ಚಾಮರಾಜನಗರ: ಇಂದು ಜಿಲ್ಲೆಯಲ್ಲಿ 51 ಕೋವಿಡ್ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ.
ಇಂದು ಕಂಡು ಬಂದಿರುವ ಕೊರೊನಾ ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2581 ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿಂದು ಸುಮಾರು 38 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ ಜಿಲ್ಲೆಯಲ್ಲಿ 510 ಸಕ್ರಿಯ ಪ್ರಕರಣಗಳಿವೆ.
ಅದರಲ್ಲಿ 139 ಮಂದಿ ಹೋಂ ಐಸೋಲೇಷನ್ ನಲ್ಲಿದ್ದಾರೆ. 17 ಮಂದಿ ಐಸಿಯುನಲ್ಲಿ ದಾಖಲಾಗಿದ್ದು, 585 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.
ಇಂದಿನ ಸೋಂಕಿತರಲ್ಲಿ 60 ವರ್ಷ ಮೇಲ್ಪಟ್ಟ 9 ಮಂದಿ ಇದ್ದು 6 ಮಂದಿ ಮಕ್ಕಳಿದ್ದಾರೆ.