ಚಾಮರಾಜನಗರ : ಮೊದಲ ಹಂತದಲ್ಲಿ ನಡೆಯುವ ಒಟ್ಟು 77 ಗ್ರಾಮ ಪಂಚಾಯತ್‌ಗಳಿಗೆ 3721 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಕಣಕ್ಕಿಳಿದಿದ್ದು, ಕೊನೆಯ ದಿನವಾದ ಶುಕ್ರವಾರ 1912 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ಚಾಮರಾಜನಗರ ತಾಲೂಕಿನಲ್ಲಿ 2267 ಮತ್ತು ಗುಂಡ್ಲುಪೇಟೆ 1454 ನಾಮಪತ್ರ ಸಲ್ಲಿಕೆಯಾಗಿವೆ. ಚಾಮರಾಜನಗರ ತಾಲೂಕಿನ 43, ಗುಂಡ್ಲುಪೇಟೆಯ 34 ಗ್ರಾಮ ಪಂಚಾಯತ್‌ಗಳು ಸೇರಿದಂತೆ ಒಟ್ಟು 77 ಗ್ರಾಮ ಪಂಚಾಯತ್‌ಗಳಿಗೆ ಡಿಸೆಂಬರ್ 22ರ ಬೆಳಗ್ಗೆ 7 ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಡಿಸೆಂಬರ್ 14 ಕಡೆಯ ದಿನವಾಗಿದೆ.
ಎರಡನೇ ಹಂತದ ಚುನಾವಣೆ : 2ನೇ ಹಂತದ ಚುನಾವಣೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುಕ್ರವಾರದಿಂದ ಆರಂಭವಾಗಿದ್ದು, ಮೊದಲ ದಿನ ಯಳಂದೂರು ತಾಲೂಕಿನಲ್ಲಿ 15, ಕೊಳ್ಳೇಗಾಲ ತಾಲೂಕಿನ 20 ಹಾಗೂ ಹನೂರು ತಾಲೂಕಿನಲ್ಲಿ 21 ನಾಮಪತ್ರ ಸಲ್ಲಿಕೆಯಾಗಿವೆ.
ಯಳಂದೂರು ತಾಲೂಕಿನ 12 ಗ್ರಾಮ ಪಂಚಾಯತ್‌ಯ 71 ಕ್ಷೇತ್ರಗಳ 189 ಸ್ಥಾನಗಳಿಗೆ, ಕೊಳ್ಳೇಗಾಲ ತಾಲೂಕಿನ 16 ಗ್ರಾಮ ಪಂಚಾಯತ್‌ಗಳ 117 ಕ್ಷೇತ್ರಗಳ 308 ಸ್ಥಾನಗಳಿಗೆ ಮತ್ತು ಹನೂರು ತಾಲೂಕಿನ 24 ಗ್ರಾಮ ಪಂಚಾಯತ್‌ಗಳ 159 ಕ್ಷೇತ್ರಗಳ 419 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.