ಚಾಮರಾಜನಗರ: ಅಂತ್ಯಕ್ರಿಯೆ ಮುಗಿಸಿಕೊಂಡು ಹಿಂತಿರುಗುವಾಗ ಆಟೋದಿಂದ ಬಿದ್ದು ಮಹಿಳೆ ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದ ಸಮೀಪ ನಡೆದಿದೆ. ಹೊನ್ನೂರು ಗ್ರಾಮದ ದೊಡ್ಡಮ್ಮ(49) ಮೃತ ದುರ್ದೈವಿ.
ಗ್ರಾಮದಲ್ಲಿ ಚಾಮುಂಡಮ್ಮ ಎಂಬ ಮಹಿಳೆ ವಯೋಸಹಜ ಸಮಸ್ಯೆಗಳಿಂದ ಮೃತಪಟ್ಟಿದ್ದರು. ಇವರ ಅಂತ್ಯಕ್ರಿಯೆಗೆಂದು ಗ್ರಾಮದ ಹೊರ ವಲಯದಲ್ಲಿರುವ ಸ್ಮಶಾನಕ್ಕೆ ಇವರು ತೆರಳಿದ್ದರು. ಮೃತರ ಅಂತ್ಯಕ್ರಿಯೆ ಮುಗಿಸಿಕೊಂಡು ಆಟೋದಲ್ಲಿ ದೊಡ್ಡಮ್ಮ ವಾಪಸಾಗುತ್ತಿದ್ದಾಗ ಆಟೋದಿಂದ ಬಿದ್ದು ತೀವ್ರ ರಕ್ತಸ್ರಾವವಾಗಿ ಅಸುನೀಗಿದ್ದಾರೆ.
ಚಾಲಕ ವೇಗವಾಗಿ ಆಟೋ ಚಾಲನೆ ಮಾಡಿದ್ದೇ ಅವಘಡಕ್ಕೆ ಕಾರಣ ಎನ್ನಲಾಗಿದೆ. ಯಳಂದೂರು ಪೊಲೀಸರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮದುವೆಯಾದ 3 ತಿಂಗಳಿಗೆ ವ್ಯಕ್ತಿ ಆತ್ಯಹತ್ಯೆ; ಹೆಂಡತಿ ಕಿರುಕುಳ ಕಾರಣವೆಂದ ಪೋಷಕರು