂದಿಗೆ ಫೋಟೊ, ಮಧುಚಂದ್ರದ ಸಿದ್ಧತೆ ಮುಂದೆ ಎಲ್ಲವೂ ಗೌಣ. ಆದರೆ, ಇಲ್ಲೋರ್ವ ವಧು ಮದುವೆಯ ಸಂಭ್ರಮದಲ್ಲೂ ಪದವಿ ಪರೀಕ್ಷೆಗೆ ಹಾಜರಾಗಿ ಶಿಕ್ಷಣದ ಮಹತ್ವ ಸಾರಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿ ಗ್ರಾಮದ ಶ್ರೀಶೋಭಾ ಎಂಬ ನವವಧು ಮಾಂಗಲ್ಯ ಧಾರಣೆ ಬಳಿಕ ಸ್ವಗ್ರಾಮದಲ್ಲೇ ಇರುವ ಶ್ರೀಮದ್ದಾನೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ಬಿಎ ರಾಜ್ಯಶಾಸ್ತ್ರ ಪರೀಕ್ಷೆ ಬರೆಯುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

attend exam after marriage function
ಮದುವೆ ಸಂಭ್ರಮದ ನಡುವೆಯೂ ಪರೀಕ್ಷೆ ಬರೆದ ಮಧುವಣಗಿತ್ತಿ...!

ಕುಂದಕೆರೆಯ ಗ್ರಾಮದ ಮಣಿಕಂಠ ಎಂಬವರೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ, ಮದುವೆ ದಿನದಂದೇ ಪರೀಕ್ಷೆಯೂ ಇತ್ತು. ಓದಿನಲ್ಲಿ ಮುಂದಿರುವ ಶ್ರೀಶೋಭಾ ಪರೀಕ್ಷೆ ತಪ್ಪಿಸಿಕೊಳ್ಳಲು ಇಷ್ಟಪಡದೇ ಮದುವೆಯ ಸಂಭ್ರಮದಲ್ಲೂ ಪರೀಕ್ಷೆ ಬರೆದು ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ.

ಈ ಕುರಿತು ಕಾಲೇಜು ಆಡಳಿತ ಮಂಡಳಿ ಮತ್ತು ವಧುವಿನ ಸಂಬಂಧಿಕರು ಶ್ರೀಶೋಭಾ ಕಾರ್ಯಕ್ಕೆ ಜೈ ಎಂದಿದ್ದಾರೆ. ಈಕೆಯ ನಡೆ ಇನ್ನಿತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ.

Intro:ತಾಳಿ ಕಟ್ಟಿಸಿಕೊಂಡ ಬಳಿಕ ಕಾಲೇಜಿಗೆ ಬಂದ ವಧು: ಮದುವೆಯ ಸಂಭ್ರಮದಲ್ಲೂ ಪರೀಕ್ಷೆ ಬರೆದ ಮಧುವಣಗಿತ್ತಿ

ಚಾಮರಾಜನಗರ: ಮದುವೆ ಎಂದರೆ ಸಂಭ್ರಮ, ಸ್ನೇಹಿತರೊಂದಿಗೆ ಫೋಟೋ, ಮಧುಚಂದ್ರದ ಸಿದ್ದತೆ ಮುಂದೆ ಎಲ್ಲವೂ ಗೌಣ. ಆದರೆ, ಇಲ್ಲೊರ್ವ ವಧು ಮದುವೆಯ ಸಂಭ್ರಮದಲ್ಲೂ ಪದವಿ ಪರೀಕ್ಷೆಗೆ ಹಾಜರಾಗಿ ಶಿಕ್ಷಣದ ಮಹತ್ವ ಸಾರಿದ್ದಾರೆ.

Body:ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿ ಗ್ರಾಮದ ಶ್ರೀಶೋಭಾ ಎಂಬ ನವವಧು ಮಾಂಗಲ್ಯಧಾರಣೆ ಬಳಿಕ ಸ್ವಗ್ರಾಮದಲ್ಲೇ ಇರುವ ಶ್ರೀಮದ್ದಾನೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೈವಿವಿಯ ಅಂತಿಮ ಬಿಎ ರಾಜ್ಯಶಾಸ್ತ್ರ ಪರೀಕ್ಷೆ ಬರೆದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಕುಂದಕೆರೆಯ ಗ್ರಾಮದ ಮಣಿಕಂಠ ಎಂಬವರೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ, ಮದುವೆ ದಿನದಂದೇ ಪರೀಕ್ಷೆಯೂ ಬಂದೆರಗಿತ್ತು ಓದಿನಲ್ಲಿ ಮುಂದಿರುವ ಶ್ರೀಶೋಭಾ ಪರೀಕ್ಷೆ ತಪ್ಪಿಸಿಕೊಳ್ಳಲು ಇಷ್ಟಪಡದೇ ಮದುವೆಯ ಸಂಭ್ರಮದಲ್ಲೂ ಪರೀಕ್ಷೆ ಬರೆದು ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ.

Conclusion:ಈ ಕುರಿತು ಕಾಲೇಜು ಆಡಳಿತ ಮಂಡಲಿ ಮತ್ತು ವಧುವಿನ ಸಂಬಂಧಿಕರು ಶ್ರೀಶೋಭಾ ಕಾರ್ಯಕ್ಕೆ ಜೈ ಎಂದಿದ್ದಾರೆ. ಈಕೆಯ ಕಾರ್ಯವೂ ಇನ್ನಿತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.