ETV Bharat / state

ಚಾಮರಾಜನಗರದಲ್ಲಿ ಆನೆಗಳ ನಡುವೆ ಕಾದಾಟ: ಗಂಭೀರವಾಗಿ ಗಾಯಗೊಂಡ ಒಂಟಿ ಸಲಗ ಸಾವು - ಕಾಡಾನೆಗ ಕಾಳಗ

ಚಾಮರಾಜನಗರದಲ್ಲಿ ಎರಡು ಕಾಡಾನೆಗಳು ಕಾಳಗ ನಡೆಸಿ ಒಂದು ಆನೆ ಗಾಯದಿಂದ ಸಾವನ್ನಪ್ಪಿದೆ.

ಆನೆ ಕಾದಾಟ ಒಂದು ಸಲಗ ಸಾವು
ಆನೆ ಕಾದಾಟ ಒಂದು ಸಲಗ ಸಾವು
author img

By ETV Bharat Karnataka Team

Published : Sep 7, 2023, 10:44 AM IST

ಚಾಮರಾಜನಗರ : ಎರಡು ಆನೆಗಳ ನಡುವೆ ಕಾಳಗ ಏರ್ಪಟ್ಟು ಒಂದು ಆನೆ ತೀವ್ರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ಮಲೆಮಹದೇಶ್ವರ ವನ್ಯಜೀವಿಧಾಮದ ಕೊಳ್ಳೇಗಾಲ ಬಫರ್ ವಲಯದ ಜಾಗೇರಿಯ ದೊಡ್ಡ ಮಾಕಲಿ ಬೀಟ್​ನಲ್ಲಿ ನಡೆದಿದೆ. ಮೃತ ಗಂಡಾನೆಗೆ 15 ರಿಂದ 18 ವರ್ಷ ಆಗಿರಬಹುದು ಎಂದು ಅಂದಾಜು ಮಾಡಲಾಗಿದೆ.

ಇನ್ನು ಡಿಸಿಎಫ್ ಸಂತೋಷ್ ಕುಮಾರ್ ಘಟನೆ ಬಗ್ಗೆ,' ಎರಡು ಆನೆಗಳ ನಡುವೆ ಭಾರೀ ಕಾಳಗ ನಡೆದು ಪರಸ್ಪರ ಗುದ್ದಾಟದಲ್ಲಿ ಈ ಆನೆ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದೆ' ಎಂದು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೃತ ಆನೆಯ ದಂತಗಳನ್ನು ಅರಣ್ಯ ಇಲಾಖೆ ತಮ್ಮ ಸುಪರ್ದಿಗೆ ಪಡೆದುಕೊಂಡ ನಂತರ ಆನೆಯ ಶರೀರವನ್ನು ಹೂಳಲಾಗಿದೆ.

ಬಹು ಅಂಗಾಂಗ ವೈಫಲ್ಯದಿಂದ ಕೊಡಗಿನಲ್ಲಿ ಸಾವನ್ನಪ್ಪಿತ್ತು ಕಾಡಾನೆ: ಕಡಬ ತಾಲೂಕಿನ ಕೊಂಬಾರು ಸಮೀಪದಿಂದ 50 ವರ್ಷದ ಗಂಡು ಕಾಡಾನೆಯನ್ನು ಸೆರೆ ಹಿಡಿಯಲಾಗಿತ್ತು. ಆದರೆ ಆಗಸ್ಟ್​ ತಿಂಗಳಿನಲ್ಲಿ ಕೊಡಗಿನ ಮತ್ತಿಗೋಡು ಆನೆ ಶಿಬಿರದಲ್ಲಿ ಬಹು ಅಂಗಾಂಗ ವೈಫಲ್ಯ ಮತ್ತು ಕಾಲಿನ ವಾತ ಕಾಯಿಲೆಯಿಂದ ಮೃತಪಟ್ಟಿತ್ತು. ಈ ಆನೆ ಕಡಬದ ರೆಂಜಿಲಾಡಿಯ ನೈಲಾ ಎಂಬಲ್ಲಿ ಕಳೆದ ಫೆಬ್ರವರಿ 20ರಂದು ಬೆಳಗ್ಗೆ ಹಾಲು ಸಂಗ್ರಹ ಕೇಂದ್ರಕ್ಕೆ ಆಗಮಿಸುತ್ತಿದ್ದ ರಂಜಿತಾ (24) ಹಾಗೂ ಅವರ ರಕ್ಷಣೆಗೆ ಆಗಮಿಸಿದ ರಮೇಶ್ ರೈ (58) ಎಂಬವರ ಮೇಲೆ ಕಾಡಾನೆಗಳು ದಾಳಿ ಮಾಡಿ ಸಾಯಿಸಿದ್ದವು. ಇದರ ನಂತರದಲ್ಲಿ ಕೊಂಬಾರು ಭಾಗದ ಮಂಡೆಕರ ಎಂಬಲ್ಲಿಂದ ದಾಳಿ ಮಾಡಿದ ಆನೆ ಎಂದು ಸೆರೆ ಹಿಡಿಯಲಾಗಿದ್ದ ಗಂಡು ಕಾಡಾನೆಯನ್ನು ಕೊಡಗಿನ ಮತ್ತಿಗೋಡು ಆನೆ ಶಿಬಿರಕ್ಕೆ ಸೇರಿಸಲಾಗಿತ್ತು. ಈ ಕಾಡಾನೆ ಆಗಸ್ಟ್ 11ರ ಶುಕ್ರವಾರ ಮೃತಪಟ್ಟಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದರು.

ವಿಶ್ವ ಆನೆದಿನದಂದೆ ಚಾಮರಾಜನಗರದಲ್ಲಿ ಕಾಡಾನೆ ಸಾವು: ಆಗಸ್ಟ್​ 12 ಹನೂರು ತಾಲೂಕಿನ ಗೋಪಿನಾಥಂ ಗ್ರಾಮದಲ್ಲಿ ಅನುಮಾನಾಸ್ಪದವಾಗಿ‌ ಕಾಡಾನೆಯೊಂದು ಮೃತಪಟ್ಟಿದ್ದ ಘಟನೆ ನಡೆದಿತ್ತು. ನಾಗರಾಜು ಮತ್ತು ಸೆಲ್ವಂ ಎಂಬವರ ಜಮೀನಿನಲ್ಲಿ ಅಂದಾಜು 12 ವರ್ಷದ ಗಂಡಾನೆಯೊಂದು ಅನುಮಾನಾಸ್ಪದವಾಗಿ ಮೃತಪಟ್ಟಿತ್ತು. ಬಳಿಕ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದರು.

ಅಕ್ರಮ ವಿದ್ಯುತ್​ ಸಂಪರ್ಕಿಸಿ ಆನೆ ಸಾವು: ಮೈಸೂರಿನಲ್ಲಿ ಜೂನ್​ ತಿಂಗಳಿನಲ್ಲಿ ಈ ಘಟನೆ ನಡೆದಿತ್ತು. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ಡಿ ಬಿ.ಕುಪ್ಪೆ ಅರಣ್ಯ ವಲಯದ ಬಳಿ ಅದೇ ಗ್ರಾಮದ ಮೈಸೂರು-ಮಾನಂದವಾಡಿ ಹೆದ್ದಾರಿಯ ಪಕ್ಕದಲ್ಲಿದ್ದ ಉದಯ್ ಎಂಬುವವರು ತಮ್ಮ ಜಮೀನಿನಲ್ಲಿ ಸೋಲಾರ್ ತಂತಿ ಬೇಲಿಯನ್ನು ಅಳವಡಿಸಿದ್ದು, ಆ ಸೋಲಾರ್ ಬೇಲಿಗೆ ಅಕ್ರಮವಾಗಿ ತಮ್ಮ ಮನೆಯಿಂದ ವಿದ್ಯುತ್ ಸಂಪರ್ಕ ನೀಡಿದ್ದರು. ಇದರಿಂದ ಆ‌ನೆಯು ಆ ಸೋಲಾರ್ ತಂತಿಯ ವಿದ್ಯುತ್​ ತಗುಲಿ ಸಾವನ್ನಪ್ಪಿತ್ತು.

ಇದನ್ನೂ ಓದಿ: ಕೊಡಗು: ಅರಣ್ಯ ಇಲಾಖೆ ಸಿಬ್ಬಂದಿ ಬಲಿ ಪಡೆದಿದ್ದ ಕಾಡಾನೆ ಸೆರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.