ETV Bharat / state

'ಕಂಟೈನ್‌ಮೆಂಟ್‌ ಝೋನ್​ನಲ್ಲಿ ಅಗತ್ಯ ವಸ್ತು ಪೂರೈಸಿಲ್ಲ': ಬಾಗಳಿ ನಿವಾಸಿಗಳ ಆಕ್ರೋಶ

ಚಾಮರಾಜನಗರದ ಬಾಗಳಿಯನ್ನು ಕೊರೊನಾ ಕಂಟೈನ್‌ಮೆಂಟ್ ವಲಯ‌ ಎಂದು ಘೋಷಿಸಲಾಗಿದೆ. ಆದರೆ ಗ್ರಾಮಸ್ಥರಿಗೆ ಬೇಕಾದ ಯಾವುದೇ ಅಗತ್ಯ ಸೌಲಭ್ಯ ನೀಡಲು ಜಿಲ್ಲಾಡಳಿತ ವಿಫಲವಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ddsdsd
ಕಂಟೈನ್ಮೆಂಟ್ ಝೋನ್​ನಲ್ಲಿ ಅಗತ್ಯ ವಸ್ತು ಪೂರೈಸಿಲ್ಲ ಎಂದು ಬಾಗಳಿ ನಿವಾಸಿಗಳ ಆಕ್ರೋಶ..!
author img

By

Published : Jul 19, 2020, 4:50 PM IST

ಚಾಮರಾಜನಗರ: ಕಂಟೈನ್‌ಮೆಂಟ್‌ ವಲಯದಲ್ಲಿ ಯಾವುದೇ ರೀತಿಯ ಅಗತ್ಯ ವಸ್ತುಗಳನ್ನು ಪೂರೈಸಿಲ್ಲ ಎಂದು ಆರೋಪಿಸಿ ಅಧಿಕಾರಿಗಳ ವಿರುದ್ಧ ಜನರು ಪ್ರತಿಭಟಿಸಿರುವ ಘಟನೆ ಸಂತೇಮರಹಳ್ಳಿ ಹೋಬಳಿಯ ಬಾಗಳಿ ಗ್ರಾಮದಲ್ಲಿ ನಡೆದಿದೆ.

ಕಂಟೈನ್‌ಮೆಂಟ್‌ ಝೋನ್​ನಲ್ಲಿ ಅಗತ್ಯ ವಸ್ತು ಪೂರೈಸಿಲ್ಲ ಎಂದು ಬಾಗಳಿ ನಿವಾಸಿಗಳ ಆಕ್ರೋಶ

ನಿರ್ಬಂಧಿತ ವಲಯದ ನಿವಾಸಿಗಳಿಗೆ ಆಹಾರ, ಹಾಲು ಸೇರಿದಂತೆ ಇನ್ನಿತರ ಗೃಹೋಪಯೋಗಿ ವಸ್ತುಗಳನ್ನು ತಂದು ಕೊಡುವವರೇ ಇಲ್ಲ. ಪ್ರದೇಶಕ್ಕೆ ಬ್ಲೀಚಿಂಗ್ ಪೌಡರ್ ಹಾಕಿ ಹೋದವರು ತಮ್ಮ ಕಷ್ಟ ಸುಖ ಕೇಳುತ್ತಿಲ್ಲ ಎಂದು‌ ಗ್ರಾಮಪಂಚಾಯಿತಿ ವಿರುದ್ಧ ಸ್ಥಳೀಯರು ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ.

ಆದ್ರೆ, ಅಗತ್ಯ ವಸ್ತುಗಳನ್ನು ತಂದುಕೊಡಲು ಗ್ರಾಮ ಪಂಚಾಯತಿ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾಡಳಿತ ಹೇಳುತ್ತಿದೆ. ನಮಗೆ ಅಗತ್ಯ ವಸ್ತು ತಂದುಕೊಡುವವರೇ ಇಲ್ಲ. ಊಟ, ತಿಂಡಿಗೂ ತೊಂದರೆ ಆಗಿದೆ ಎಂದು‌ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.