ETV Bharat / state

ಗುಂಡ್ಲುಪೇಟೆ ಅಬಕಾರಿ ಇನ್ಸ್​​​​​​​ಪೆಕ್ಟರ್​​​​​​​​​ಗೆ ಎಸಿಬಿ ಶಾಕ್: ಮನೆ, ಕಚೇರಿ ಸೇರಿ 6 ಕಡೆ ದಾಳಿ

ಅಕ್ರಮ ಆಸ್ತಿಗಳಿಕೆ ಆರೋಪ ಸಂಬಂಧ‌ ಇಂದು ಬೆಳ್ಳಂಬೆಳ್ಳಗೆ ರಾಜ್ಯದ ವಿವಿಧೆಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅದರಂತೆ ಗುಂಡ್ಲುಪೇಟೆಯಲ್ಲಿ ಅಬಕಾರಿ ಇನ್​​ಸ್ಪೆಕ್ಟರ್​ ಚೆಲುವರಾಜ್ ಮನೆ, ಕಚೇರಿ ಸೇರಿದಂತೆ ಒಟ್ಟು 6 ಕಡೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ACB Raids on Gundlupet Excise inspector Cheluvaraj house and office
ಗುಂಡ್ಲುಪೇಟೆ ಅಬಕಾರಿ ಇನ್​​ಸ್ಪೆಕ್ಟರ್ ಚೆಲುವರಾಜ್ ಮನೆ ಮೇಲೆ ಎಸಿಬಿ ದಾಳಿ
author img

By

Published : Mar 16, 2022, 10:02 AM IST

ಚಾಮರಾಜನಗರ: ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಏಟು ಕೊಟ್ಟಿರುವ ಎಸಿಬಿ ಅಧಿಕಾರಿಗಳು ಗುಂಡ್ಲುಪೇಟೆ ಅಬಕಾರಿ ನಿರೀಕ್ಷಕ ಚೆಲುವರಾಜ್ ಮನೆ, ಕಚೇರಿ ಸೇರಿದಂತೆ ಒಟ್ಟು 6 ಕಡೆ ದಾಳಿ ನಡೆಸಿ ಶಾಕ್ ನೀಡಿದ್ದಾರೆ.

ಕಳೆದೊಂದು ವರ್ಷದಿಂದ ಗುಂಡ್ಲುಪೇಟೆಯಲ್ಲಿ ಅಬಕಾರಿ ಇನ್ಸ್​​​​ಪೆಕ್ಟರ್​ ಆಗಿ ಕಾರ್ಯ ನಿರ್ವಹಿಸುತ್ತಿರುವ ಚೆಲುವರಾಜ್ ವಿರುದ್ಧ ವ್ಯಾಪಕ ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ಕಚೇರಿ ಸೇರಿದಂತೆ ಎರಡು ಕಡೆ, ಮೈಸೂರು, ಚನ್ನರಾಯಪಟ್ಟಣ, ಮಂಡ್ಯ ಬೆಂಗಳೂರಲ್ಲಿ ಏಕಕಾಲದಲ್ಲಿ ದಾಳಿ‌ ನಡೆಸಲಾಗಿದೆ.

ಚಾಮರಾಜನಗರ ಎಸಿಬಿ ಡಿವೈಎಸ್ಪಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಒಟ್ಟು 10 ಮಂದಿ ಇನ್ಸ್​​​ಪೆಕ್ಟರ್​​ ಸೇರಿದಂತೆ 40 ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸಂಜೆವರೆಗೂ ದಾಳಿ ಮುಂದುವರೆಯುವ ಸಾಧ್ಯತೆ ಇದೆ.

ಇದನ್ನೂ ಓದಿ: ರಾಜ್ಯದ 75 ಕಡೆ ಎಸಿಬಿ ದಾಳಿ.. 18 ಸರ್ಕಾರಿ ಅಧಿಕಾರಿಗಳ ದಾಖಲೆ ಪರಿಶೀಲಿಸುತ್ತಿರುವ ACB ಸಿಬ್ಬಂದಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.