ETV Bharat / state

130 ರೂಪಾಯಿ ಆಸೆ ತೋರಿಸಿ 1 ಲಕ್ಷ ದೋಚಿದ ಐನಾತಿ ಕಳ್ಳರು

ಕಾಲ ಕೆಳಗೆ 10 ರೂಪಾಯಿ ಮುಖಬೆಲೆಯ 13 ನೋಟು ಬೀಳಿಸಿ ನಿಮ್ಮ ಹಣ ಬಿದ್ದಿದೆ ನೋಡಿ ಎಂದು ಅವರಿಗೆ ತೋರಿಸಿದ್ದಾರೆ. ಈ ನಡುವೆ ಬೈಕ್​​ ಮೇಲಿದ್ದ ಹಣದ ಬ್ಯಾಗ್ ಎಗರಿಸಿ ಅಲ್ಲಿಂದ ಪರಾರಿಯಾಗಿದ್ದಾರೆ.

3-thieves-robbed-1-lakhs-rupees-from-a-man-in-kollegala
130 ರೂಪಾಯಿ ಆಸೆ ತೋರಿಸಿ 1 ಲಕ್ಷ ದೋಚಿದ ಐನಾತಿ ಕಳ್ಳರು
author img

By

Published : Apr 6, 2021, 9:44 PM IST

ಕೊಳ್ಳೇಗಾಲ (ಚಾಮರಾಜನಗರ): ಬ್ಯಾಂಕ್​ನಲ್ಲಿ ಹಣ ತೆಗೆದು ವ್ಯಕ್ತಿಯೊಬ್ಬ ತೆರಳುವಾಗ ದುಷ್ಕರ್ಮಿಗಳು ಉಪಾಯದಿಂದ 1 ಲಕ್ಷ ಹಣ ದೋಚಿರುವ ಘಟನೆ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ಪಟ್ಟಣದ ನಿವಾಸಿ ನಿವೃತ್ತ ಪ್ರಾಧ್ಯಾಪಕ ಹಾಗೂ ರಾಷ್ಟ್ರೀಯ ಬಸವ ದಳ ತಾಲೂಕು ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನಪ್ಪ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದಾರೆ. ಇವರು ಇಂದು ಮಧ್ಯಾಹ್ನ ಸುಮಾರು 1.45 ಸಮಯದಲ್ಲಿ ಅಚ್ಗಾಳ್ ಸರ್ಕಲ್ ಬಳಿಯ ಎಸ್​​ಬಿಐ ಬ್ಯಾಂಕ್​ನಿಂದ 1ಲಕ್ಷ ರೂ. ಡ್ರಾ ಮಾಡಿ ತಮ್ಮ ದ್ವಿಚಕ್ರ ವಾಹನದ ಹ್ಯಾಂಡಲ್​​​ಗೆ ಹಣದ ಬ್ಯಾಗ್ ಇಟ್ಟು ಹೊರಡುವ ವೇಳೆ ಮೂವರು ಕಳ್ಳರು ಹಣ ಎಗರಿಸಿದ್ದಾರೆ.

ಕಾಲ ಕೆಳಗೆ 10 ರೂಪಾಯಿ ಮುಖಬೆಲೆಯ 13 ನೋಟು ಬೀಳಿಸಿ ನಿಮ್ಮ ಹಣ ಬಿದ್ದಿದೆ ನೋಡಿ ಎಂದು ಅವರಿಗೆ ತೋರಿಸಿದ್ದಾರೆ. ಈ ನಡುವೆ ಬೈಕ್​​ ಮೇಲಿದ್ದ ಹಣದ ಬ್ಯಾಗ್ ಎಗರಿಸಿ ಅಲ್ಲಿಂದ ಪರಾರಿಯಾಗಿದ್ದಾರೆ.

ಸದ್ಯ ಈ ಬಗ್ಗೆ ಪೊಲೀಸರಿಗೆ ಮಲ್ಲಿಕಾರ್ಜುನಪ್ಪ ದೂರು ನೀಡಿದ್ದು, ವಿಷಯ ತಿಳಿದ ಪೊಲೀಸರು ಮೊಬೈಲ್ ಟವರ್ ಲೊಕೇಶನ್ ಪರಿಶೀಲಿದಾಗ ಆರೋಪಿಗಳು ಯಳಂದೂರು ಕಡೆ ಹೋಗಿರುವುದು ಪತ್ತೆಯಾಗಿದೆ. ಪೊಲೀಸರು ಈ ಜಾಡು ಹಿಡಿದು ಕಳ್ಳರ ಪತ್ತೆಗೆ ಕ್ರಮಕೈಗೊಂಡಿದ್ದಾರೆ.

ಇದನ್ನೂ ಓದಿ: ಎಸಿಬಿ ದಾಳಿ: ಸ್ಟೋವ್​​ ಮೇಲಿಟ್ಟು ಐದು ಲಕ್ಷ ನಗದು ಸುಟ್ಟುಹಾಕಿದ ಭೂಪ... ಎಲ್ಲಿ ಅಂತೀರಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.