ETV Bharat / state

ದಶಕಗಳಿಂದ ಈಡೇರದ ಸಮಸ್ಯೆ: ಮತದಾನ ಬಹಿಷ್ಕರಿಸಿದ ಕುಟುಂಬ

ವಾಸಿಸಲು ಮನೆ ಹಾಗೂ ಶೌಚಾಲಯ ನೀಡುವಂತೆ ಬೆಳಕಲವಾಡಿ ಗ್ರಾಮದ ಕುಟುಂಬವೊಂದು ಗ್ರಾ.ಪಂ ಅಧಿಕಾರಿಗಳ ಬಳಿ ಮನವಿ ಮಾಡಿದ್ದರು. ಆದರೆ ಅವಶ್ಯಕ ಸೌಕರ್ಯ ದೊರೆಯದ ಹಿನ್ನೆಲೆ ಈ ಬಾರಿಯ ಮತದಾನ ಬಹಿಷ್ಕರಿಸುವ ಮೂಲಕ ಕುಟುಂಬ ತಮ್ಮ ಆಕ್ರೋಶವನ್ನು ಹೊರಹಾಕಿದೆ.

A Family Boycotted the Polling
ಸಮಸ್ಯೆ ಈಡೇರದ ಕಾರಣ ಮತದಾನ ಬಹಿಷ್ಕರಿಸಿದ ಕುಟುಂಬ
author img

By

Published : Dec 22, 2020, 2:17 PM IST

ಚಾಮರಾಜನಗರ: ಮನೆ ಮತ್ತು ಶೌಚಾಲಯದ ಸೌಕರ್ಯದ ಬೇಡಿಕೆಯನ್ನು 2 ದಶಕಗಳಿಂದ ಈಡೇರಿಸದ ಹಿನ್ನೆಲೆ, ಕುಟುಂಬವೊಂದು ಚುನಾವಣೆ ಬಹಿಷ್ಕರಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಬೆಳಕಲವಾಡಿ ಗ್ರಾಮದಲ್ಲಿ ನಡೆದಿದೆ.

ಸಮಸ್ಯೆ ಈಡೇರದ ಕಾರಣ ಮತದಾನ ಬಹಿಷ್ಕರಿಸಿದ ಕುಟುಂಬ

ಗ್ರಾಮದ ಪರಿಶಿಷ್ಟ ಜಾತಿಯ ಚಿಕ್ಕಣ್ಣ ಎಂಬುವವರ ಕುಟುಂಬ ಮತ ಬಹಿಷ್ಕರಿಸಿದ್ದಾರೆ. ಹಲವು ಬಾರಿ ಮನೆ ಹಾಗೂ ಶೌಚಾಲಯ ನೀಡುವಂತೆ ಕುಟುಂಬ ಮನವಿ ಮಾಡಿದರೂ ಸೌಕರ್ಯ ನೀಡುವಲ್ಲಿ ಗ್ರಾಪಂ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.‌

ಇನ್ನು ಕಳೆದ ಎರಡು ಬಾರಿ ಅಧಿಕಾರಿಗಳು ಮನವೊಲಿಸಿ ಮತದಾನ ಮಾಡಿಸಿದ್ದರು. ಆದರೆ ಇದಾದ ಬಳಿಕವೂ ಬೇಡಿಕೆ ಈಡೇರದ ಕಾರಣ, ಈ ಬಾರಿ ಮತದಾನ ಬಹಿಷ್ಕಾರ ಮಾಡಿ ಮತಗಟ್ಟೆ ಬಳಿ ಸುಳಿಯದೇ ಆಕ್ರೋಶ ಹೊರಹಾಕಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.