ETV Bharat / state

ಮತ ಚಲಾವಣೆಗೂ ಮುನ್ನ 8 ಮಂದಿ ನಿಧನ.. ಚಾಮರಾಜನಗರದಲ್ಲಿ 313 ಮಂದಿಯಿಂದ ಮನೆಯಲ್ಲೇ ಮತದಾನ - ಮತ ಚಲಾವಣೆ‘

80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮತ್ತು ವಿಶೇಷಚೇತನರಿಗೆ ಈ ಬಾರಿ ಚುನಾವಣಾ ಆಯೋಗವು ಮನೆಯಿಂದಲೇ ಮತ ಚಲಾಯಿಸಲು ಅವಕಾಶ ನೀಡಿದ್ದು, ಜಿಲ್ಲೆಯಲ್ಲಿ 329 ಮಂದಿ ಮನೆಯಿಂದಲೇ ಮತದಾನ ಮಾಡಲು ಕೋರಿಕೆ ಸಲ್ಲಿಸಿದ್ದರು.

8-people-died-before-polling-313-people-voted-at-home-in-chamarajanagar
ಮತ ಚಲಾವಣೆಗೂ ಮುನ್ನ 8 ಮಂದಿ ಮರಣ, ಚಾ.ನಗರದಲ್ಲಿ 313 ಮಂದಿಯಿಂದ ಮನೆಯಲ್ಲೇ ಮತದಾನ
author img

By

Published : Apr 29, 2023, 9:05 PM IST

ಚಾಮರಾಜನಗರ: ಜಿಲ್ಲೆಯಲ್ಲಿ ಮನೆಯಿಂದಲೇ ಮತದಾನ ಮಾಡಲು ಕೋರಿಕೆ ಸಲ್ಲಿಸಿದ್ದ 329 ಹಿರಿಯ ನಾಗರಿಕರು ಹಾಗೂ ವಿಶೇಷಚೇತನರ ಮತದಾರರ ಪೈಕಿ 313 ಮಂದಿ ಇಂದು ತಮ್ಮ ಹಕ್ಕು ಚಲಾಯಿಸಿದ್ದಾರೆ. ಹನೂರು ವಿಧಾನಸಭಾ ಕ್ಷೇತ್ರದಲ್ಲಿ 80 ವರ್ಷ ಮೇಲ್ಪಟ್ಟ 50 ಹಿರಿಯ ನಾಗರಿಕರು, 25 ವಿಶೇಷಚೇತನರು ಮತ ಚಲಾಯಿಸಿದ್ದಾರೆ.

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ 80 ವರ್ಷ ಮೇಲ್ಪಟ್ಟ 49 ಹಿರಿಯ ನಾಗರಿಕರು, 31 ವಿಶೇಷಚೇತನರು, ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 80 ವರ್ಷ ಮೇಲ್ಪಟ್ಟ 51 ಮಂದಿ, 26 ವಿಶೇಷಚೇತನರು, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 80 ವರ್ಷ ಮೇಲ್ಪಟ್ಟ 59 ಮಂದಿ, 22 ವಿಶೇಷಚೇತನರು ಮತ ಚಲಾಯಿಸಿದ್ದಾರೆ.

ಕೋರಿಕೆ ಅರ್ಜಿ ಸಲ್ಲಿಸಿ ನೋಂದಣಿಯಾದ ಅವಧಿಯ ಬಳಿಕ 8 ಮಂದಿ ಹಿರಿಯ ನಾಗರಿಕರು ಮೃತಪಟ್ಟಿದ್ದಾರೆ. ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಇಬ್ಬರು ಮನೆಯಲ್ಲಿ ಲಭ್ಯವಿಲ್ಲದೆ ಹೊರಗೆ ತೆರಳಿದ್ದಾರೆ. ಮೂವರು ಮತದಾನ ಮಾಡಲು ನಿರಾಕರಿಸಿದ್ದಾರೆ. ಇನ್ನುಳಿದ ಎಂಟು ಮಂದಿಗೆ ಮೇ 6ರಂದು ಮತ್ತೊಮ್ಮೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ತಿಳಿದುಬಂದಿದೆ.

ಮದ್ಯ ಮಾರಾಟ ನಿಷೇಧಿಸಿ ಡಿಸಿ ಆದೇಶ: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಮತದಾನ ಹಾಗೂ ಮತ ಎಣಿಕೆಯು ಶಾಂತ ರೀತಿಯಲ್ಲಿ ಮತ್ತು ಮುಕ್ತವಾಗಿ ನಡೆಸಲು ಜಿಲ್ಲೆಯಾದ್ಯಂತ ಎಲ್ಲಾ ರೀತಿಯ ಮದ್ಯದಂಗಡಿ (ಪರವಾನಿಗೆ) ಗಳನ್ನು ಮೇ 8ರಂದು ಸಂಜೆ 5 ರಿಂದ ಮತದಾನ ದಿನವಾದ ಮೇ 10ರ ಮಧ್ಯರಾತ್ರಿ 12 ಗಂಟೆಯವರೆಗೆ ಹಾಗೂ ಮತ ಎಣಿಕೆ ನಿಮಿತ್ತ ಮೇ 12ರ ಮಧ್ಯರಾತ್ರಿಯಿಂದ ಮೇ 13ರ ಮಧ್ಯರಾತ್ರಿಯವರೆಗೆ ಮುಚ್ಚಲು ಹಾಗೂ ಯಾವುದೇ ರೀತಿಯ ಮದ್ಯದ ಸಾಗಾಣಿಕೆ, ಮಾರಾಟ, ಶೇಖರಣೆ ಹಾಗೂ ಹಂಚಿಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಆದೇಶ ಹೊರಡಿಸಿದ್ದಾರೆ.

ಯಾವುದೇ ರೀತಿಯಲ್ಲಿ ಸನ್ನದು ಹೊಂದಿರುವ ಬಾರ್, ಕ್ಲಬ್, ರೆಸ್ಟೋರೆಂಟ್, ಸ್ಟಾರ್ ಹೋಟೆಲ್ ಇತ್ಯಾದಿಗಳಲ್ಲಿ ಹಾಗೂ ಹೋಟೆಲ್, ಡಾಬಾ ಅಥವಾ ಯಾವುದೇ ತರಹದ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಮಾರಾಟ ಮತ್ತು ಸರಬರಾಜು ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಮದ್ಯ ನೀಷೆದಿತ ದಿನಗಳಂದು ಘೋಷಿಸಿರುವ ಸಮಯದಲ್ಲಿ ಮದ್ಯ ಸಾಗಾಣಿಕೆ, ಮಾರಾಟ, ಶೇಖರಣೆ, ಹಂಚಿಕೆಯು ಅಪರಾಧವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

300 ಕೋಟಿ ರೂ ಗಡಿ ದಾಟಿದ ಒಟ್ಟು ಜಪ್ತಿ ಮೊತ್ತ: ಚುನಾವಣೆಗೆ ಇನ್ನು 12 ದಿ‌ನಗಳು ಬಾಕಿ ಇರುವಾಗಲೇ ಬರೋಬ್ಬರಿ 302 ಕೋಟಿ ರೂ. ಅಕ್ರಮ ನಗದು, ಮದ್ಯ, ಉಡುಗೊರೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿರುವ ಬಗ್ಗೆ ಚುನಾವಣಾ ಆಯೋಗ ಪ್ರಕಟಣೆ ಹೊರಡಿಸಿದೆ. ವಿಧಾನಸಭೆ ಚುನಾವಣೆ ಘೋಷಣೆಯಾದಾಗಿನಿಂದ ಈವರೆಗೆ ಚುನಾವಣಾ ಆಯೋಗ ಸುಮಾರು 302.78 ಕೋಟಿ ರೂ. ಮೌಲ್ಯದ ನಗದು, ಮದ್ಯ ಮತ್ತು ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಇದನ್ನೂ ಓದಿ: ರಾಜ್ಯ ವಿಧಾನಸಭೆ ಚುನಾವಣೆ: ಮತದಾನ ಮಾಡಿದ ಹಿರಿಯ ನಟಿ ಡಾ. ಎಂ. ಲೀಲಾವತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.