ETV Bharat / state

ಚಾಮರಾಜನಗರ : ನಿಂತಿದ್ದ ಲಾರಿಯಲ್ಲಿತ್ತು ₹9 ಲಕ್ಷ.. ಮತ್ತೆ ಬಂದು ನೋಡುವಷ್ಟರಲ್ಲಿ..

author img

By

Published : Jan 22, 2022, 12:57 PM IST

ಕರ್ನಾಟಕ ರಾಜ್ಯದ ನೋಂದಣಿಯನ್ನು ಲಾರಿ ಹೊಂದಿತ್ತು ಎಂದು ತಿಳಿದು ಬಂದಿದೆ. ಕೇರಳ ಕಡೆಗೆ ಲಾರಿ ತೆರಳಿರುವ ಮಾಹಿತಿ ಪೊಲೀಸರಿಗಿದೆ. ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಲಾರಿ ಹಾಗೂ ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ..

money found in lorry at Chamarajanagar, Chamarajanagar crime news, Gundlupete Police Station, ಚಾಮರಾಜನಗರದ ಲಾರಿಯಲ್ಲಿ ಹಣ ಪತ್ತೆ, ಚಾಮರಾಜನಗರ ಅಪರಾಧ ಸುದ್ದಿ, ಗುಂಡ್ಲುಪೇಟೆ ಪೊಲೀಸ್​ ಠಾಣೆ,
ನಿಂತಿದ್ದ ಲಾರಿಯಲ್ಲಿ 9 ಲಕ್ಷ ಪತ್ತೆ

ಚಾಮರಾಜನಗರ : ಪಾರ್ಕಿಂಗ್ ಲೈಟ್ ಹಾಕಿಕೊಂಡು ನಿಂತಿದ್ದ ಲಾರಿಯಲ್ಲಿ ದಾಖಲಾತಿಯಿಲ್ಲದ 9 ಲಕ್ಷ ರೂ. ಪತ್ತೆಯಾಗಿರುವ ಘಟನೆ ಗುಂಡ್ಲುಪೇಟೆ ಹೊರವಲಯದ ಸುರಭಿ ಹೋಟೆಲ್ ಸಮೀಪ ಶುಕ್ರವಾರ ಮುಂಜಾನೆ ನಡೆದಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.

ಗುಂಡ್ಲುಪೇಟೆ ಠಾಣೆಯ ಕಾನ್ಸ್‌ಟೇಬಲ್ ಪವನ್ ಎಂಬುವರು ರಾತ್ರಿ ಗಸ್ತಿನಲ್ಲಿದ್ದ ವೇಳೆ ಲಾರಿಯ ಬಾಗಿಲುಗಳು ತೆರೆದು ಪಾರ್ಕಿಂಗ್ ಲೈಟ್ ಆನ್‌ ಆಗಿರುವುದನ್ನು ಗಮನಿಸಿದ್ದಾರೆ. ಎಷ್ಟೇ ಕೂಗಿ, ತಡಕಾಡಿದರೂ ಯಾರೂ ಇಲ್ಲದ್ದನ್ನು ಗಮನಿಸಿ ಲಾರಿ ಪರಿಶೀಲಿಸಿದಾಗ ಕವರಿನಲ್ಲಿ 9 ಲಕ್ಷ ರೂ. ಹಣ ಸಿಕ್ಕಿದೆ.

ಹಣ ವಶಪಡಿಸಿಕೊಂಡು ಅರ್ಧ-ಮುಕ್ಕಾಲು ಗಂಟೆ ಕಾದ ಕಾನ್ಸ್‌ಟೇಬಲ್ ಗಸ್ತು ಮುಂದುವರೆಸಿದ್ದಾರೆ‌. ಬಳಿಕ, ಒಂದು ತಾಸು ಬಿಟ್ಟು ಬಂದು ನೋಡುವಷ್ಟರಲ್ಲಿ ಲಾರಿಯೇ ನಾಪತ್ತೆಯಾಗಿದೆ.

ಕರ್ನಾಟಕ ರಾಜ್ಯದ ನೋಂದಣಿಯನ್ನು ಲಾರಿ ಹೊಂದಿತ್ತು ಎಂದು ತಿಳಿದು ಬಂದಿದೆ. ಕೇರಳ ಕಡೆಗೆ ಲಾರಿ ತೆರಳಿರುವ ಮಾಹಿತಿ ಪೊಲೀಸರಿಗಿದೆ. ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಲಾರಿ ಹಾಗೂ ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.