ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ 22 ವರ್ಷಗಳ ಬಳಿಕ ನಡೆದ ಪಕ್ಷಿ ಗಣತಿಯ ವಿವರವನ್ನು ಅರಣ್ಯ ಇಲಾಖೆ ನೀಡಿದ್ದು, ಈ ಗಣತಿಯಲ್ಲಿ 289 ಪಕ್ಷಿ ಪ್ರಬೇಧಗಳನ್ನು ಗುರುತಿಲಾಗಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು ಒಟ್ಟು 1020 ಚ.ಕಿ.ಮೀ. ವಿಸ್ತೀರ್ಣ ಹೊಂದಿದ್ದು, 13 ವಲಯಗಳಿವೆ. ಫೆ. 5ರಿಂದ 7ರವರೆಗೆ ಪಕ್ಷಿ ಗಣತಿ ನಡೆಸಿತ್ತು. ಇದರಲ್ಲಿ ಇದೇ ಮೊದಲ ಬಾರಿಗೆ ಗ್ರೇಟ್ ಹಾರ್ನ್ ಬಿಲ್ ಪಕ್ಷಿ ಕಾಣಿಸಿಕೊಂಡಿದೆ. ಕರ್ನಾಟಕ ಪಕ್ಷಿ ಗಣತಿಯಲ್ಲಿಲ್ಲರದ lesser fish eagle, tawny bellied babbler ಪಕ್ಷಿಗಳು ಕಾಣಿಸಿಕೊಂಡಿವೆ.

ಇಷ್ಟೇ ಅಲ್ಲದೇ ಅಪರೂಪ ಮತ್ತು ಅಳವಿನಂಚಿನಲ್ಲಿರುವ Bar headed goose - ಪಟ್ಟೆ ತಲೆ ಬಾತು, Crested tree swift -ಮರಬಾನಾಡಿ Northern pintail - ಸೂಜಿಬಾಲದ ಬಾತು, Temminck's stint - ಹಸಿರಗಾಲಿನ ಕಡಲುಲ್ಲಂಕಿ, Stork billed kingfisher - ಹೆಮ್ಮಿಂಚುಳ್ಳಿ, Black caped blue kingfisher - ಕರಿತಲೆ ಮಿಂಚಿಳ್ಳಿ, Verditer flycatcher - ನೀಲಿ ನೊಣಹಿಡುಕ, Lesser yellow naped woodpecker - ಹಳದಿ ಹಿಂಗತ್ತಿನ ಮರಕುಟಿಗ ಪಕ್ಷಿಗಳು ಪತ್ತೆಯಾಗಿದೆ.

ಈ ಹಿಂದೆ ಬಂಡೀಪುರ ಹುಲಿ ಯೋಜನೆ ವಿಭಾಗ ಮೈಸೂರು ಪ್ರಾಂತ್ಯಕ್ಕೆ ಒಳಪಟ್ಟಿದ್ದಾಗ 113 ಪ್ರಭೇದಗಳು ಮಾತ್ರ ದಾಖಲಾಗಿತ್ತು. 1939ರ ನ. 25ರಿಂದ 26ರವರೆಗೆ ಡಾ. ಸಲೀಂ ಆಲಿ ಬಂಡೀಪುರ ಹುಲಿ ಯೋಜನೆ ವಿಭಾಗದಲ್ಲಿ 134 ಪ್ರಭೇದದ ಪಕ್ಷಿಗಳನ್ನು ಗುರುತಿಸಿದ್ದರು. 1974ರಲ್ಲಿ ಬಂಡೀಪುರ ಹುಲಿ ಯೋಜನೆಯ ನಿರ್ವಹಣೆ ಯೋಜನೆ ಸಿದ್ಧಪಡಿಸುವಾಗ 179 ಪ್ರಭೇದದ ಪಕ್ಷಿಗಳನ್ನು ದಾಖಲು ಮಾಡಲಾಗಿತ್ತು. 1977ರಲ್ಲಿ ವನ್ಯಜೀವಿ ತಜ್ಞ ಕೃಪಾಕರ ಸೇನಾತಿ 225 ಪ್ರಭೇದದ ಪಕ್ಷಿಗಳನ್ನು ಗುರುತಿಸಿದ್ದರು.
1998 ರಲ್ಲಿ ಡಾ. ಅಮೀನ್ ಅಹಮ್ಮದ್ ಹಾಗೂ ಕೆ.ಏಕಾಂತಪ್ಪ 123 ಪ್ರಭೇದದ ಪಕ್ಷಿಗಳನ್ನು ಗುರುತಿಸಿ ದಾಖಲು ಮಾಡಿದ್ದರು.