ETV Bharat / state

ಅನ್ನನಾಳದ ಸೋಂಕು: ಬಂಡೀಪುರದಲ್ಲಿ 20 ವರ್ಷದ ಸಾಕಾನೆ ಸಾವು

author img

By

Published : Sep 23, 2022, 7:11 PM IST

ಅನ್ನನಾಳದ ಸೋಂಕಿನ ತೊಂದರೆಯಿಂದ ಬಳಲುತ್ತಿದ್ದ, ಸಾಕಾನೆ ಗಣೇಶ ಮೃತಪಟ್ಟಿದೆ. ಬಂಡೀಪುರ ಕ್ಯಾಂಪಸ್‍ನಲ್ಲಿ ಕಳೆದ ಐದು ದಿನಗಳಿಂದ ಚಿಕಿತ್ಸೆ ನೀಡುತ್ತಿದ್ದರೂ, ಚಿಕಿತ್ಸೆಗೆ ಸ್ಪಂದಿಸದೇ ಸಾವಿಗೀಡಾಗಿದೆ.

20 year old elephant died in Bandipur
ಬಂಡೀಪುರದಲ್ಲಿ 20 ವರ್ಷದ ಸಾಕಾನೆ ಸಾವು

ಚಾಮರಾಜನಗರ: ಅನಾರೋಗ್ಯದಿಂದ ಸಾಕಾನೆಯೊಂದು ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಆನೆ ಶಿಬಿರದಲ್ಲಿ ನಡೆದಿದೆ. ಗಣೇಶ (20) ಎಂಬ ಗಂಡಾನೆ ಮೃತಪಟ್ಟಿದೆ.

ಒಂದು ವಾರದ ಹಿಂದೆ ಗಂಟಲಿನ ಅನ್ನನಾಳದ ತೊಂದರೆಯಿಂದ ಇದು ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದೆ. ಕಲ್ಕರೆ ವಲಯದ ರಾಂಪುರ ಆನೆ ಶಿಬಿರದಲ್ಲಿ ಆನೆಗೆ ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ಬಳಿಕ ರಾಂಪುರ ಆನೆ ಶಿಬಿರದಿಂದ ಬಂಡೀಪುರ ಕ್ಯಾಂಪಸ್‍ಗೆ ಕರೆತರಲಾಗಿತ್ತು.

ಇದನ್ನೂ ಓದಿ: ಹೆಚ್‌.ಡಿ.ಕೋಟೆ: ಗ್ರಾಮಕ್ಕೆ ನುಗ್ಗಿ ಒಂಟಿ ಸಲಗ ರಂಪಾಟ; ಮನೆ, ಎತ್ತಿನ ಗಾಡಿ ಜಖಂ

ಬಂಡೀಪುರ ಕ್ಯಾಂಪಸ್‍ನಲ್ಲಿ ಕಳೆದ ಐದು ದಿನಗಳಿಂದ ಚಿಕಿತ್ಸೆ ಕೊಟ್ಟರು ಆನೆ ಸ್ಪಂದಿಸದ ಕಾರಣ ಮೃತಪಟ್ಟಿದೆ. ‌ 20 ವರ್ಷ ವಯಸ್ಸಿನ ಗಣೇಶ ಹುಲಿ ಸೆರೆ ಸೇರಿದಂತೆ ಹಲವು ಕಾರ್ಯಾಚರಣೆಯಲ್ಲಿ ಈ ಆನೆ ಭಾಗವಹಿಸಿತ್ತು. ಸಾಕಾನೆ ಗಣೇಶನ ಅಂತ್ಯಕ್ರಿಯೆ ಬಂಡೀಪುರ ವಲಯದಲ್ಲಿ ನಡೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.