ETV Bharat / state

ಚಾಮರಾಜನಗರ: ನಟ ವಿಜಯ್​ ರಾಘವೇಂದ್ರರಿಂದ ರಕ್ತದಾನ.. ನೇತ್ರದಾನ ಮಾಡಲು ಕರೆ - ಚಾಮರಾಜನಗರದಲ್ಲಿ ಪುನೀತ್ ನಮನ ಕಾರ್ಯಕ್ರಮ

Vijay Raghavendra donates blood: ಚಾಮರಾಜನಗರ ಮೆಡಿಕಲ್ ಕಾಲೇಜಿನ ರಕ್ತನಿಧಿ ಕೇಂದ್ರದಲ್ಲಿಂದು ನಟ ವಿಜಯ್​ ರಾಘವೇಂದ್ರ ರಕ್ತದಾನ ಮಾಡಿದರು. ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿ ನೇತ್ರದಾನ ಮಾಡುವಂತೆ ಕರೆಕೊಟ್ಟರು.

Vijay Raghavendra donates blood
ರಕ್ತದಾನ ಮಾಡಿದ ನಟ ವಿಜಯ್​ ರಾಘವೇಂದ್ರ
author img

By

Published : Nov 25, 2021, 1:19 PM IST

Updated : Nov 25, 2021, 1:46 PM IST

ಚಾಮರಾಜನಗರ: ಪುನೀತ್ ರಾಜ್‍ಕುಮಾರ್ ಸ್ಮರಣಾರ್ಥ ನಟ ಹಾಗೂ ಅಪ್ಪು ಸೋದರ ಸಂಬಂಧಿ ವಿಜಯ್​ ರಾಘವೇಂದ್ರ ಇಂದು ಚಾಮರಾಜನಗರ ಮೆಡಿಕಲ್ ಕಾಲೇಜಿನ ರಕ್ತನಿಧಿ ಕೇಂದ್ರದಲ್ಲಿ ರಕ್ತದಾನ ಮಾಡಿದರು.

ರೋಟರಿ ಸಂಸ್ಥೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿ, ರೋಟರಿ ಸಂಸ್ಥೆ ನೀಡಿರುವ ಅತ್ಯಾಧುನಿಕ ಉಪಕರಣಗಳಿಗೆ ಚಾಲನೆ ನೀಡಿ, ಪುನೀತ್ ರಾಜ್‍ಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ವಿಜಯ್​ ರಾಘವೇಂದ್ರ ರಕ್ತದಾನ ಮಾಡಿದರು.

tribute to Puneeth Rajkumar: ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯ್​ ರಾಘವೇಂದ್ರ, ರಕ್ತದಾನದ ಖುಷಿ, ಬೇರೊಂದು ಜೀವ ಉಳಿಸಿದ ಸಮಾಧಾನ ಈಗ ನನ್ನಲ್ಲಿಲ್ಲ. ಅಪ್ಪು ಸ್ಮರಣೆ ಕಾರ್ಯಕ್ರಮಗಳು ನಡೆಯುತ್ತಿರುವುದನ್ನು ಕಂಡಾಗ ಗಂಟಲು ಕಟ್ಟಿದಂತಾಗುತ್ತದೆ. ಅಪ್ಪು ಫೋಟೋ ನೋಡಲು ನನಗೆ ಧೈರ್ಯವೇ ಬರುತ್ತಿಲ್ಲ. ಅವರ ವ್ಯಕ್ತಿತ್ವ, ಪ್ರೀತಿ ಎಷ್ಟರ ಮಟ್ಟಿಗಿದೆ ಎಂದು ಅವರು ನಮ್ಮನ್ನು ಬಿಟ್ಟು ಹೋದ ದಿನ ಅರ್ಥವಾಗಿದೆ.

ರಕ್ತದಾನ ಮಾಡಿದ ನಟ ವಿಜಯ್​ ರಾಘವೇಂದ್ರ

ಅವರ ಜೊತೆ ಬೆಳೆದಿರುವುದು, ಅವರ ಜೊತೆ ಕಲಿತಿರುವುದು ಈಗ ನಮಗೆ ಗೊತ್ತಾಗುತ್ತಿದೆ. ಅ.29 ರಿಂದ ನನ್ನನ್ನು ಸೇರಿದಂತೆ ಯಾರ ಕಣ್ಣಲ್ಲೂ ಆ ನೋವು ಮಾಸಿಲ್ಲ, ಅವರಿಲ್ಲ ಎಂಬ ಕೋಪ, ಅತೃಪ್ತಿ ಹೋಗಿಲ್ಲ. ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಡುತ್ತಿದ್ದ ಅಪ್ಪು ಎಲ್ಲರನ್ನೂ ಬೆಳೆಸುತ್ತಿದ್ದರು. ಆದ್ರೀಗ ಅವರ ಸ್ಮರಣೆಯಲ್ಲಿ ಕೆಲಸ ಮಾಡಬೇಕಾಯ್ತಲ್ಲ ಎಂಬ ನೋವು ಕಾಡುತ್ತಿದೆ ಎಂದು ಬೇಸರ ಹೊರಹಾಕಿದರು.

ಅವರ ಅಭಿಮಾನಿಯಾಗಿರಲು ನನಗೆ ಹೆಮ್ಮೆ:

ಅಪ್ಪು ತೀರಿ ಹೋದಾಗ ಜನರು ತೋರಿದ ಪ್ರೀತಿ ಬಹಳ ದೊಡ್ಡದು. ಬೇರೆ ನಟರಿಗೆ ಆ ಮಟ್ಟಿಗೆ ತೋರಿಸಿದ್ದು, ನಾನೆಲ್ಲೂ ನೋಡಿಲ್ಲ. ಕೊನೆಯವರೆಗೂ ನಾನು ಅವರ ಅಭಿಮಾನಿಯಾಗಿ ಇರಲು ಬಯಸುತ್ತೇನೆ. ಅವರ ಅಭಿಮಾನಿ ಎಂದು ಎದೆತಟ್ಟಿ ಹೇಳಿಕೊಳ್ಳುತ್ತೇನೆ ಎಂದರು.

ನೇತ್ರದಾನ ಮಾಡಿ:

ಎಲ್ಲರೂ ರಕ್ತದಾನ ಮಾಡಬೇಕು. ರಕ್ತದಾನನಿಂದ ಜೀವ ಉಳಿಸುವುದು ದೊಡ್ಡ ವಿಚಾರ. ಈ ರಕ್ತದಾನ ಎಂದರೆ ದೇವರಿಗೆ ಮುಡಿ ಕೊಟ್ಟಂತೆ ಎಂದರು. ಅದೇ ರೀತಿ ನೇತ್ರದಾನ ಮಾಡಿ ಎಂದು ಕರೆಕೊಟ್ಟರು.

ಕನ್ನಡಾಭಿಮಾನ:

ಇನ್ನು ಡಿಸಿ ಚಾರುಲತ ಸೋಮಲ್​ ಅವರು ಕನ್ನಡದಲ್ಲೇ ಮಾತನಾಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ಹೊರ ರಾಜ್ಯದ ಅಧಿಕಾರಿಗಳು ಕನ್ನಡದಲ್ಲಿ ಮಾತನಾಡಿದಾಗ ಮನಸ್ಸು ತುಂಬಿ ಬರುತ್ತದೆ ಎಂದರು.‌‌

ಸನ್ಮಾನಕ್ಕೆ ಒಲ್ಲೆ ಎಂದ ನಟ:

ನಟನಿಗೆ ಸನ್ಮಾನ ಮಾಡಲು ಮುಂದಾದಾಗ ಸನ್ಮಾನ ಮಾಡಿಸಿಕೊಳ್ಳುವ ಸಂದರ್ಭ ಇದಲ್ಲ, ಸನ್ಮಾನ ಮಾಡಿಸಿಕೊಳ್ಳುವ ಮನಸ್ಥಿತಿಯೂ ನನ್ನಲ್ಲಿ ಇಲ್ಲ ಎಂದು ಸನ್ಮಾನ ತಿರಸ್ಕರಿಸಿದರು.

ಇದನ್ನೂ ಓದಿ: ಶ್ರೀಮುರಳಿಯ 'ಮದಗಜ‌' ಸಿನಿಮಾದ ಹಿಂದಿ ಡಬ್ಬಿಂಗ್​ ರೈಟ್ಸ್​ 8 ಕೋಟಿಗೆ ಮಾರಾಟ..

Last Updated : Nov 25, 2021, 1:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.