ETV Bharat / state

ಪ್ರಧಾನಿ ಮೋದಿ ಭೇಟಿ ಹಿನ್ನೆಲೆ: ಬಂಡೀಪುರದಲ್ಲಿ ಹೈ ಅಲರ್ಟ್.. ವಾಹನ ಸಂಚಾರ ನಿರ್ಬಂಧ

ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ - ಬಂಡೀಪುರದಲ್ಲಿ ಹೈ ಅಲರ್ಟ್ - ವಾಹನ ಸಂಚಾರ ನಿರ್ಬಂಧ- ಡ್ರೋನ್ ಹಾರಾಟವೂ ಬಂದ್.

police high alert in Bandipur
ಬಂಡೀಪುರದಲ್ಲಿ ಖಾಕಿ ಹೈ ಅಲರ್ಟ್
author img

By

Published : Apr 7, 2023, 9:28 AM IST

ಬಂಡೀಪುರದಲ್ಲಿ ಖಾಕಿ ಹೈ ಅಲರ್ಟ್

ಚಾಮರಾಜನಗರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರರಕ್ಕೆ ಭೇಟಿ ನೀಡಲಿರುವ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗಿದೆ. ಬಂಡೀಪುರ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 181 ಮತ್ತು 766ರ ರಸ್ತೆಯಲ್ಲಿ ತಮಿಳುನಾಡು ಕಡೆಗೆ ಹೋಗುವ ಮತ್ತು ಬರುವ ಎಲ್ಲ ವಾಹನಗಳನ್ನು ಏ.7ರ ಸಂಜೆ 4 ಗಂಟೆಯಿಂದ ಏ.9ರ ಬೆಳಗ್ಗೆ 12 ಗಂಟೆಯವರೆಗೆ ಮತ್ತು ಸರ್ಕಾರಿ ವಾಹನ, ಸರ್ಕಾರಿ ಬಸ್​​ಗಳನ್ನು ಹೊರತುಪಡಿಸಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಏ.8ರ ಸಂಜೆ 4 ಗಂಟೆಯಿಂದ ಏ.9ರ ಬೆಳಗ್ಗೆ 12 ಗಂಟೆಯವರೆಗೆ ನಿರ್ಬಂಧಿಸಿ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಆದೇಶ ಹೊರಡಿಸಿದ್ದಾರೆ. ಇನ್ನು ರಕ್ಷಣಾ ಹಿತದೃಷ್ಠಿಯಿಂದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಎಲ್ಲಾ ರೀತಿಯ ಡ್ರೋನ್ ಹಾರಾಟವನ್ನು ಏ.9ರವರೆಗೆ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ಸಫಾರಿಯೂ ಬಂದ್: ಇದೇ 9 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರಕ್ಕೆ ಭೇಟಿ ನೀಡಲಿರುವ ಹಿನ್ನೆಲೆ ಈಗಾಗಲೇ ಕಳೆದ ಎರಡು ದಿನಗಳಿಂದ ವನ್ಯಜೀವಿ ಸಫಾರಿ ನಿಷೇಧಿಸಲಾಗಿದೆ. ಬಿಗಿ ಭದ್ರತೆ, ಪೂರ್ವ ಸಿದ್ಧತೆ ಕೈಗೊಳ್ಳುವ ಉದ್ದೇಶದಿಂದ ಏ.5 ರಿಂದ ಏ.9 ರವರೆಗೆ ವನ್ಯಜೀವಿ ಸಫಾರಿಯನ್ಬು ನಿರ್ಬಂಧಿಸಿ ಡಿಸಿ ಆದೇಶ ಹೊರಡಿಸಿದ್ದರು.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು ರಾಜ್ಯದಲ್ಲೇ ಅತ್ಯಧಿಕ ಹುಲಿಗಳಿರುವ ರಕ್ಷಿತಾರಣ್ಯ. ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಸಫಾರಿ ನಡೆಯುತ್ತಿತ್ತು‌‌. ಜತೆಗೆ, ಬಂಡೀಪುರ ವ್ಯಾಪ್ತಿಯಲ್ಲಿ ಬರುವ ರೆಸಾರ್ಟ್, ಹೋಂ ಸ್ಟೇ, ಲಾಡ್ಜ್ ಗಳಲ್ಲಿ ಜನರ ವಾಸ್ತವ್ತ, ತಂಗುವಿಕೆ, ಭೇಟಿಯನ್ನು ನಿಷೇಧಿಸಲಾಗಿದೆ.

ಪ್ರಧಾನಿ ಮೋದಿ ಮೈಸೂರು ಪ್ರವಾಸದ ವಿವರ: ಮೋದಿ ಅವರು ಏ. 8 ಮತ್ತು 9 ರಂದು ಮೈಸೂರು ಪ್ರವಾಸ ಕೈಗೊಳ್ಳಲಿದ್ದಾರೆ. ಏ. 8 ರಂದು ರಾತ್ರಿ 8:30ಕ್ಕೆ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ಅವರು ಇಲ್ಲಿನ ರ‍್ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ರಾತ್ರಿ ವಾಸ್ತವ್ಯ ಹೂಡುವರು. ಏ.9ರ ಬೆಳಗ್ಗೆ 6:30ಕ್ಕೆ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಬಂಡೀಪುರಕ್ಕೆ ಹೆಲಿಕಾಪ್ಟರ್ ಮೂಲಕ ಪ್ರಯಾಣ ಬೆಳೆಸಲಿದ್ದಾರೆ.

ಬೆಳಗ್ಗೆ 7 ಗಂಟೆಯಿಂದ 9.30ರವರೆಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಬಂಡೀಪುರದಿಂದ ತಮಿಳುನಾಡಿನ ನೀಲಗಿರಿಗೆ ಪ್ರಯಾಣ ಬೆಳೆಸುವರು. ನೀಲಗಿರಿಯಲ್ಲಿನ ಆನೆ ಶಿಬಿರಕ್ಕೆ ಮೋದಿ ಭೇಟಿ ನೀಡಲಿದ್ದಾರೆ. ಅಂದು ಬೆಳಗ್ಗೆ 11 ಗಂಟೆಗೆ ನೀಲಗಿರಿಯಿಂದ ಮೈಸೂರಿನ ಕೆಎಸ್ಒಯುನ ತಾತ್ಕಾಲಿಕ ಹೆಲಿಪ್ಯಾಡ್‌ಗೆ ಆಗಮಿಸುವರು. ಮಧ್ಯಾಹ್ನ 12.30ಕ್ಕೆ ಕೆಎಸ್ಒಯುನ ಘಟಿಕೋತ್ಸವ ಭವನದಲ್ಲಿ ನಡೆಯುವ ಬಂಡೀಪುರ ಹುಲಿ ಯೋಜನೆಯ 50 ವರ್ಷದ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಆ ನಂತರ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ದೆಹಲಿಗೆ ವಾಪಸ್​ ಆಗಲಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಬಂಡೀಪುರ ಭೇಟಿ: 4 ದಿನ ಸಫಾರಿ ಇರಲ್ಲ, ರೆಸಾರ್ಟ್, ಹೋಂಸ್ಟೇಗೆ ನಿರ್ಬಂಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.