ETV Bharat / state

ಅಂದು 1 ಮತದ ಅಂತರದಿಂದ ಸೋತಿದ್ದ ARK ಗೆ 59 ಸಾವಿರ ಮತಗಳ ಗೆಲುವು: ಎನ್​ ಮಹೇಶ್​ಗೆ ಹೀನಾಯ ಸೋಲು - ಕಾಂಗ್ರೆಸ್ ಗ್ಯಾರಂಟಿ ಕಾರ್ಡ್​

ಕಾಂಗ್ರೆಸ್​ ಅಭ್ಯರ್ಥಿ ಎ ಆರ್ ಕೃಷ್ಣಮೂರ್ತಿ ಬರೋಬ್ಬರಿ 59,519 ಮತಗಳ ಅಂತರದಿಂದ ಬಿಜೆಪಿ ಶಾಸಕ ಎನ್​ ಮಹೇಶ್​ ವಿರುದ್ಧ ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್​ ಅಭ್ಯರ್ಥಿ ಎ ಆರ್ ಕೃಷ್ಣಮೂರ್ತಿ
ಕಾಂಗ್ರೆಸ್​ ಅಭ್ಯರ್ಥಿ ಎ ಆರ್ ಕೃಷ್ಣಮೂರ್ತಿ
author img

By

Published : May 13, 2023, 6:32 PM IST

ಚಾಮರಾಜನಗರ :‌ ಧ್ರುವನಾರಾಯಣ ವಿರುದ್ಧ 1 ಮತದ ಅಂತರದಿಂದ ಸೋತ ಬಳಿಕ ನಿರಂತರವಾಗಿ ಸೋಲು ಅನುಭವಿಸಿದ್ದ ಎ ಆರ್‌ ಕೃಷ್ಣಮೂರ್ತಿಗೆ ಕೊಳ್ಳೇಗಾಲದ ಮತದಾರರು ಭರ್ಜರಿ ಗೆಲುವನ್ನೇ ಕೊಟ್ಟಿದ್ದಾರೆ.

ಹೌದು.. ಹಾಲಿ ಬಿಜೆಪಿ ಶಾಸಕ ಎನ್ ಮಹೇಶ್ ವಿರುದ್ಧ ಎ ಆರ್ ಕೃಷ್ಣಮೂರ್ತಿ ಬರೋಬ್ಬರಿ 59,519 ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ನಿರಂತರ ಸೋಲಿಗೆ ಫುಲ್ ಸ್ಟಾಪ್ ಇಟ್ಟು ರಾಜಕೀಯದಲ್ಲಿ ಮತ್ತೆ ಮೇಲೆದ್ದಿದ್ದಾರೆ. ನಿರಂತರ ಸೋಲಿನಿಂದ ಕಂಗೆಟ್ಟಿದ್ದ ಎಆರ್​ಕೆಗೆ ಈ ಗೆಲುವು ಹೊಸತನವನ್ನು ಕೊಟ್ಟಿದ್ದು, 1 ಮತದ ಸೋಲನ್ನು ಈ ಭರ್ಜರಿ ಗೆಲುವು ಮರೆಸಿದೆ.

2004ರಲ್ಲೂ ಧ್ರುವನಾರಾಯಣ್​ ವಿರುದ್ಧ ಸಂತೆಮಾರನಹಳ್ಳಿ ಕ್ಷೇತ್ರದಿಂದ ಒಂದೇ ಮತದ ಅಂತರದಲ್ಲಿ ಎ ಆರ್‌ ಕೃಷ್ಣಮೂರ್ತಿ ಸೋತಿದ್ದರು.

ಇದನ್ನೂ ಓದಿ: ಮಲ್ಲೇಶ್ವರದಿಂದ ಡಾ ಸಿ ಎನ್ ಅಶ್ವತ್ಥನಾರಾಯಣ್​ ಆಯ್ಕೆ: ಕಾರ್ಯಕರ್ತರ ಸಂಭ್ರಮ

ಮಹೇಶ್​ಗೆ ಹೀನಾಯ ಸೋಲು : ಜಿಲ್ಲೆಯಲ್ಲಿ ಅಧಿಕ ಮತಗಳ ಅಂತರದಿಂದ ಸೋಲುಂಡ ಶಾಸಕರಾಗಿ ಮಹೇಶ್ ಇದ್ದು ಭರ್ತಿ 59 ಸಾವಿರ ಮತಗಳ ಅಂತರದಿಂದ ಹೀನಾಯ ಸೋಲು ಅನುಭವಿಸಿದ್ದಾರೆ. ಬಿಎಸ್ಪಿ ಇಂದ ಬಿಜೆಪಿಗೆ ತೆರಳಿದ ಬಳಿಕ ತಾಲೂಕಿನಲ್ಲಿ ಉಂಟಾದ ವಿರೋಧ ಮತಪೆಟ್ಟಿಗೆಯಲ್ಲಿ ತೋರಿದೆ.

ಇದನ್ನೂ ಓದಿ: ಮೊದಲ ಚುನಾವಣೆಯಲ್ಲೇ ಭರ್ಜರಿ ಗೆಲುವು; ಕೆ ಸುಧಾಕರ್​ ವಿರುದ್ಧ ಗೆದ್ದು ಬೀಗಿದ ಪ್ರದೀಶ್​ ಈಶ್ವರ್​​​

ಎ ಆರ್ ಕೃಷ್ಣಮೂರ್ತಿಗೆ ಅನುಕಂಪ, ಬಿಎಸ್ಪಿ ಬೆಂಬಲ, ಕಾಂಗ್ರೆಸ್ ಗೆ ಹಲವರ ಸೇರ್ಪಡೆ ಕೈ ಗೆಲುವಿಗೆ ಸಹಕಾರವಾಗಿದ್ದು, ಮಹೇಶ್ ಅವರಿಗೆ ವ್ಯಾಪಕ ಆಡಳಿತ ವಿರೋಧಿ ನೀತಿ ಮತಪೆಟ್ಟಿಗೆಯಲ್ಲಿ ಕೆಲಸ ಮಾಡಿದೆ.

ಫೈಟ್ ಕೊಡದ ಪೊಲೀಸ್ ಇನ್ಸ್ಪೆಕ್ಟರ್: ಪೊಲೀಸ್ ಹುದ್ದೆಗೆ ರಾಜೀನಾಮೆ ಕೊಟ್ಟು ರಾಜಕೀಯಕ್ಕೆ ಧುಮುಕಿ ಜೆಡಿಎಸ್ ನಿಂದ ಕಣಕ್ಕಿಳಿದಿದ್ದ ಬಿ‌ ಪುಟ್ಟಸ್ವಾಮಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಯಾವುದೇ ಸವಾಲು ಒಡ್ಡಿಲ್ಲ. ಕೇವಲ 3925 ಮತಗಳಿಗಷ್ಟೇ ತೃಪ್ತಿಪಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ಸಚಿವ ಸುಧಾಕರ್ ಸೋಲಿಸಿದ ಪ್ರದೀಪ್​ ಈಶ್ವರ್.. ​​​ಇದು ಜನಸಾಮಾನ್ಯರ ಜಯ ಎಂದ ಪರಿಶ್ರಮ ಅಕಾಡೆಮಿ ಮುಖ್ಯಸ್ಥ

ಅಂತರ ಮುಖ್ಯವಲ್ಲ- ಗೆಲುವು ಮುಖ್ಯ: 1 ಮತದ ಅಂತರದಿಂದ ಸೋತ ನನಗೆ ಅಂತರ ಮುಖ್ಯವಲ್ಲ, ಗೆಲುವು ಮುಖ್ಯ ಎಂದು ಕೊಳ್ಳೇಗಾಲದ ವಿಜೇತ ಕಾಂಗ್ರೆಸ್ ಅಭ್ಯರ್ಥಿ ಎ ಆರ್ ಕೃಷ್ಣಮೂರ್ತಿ ಹೇಳಿದ್ದಾರೆ.

1 ಮತದ ಅಂತರದಿಂದ ಸೋತಿದ್ದೆ. ಆದರೀಗ 50 ಸಾವಿರಕ್ಕೂ ಅಧಿಕ ಮತಗಳ‌ ಅಂತರದಿಂದ ಗೆದ್ದಿದ್ದೇನೆ. ನನಗೆ ಅಂತರ ಮುಖ್ಯವಲ್ಲ. ಗೆಲುವು ಮುಖ್ಯ. ಸಿದ್ದರಾಮಯ್ಯ ಸರ್ಕಾರದ ಸಾಧನೆ, ಕಾಂಗ್ರೆಸ್ ಗ್ಯಾರಂಟಿ ಕಾರ್ಡ್​ಗಳು. ನನ್ನ ಮೇಲಿದ್ದ ಜನರ ವಿಶ್ವಾಸ. ಪಕ್ಷದ ಸಂಘಟನೆಯಿಂದ ಈ ಬಾರಿ ಗೆದ್ದಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: ಚಾಮರಾಜನಗರದಲ್ಲಿ ಒಂದು ಸುತ್ತಲ್ಲೂ ಮುನ್ನಡೆ ಸಾಧಿಸದ ವಿ.ಸೋಮಣ್ಣ: 4ನೇ ಬಾರಿ ಗೆದ್ದ ಪುಟ್ಟರಂಗಶೆಟ್ಟಿ

ಪಡೆದ ಮತಗಳು:

ಕಾಂಗ್ರೆಸ್- ಎ ಆರ್ ಕೃಷ್ಣಮೂರ್ತಿ- 108363

ಬಿಜೆಪಿ- ಎನ್‌ ಮಹೇಶ್- 48844

ನೋಟಾ- 1671

ಇದನ್ನೂ ಓದಿ: ಎರಡು ದಶಕಗಳ ಚುನಾವಣಾ ಇತಿಹಾಸದಲ್ಲೇ ಜೆಡಿಎಸ್​ ಅತ್ಯಂತ ಕಳಪೆ ಸಾಧನೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.