ಕೊಳ್ಳೇಗಾಲ: ಗುಡಿಸಲೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಭಾರಿ ಪ್ರಮಾಣದ ಹಸಿ ಮಾಕಳಿ ಬೇರನ್ನು ಜಾಗೇರಿ ಬಳಿ ಅರಣ್ಯ ಇಲಾಖೆ ವಶಕ್ಕೆ ಪಡೆದುಕೊಂಡಿದೆ.
ತಾಲೂಕಿನ ಜಾಗೇರಿ ಸಮೀಪದ ಆಲದಮರ ದೊಡ್ಡಿಯ ಗುಡಿಸಲೊಂದರಲ್ಲಿ ಮಣಿ ಎಂಬಾತ ಮಾಕಳಿ ಬೇರು ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಎನ್ನಲಾಗ್ತಿದೆ. ಈ ಕುರಿತು ಖಚಿತ ಮಾಹಿತಿ ಮೇರೆಗೆ ಅರಣ್ಯ ಆರ್ಎಫ್ಒ ಪ್ರವೀಣ್ ತಂಡ ಸ್ಥಳಕ್ಕೆ ಭೇಟಿ ನೀಡಿ ದಾಳಿ ನಡೆಸಿದ್ದಾರೆ. ದಾಳಿ ವೇಳೆ 300 ಕೆಜಿ ಹಸಿ ಮಾಕಳಿ ಬೇರನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿ ಪರಾರಿಯಾಗಿದ್ದಾನೆ.
ಈ ಸಂಬಂಧ ಕೊಳ್ಳೇಗಾಲ ಬಫರ್ ವಲಯಾಧಿಕಾರಿಗಳ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ.